ಫಾರ್ಮಾ ಪದವೀಧರರಿಗೆ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿವೆ: ಉಂಗೆರ
Pharma graduates have ample opportunities in research: Ungera
ಫಾರ್ಮಾ ಪದವೀಧರರಿಗೆ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿವೆ: ಉಂಗೆರ
ವಿಜಯಪುರ 16: ಫಾರ್ಮಾ ಪದವೀಧರರಿಗೆ ಭವಿಷ್ಯದಲ್ಲಿ ಹೊಸ ಓಷಧ ಅನ್ವೇಷಣೆ ಮತ್ತು ಸೂತ್ರೀಕರಣ ವಿನ್ಯಾಸ ಹಾಗೂ ಕ್ಲಿನಿಕಲ್ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಐ.ಸಿ.ಎಂ.ಆರ್ ಎನ್.ಐ.ಟಿ.ಎಂನ ಡಾ. ಬನಪ್ಪ ಉಂಗೆರ ಹೇಳಿದರು.ಅವರು ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಓಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ದೃಷ್ಟಿಕೋನ ಕಾರ್ಯಕ್ರಮ ಕಂಕಣ- 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. .ಬಿ. ಫಾರ್ಮ್ಸ ಸಂಯೋಜಕ ಡಾ. ಶ್ರೀಧರಕುಮಾರ ಬಿರಾದಾರ ಮತ್ತು ರವೀಂದ್ರಕುಮಾರ ರೇವಡಿಯುಗರ ಮಾತನಾಡಿ ಬಿ. ಫಾರ್ಮಾ ಮತ್ತು ಡಿ. ಫಾರ್ಮಾ ಕೋರ್ಸುಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನಶೆಟ್ಟಿ, ಡಾ. ವಿ. ಪಿ. ಪಾಟೀಲ, ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ. ಜಿ. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಸಂತೋಷ ಚಪ್ಪರ, ಕಾನೂನು ಮಹಾವಿದ್ಯಾಲದ ಶಿಕ್ಷಕಿ ಸನಾ ಕೌಸರ ಅವರು ಮಾತನಾಡಿದರು. ಡಾ. ಸಂತೋಷ ಕರಜಗಿ ಸ್ವಾಗತಿಸಿದರು. ಅಶ್ವಿನಿ ಮತ್ತು ಡಾ. ಸುಧಾ ಪಾಟೀಲ ನಿರೂಪಿಸಿದರು. ಸಂತೋಷ ಅವಸ್ಥಿ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 