ಬಿಜೆಪಿಯಲ್ಲಿ ಪಯರ್ಾಯ ನಾಯಕತ್ವದ ಮಾತು

ಬೆಂಗಳೂರು 09: 2018ರ ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ನಂತರ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾತು ಕೇಳಿಬರಲಾರಂಭಿಸಿದೆ. 

ಈಗ ಯಡಿಯೂರಪ್ಪ ಅವರಿಗೆ ಪಯರ್ಾಯ ನಾಯಕ ಯಾರು? ಎಂಬ ಯಕ್ಷ ಪ್ರಶ್ನೆ ಮೂಡಿದೆ. ಬಿಜೆಪಿ ನಾಯಕರು ತಮ್ಮ ತಪ್ಪುಗಳಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತಯೂ ಬಿಜೆಪಿ ಮುಂದಿದೆ. ಲೋಕಸಭೆ ಚುನಾವಣೆ ಎದುರಾಗಿರುವುದರಿಂದ ನಾಯಕತ್ವ ಬದಲಾವಣೆ ದೂರದ ಮಾತಾಗಿದೆ.

ಕನರ್ಾಟಕ ವಿಧಾನಸಭೆ ಚುನಾವಣೆ 2018ರ ಬಳಿಕ ರಾಜ್ಯದಲ್ಲಿ ಬಿಜೆಪಿ ಸಕರ್ಾರ ರಚನೆ ಮಾಡುವ ಪ್ರಯತ್ನ ವಿಫಲವಾಗಿದೆ. ಈಗ ಉಪ ಚುನಾವಣೆಯಲ್ಲಿ ಜಮಖಂಡಿ ಮತ್ತು ಬಳ್ಳಾರಿಯಲ್ಲಿ ಸೋಲಾಗಿದೆ. 2019ರ ಲೋಕಸಭಾ ಚುನಾವಣೆಯೊಳಗೆ ಬಿಜೆಪಿ ತನ್ನ ತಪ್ಪುಗಳನ್ನು ತಿದ್ದಿಕೊಂಡು ಮುಂದೆ ಸಾಗಿದರೆ ಹೆಚ್ಚಿನ ಸ್ಥಾನಗಳನ್ನುಗಳಿಸಬಹುದಾಗಿದೆ.

ಯಡಿಯೂರಪ್ಪ ನಾಯಕತ್ವ ಬದಲಾವಣೆ ಇಲ್ಲ

ಕನರ್ಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ಬಗ್ಗೆ ಚಚರ್ೆ ನಡೆಯಬಹುದು. ಆದರೆ, ಯಡಿಯೂರಪ್ಪ ಅವರಷ್ಟು ಪ್ರಭಾವ ಹೊಂದಿರುವ ನಾಯಕರು ಯಾರೂ ಇಲ್ಲ. ಆದ್ದರಿಂದ, ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ. ಯಡಿಯೂರಪ್ಪ ಅವರನ್ನು ಉಳಿಸಿಕೊಳ್ಳುವ ಜೊತೆಗೆ ಹೊಸ ನಾಯಕರನ್ನು ರೂಪಿಸುವ ಜವಾಬ್ದಾರಿಯೂ ಪಕ್ಷದ ಮೇಲಿದೆ.

2019ರ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಬೇಕು ಎಂದರೆ ಯಡಿಯೂರಪ್ಪ ಅನಿವಾರ್ಯ. ಯಡಿಯೂರಪ್ಪ ಬದಲಾವಣೆಯಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಬಿಜೆಪಿಯನ್ನು ಕಟ್ಟಿ ಹಾಕುವುದು ಸುಲಭವಾಗಲಿದೆ. ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದ್ದೇವೆ ಎಂದು ಮೈತ್ರಿ ಪಕ್ಷಗಳು ಘೋಷಣೆ ಮಾಡಿವೆ.

ಶ್ರೀರಾಮುಲುಗೆ ಶಾ ಕರೆ: ದೆಹಲಿಗೆ ಬುಲಾವ್ 

ರಾಜ್ಯ ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಾಸಕ ಶ್ರೀರಾಮುಲುಗೆ ಕರೆ ಮಾಡಿ ದೆಹಲಿಗೆ ಕರೆದಿದ್ದಾರೆ.

ಹಾಗೆ ನೋಡಿದರೆ 2018ರ ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಹೆಗಲು ಕೊಟ್ಟು ನಿಂತ ನಾಯಕರಲ್ಲಿ ಶ್ರೀರಾಮುಲು ಕೂಡ ಒಬ್ಬರು. 

ಇತ್ತ ಶಾಸಕರಾದ ಬಳಿಕ, ಬಳ್ಳಾರಿ ಸಂಸದನ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಮುಲು, ಅನಿರೀಕ್ಷಿತವಾಗಿ ಎದುರಾದ ಲೋಕಸಭಾ ಉಪ-ಚುನಾವಣೆಯಲ್ಲಿ ಅದೇ ಬಳ್ಳಾರಿ ಕ್ಷೇತ್ರದಿಂದ ಸಹೋದರಿ ಜೆ.ಶಾಂತಾ ಅವರನ್ನು ಅದೃಷ್ಟ ಪರೀಕ್ಷೆಗಿಳಿಸಿದರು.

ಅದರೆ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ವಿ.ಎಸ್.ಉಗ್ರಪ್ಪರ ಮುಂದೆ ಜೆ.ಶಾಂತ ಭಾರೀ ಅಂತರದಿಂದ ಸೋಲಬೇಕಾಯ್ತು.ಈ ಎಲ್ಲಾ  ಬೆಳವಣಿಗೆಗಳು ನಡೆದ ಬಳಿಕವೂ ರಾಮುಲುಗೆ ಬಿಜೆಪಿ ಹೈಕಮಾಂಡ್ ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ.

ಇನ್ನು ಐದಾರು ತಿಂಗಳಲ್ಲಿ  2019ರ ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಾಗಲಿದ್ದು, ಈಗಿನಿಂದಲೇ ಪಕ್ಷ ಸಂಘಟನೆ ಅನಿವಾರ್ಯವಾಗಿದೆ. ಹೀಗಾಗಿ ರಾಮುಲುರನ್ನು ಬಿಜೆಪಿಯಲ್ಲಿ ಕಡೆಗಾಣಿಸದೆ ಬಹಳ ಎಚ್ಚರಿಕೆಯಿಂದ ನಡೆಸಿಕೊಳ್ಳಲು ಹೈಕಮಾಂಡ್ ನಾಯಕರು ತಂತ್ರ ರೂಪಿಸಿದ್ದಾರೆ.

2019ರ ಲೋಕಸಭಾ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಪೈಕಿ, 22 ರಿಂದ 23 ಸ್ಥಾನಗಳನ್ನು ಬಿಜೆಪಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.

ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡುವುದು ನಿಶ್ಚಿತವಾಗಿದೆ. ಅದರ ಜೊತೆಗೆ ರಾಮುಲು   ಅವರನ್ನು ಕೂಡ ಯಡಿಯೂರಪ್ಪರ ಮಾದರಿಯಲ್ಲೇ ಬಳಸಿಕೊಳ್ಳಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. 

ಈಗಾಗಲೇ ರಾಮುಲು ಅವರ ಶಕ್ತಿ ಸಾಮರ್ಥ್ಯವನ್ನು ಗಮನಿಸಿರುವ ಹೈಕಮಾಂಡ್ ನಾಯಕರು, ಮತಗಳ ಕ್ರೂಢೀಕರಣಕ್ಕೆ ಇವರೇ ಸರಿಯಾದ ವ್ಯಕ್ತಿ ಎಂಬುದನ್ನು ಗಮನಿಸಿದ್ದಾಗಿದೆ.  ಸುಮಾರು 11 ಜಿಲ್ಲೆಗಳ ಮೇಲೆ ಹಿಡಿತವಿರುವ ರಾಮುಲು ಅವರನ್ನು ಯಡಿಯೂರಪ್ಪರ ನಂತರದ ನಾಯಕ ಎಂದು ಬಿಂಬಿಸಿ, ಎದುರಾಗಲಿರುವ 2019ರ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲು ರಾಷ್ಟ್ರೀಯ ನಾಯಕರು ಪ್ಲಾನ್ ಮಾಡಿದ್ದಾರೆ. ಹೀಗಾಗಿಯೇ ರಾಮುಲುಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ರಾಮುಲುರನ್ನು ಬಿಜೆಪಿ ರಾಜ್ಯ ನಾಯಕರ ಪಟ್ಟಿ ಸೇರಿಸಿದ್ದಾಗಿದೆ. ರಾಮುಲು ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿ, ರಾಜ್ಯ ನಾಯಕನಂತೆ ಬಿಂಬಿಸಿದ್ದಾಗಿದೆ. ಇಷ್ಟೆಲ್ಲಾ ಆದ ಬಳಿಕ, ಜಾತಿ ಸಮೀಕರಣ ಕೂಡ ಲೆಕ್ಕಾಚಾರ ಹಾಕಿ ರಾಮುಲುಗೆ ಯಡಿಯೂರಪ್ಪರ ನಂತರ ಸ್ಥಾನಮಾನ ಪಕ್ಷದಲ್ಲಿ ನೀಡಿದ್ರೆ, ರಾಜ್ಯ ಬಿಜೆಪಿಗೆ ಪ್ಲಸ್ ಆಗುತ್ತೆ ಎಂಬುದನ್ನು ಹೈಕಮಾಂಡ್ ನಾಯಕರು ಅರಿತಿದ್ದಾರೆ.

ರಾಮುಲು ಪರಿಶಿಷ್ಟ ಪಂಗಡದ ಒಳಗೆ ಬರುವ ವಾಲ್ಮೀಕಿ ಸಮುದಾಯದ ನಾಯಕ. ಬಿಜೆಪಿಯಲ್ಲಿ ಸದ್ಯ ವರ್ಚಸ್ಸಿರುವ ರಾಮುಲು ಅವರ ವಾಲ್ಮೀಕಿ ಸಮುದಾಯದವನ್ನೇ ಅಸ್ತ್ರವಾಗಿ ಬಳಸಿಕೊಂಡರೆ ರಾಜ್ಯ ಬಿಜೆಪಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.

2019ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಜ್ಯದ ಕೆಲ ಕ್ಷೇತ್ರಗಳ ಉಸ್ತುವಾರಿಯನ್ನು ಶ್ರೀ ರಾಮುಲು ಹೆಗಲಿಗೆ ವಹಿಸಲು ಅಮಿತ್ ಶಾ ರಣತಂತ್ರ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.