ಸಾಧನೆಯ ಹಾದಿಗೆ ಪರಿಶ್ರಮವೇ ಮದ್ದು ಹಿ ಎ. ಎಸ್. ಕಿರಣ್ ಕುಮಾರ್
Perseverance is the medicine for the path to success. A. S. Kiran Kumar
ಗದಗ 29: ನಗರದ ಪಂಡಿತ್ ಭೀಮಸೇನ್ ಜೋಷಿ ರಂಗಮಂದಿರದಲ್ಲಿ ಆದಿಯೋಗಿ ಎಜುಕೇಷನಲ್ ಟ್ರಸ್ಟ್ ಅಡಿಯಲ್ಲಿನ ಇನ್ಸೈಟ್ ಅಕಾಡೆಮಿ ಹಾಗೂ ಮೈಲಾರ್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಇನ್ಸೈಟ್ ಫೆಸ್ಟ್ ಹಿ 2026’ ಅತ್ಯಂತ ವೈಭವದಿಂದ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯ (ಋಖಓ) ಮಾಜಿ ಅಧ್ಯಕ್ಷರಾದ ಎ. ಎಸ್. ಕಿರಣ್ ಕುಮಾರ್, "ಜೀವನದಲ್ಲಿ ಯಶಸ್ಸು ತಾನಾಗಿಯೇ ಹುಡುಕಿಕೊಂಡು ಬರುವುದಿಲ್ಲ. ಅದಕ್ಕೆ ನಿರಂತರ ಪರಿಶ್ರಮ, ಆಸಕ್ತಿ ಮತ್ತು ಅಚಲವಾದ ತಾಳ್ಮೆಯ ಅಗತ್ಯವಿದೆ. ಭಾರತವು ಇಂದು ವಿಜ್ಞಾನ ಕ್ಷೇತ್ರದಲ್ಲಿ ಜಗತ್ತೇ ಬೆರಗಾಗುವಂತೆ ಮುನ್ನಡೆಯುತ್ತಿದೆ. ಯುವ ಪೀಳಿಗೆಯು ’ಆಕಾಶವೇ ಮಿತಿ’ ಎಂಬ ಹಳೆಯ ಮಾತನ್ನು ಸುಳ್ಳು ಮಾಡಿ, ಅದನ್ನೂ ಮೀರಿ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು" ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸನ್ಮಾನ್ಯ ಹೆಚ್. ಕೆ. ಪಾಟೀಲ್ ಅವರು ಮಾತನಾಡಿ, "ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತ್ಯಂತ ಪ್ರಮುಖವಾದುದು. ಗದಗ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದು ಶಿಕ್ಷಣದ ಮುಖ್ಯವಾಹಿನಿಗೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಕಠಿಣ ಪರಿಶ್ರಮದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ" ಎಂದು ಹಾರೈಸಿದರು.
ಅಂತರಾಷ್ಟ್ರೀಯ ಯುವ ನಿರ್ದೇಶಕಿ ಪ್ರಶಸ್ತಿ ವಿಜೇತರಾದ ಲಕ್ಷ್ಮೀ ಭಟ್ ಅವರು ಮಾತನಾಡಿ, "ಸಾಧನೆ ಮಾಡಲು ವಯಸ್ಸು ಅಡ್ಡಿಯಲ್ಲ. ಯಾವುದನ್ನಾದರೂ ಸಾಧಿಸುವ ತುಡಿತವಿದ್ದರೆ ಯಾವುದೇ ವಯಸ್ಸಿನಲ್ಲಾದರೂ ಇತಿಹಾಸ ಸೃಷ್ಟಿಸಬಹುದು" ಎಂದು ತಮ್ಮ ಅನುಭವದ ಮಾತುಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಶ್ರೀಕಾಂತಗೌಡ ಪಾಟೀಲ್ ಅಧ್ಯಕ್ಷರು, ಆದಿಯೋಗಿ ಎಜುಕೇಷನಲ್ ಟ್ರಸ್ಟ್,ಪವನ್ ಕುಮಾರ್ ಶೇಠ್ ಕಾರ್ಯದರ್ಶಿಗಳು,ಕುಮಾರ್ ರಾಥೋಡ್ ಖಜಾಂಚಿಗಳು,ಡಾ. ಜಯದೇವ ಮೆಣಸಗಿ ಕಾರ್ಯಾಧ್ಯಕ್ಷರು, ಎಂ.ಎಂ.ಎಂ. ಟ್ರಸ್ಟ್, ಎನ್. ಎಂ. ಮುಲ್ಲಾ ಆಡಳಿತಾಧಿಕಾರಿಗಳು ಹಾಗೂ ಬಿ. ಎಂ. ನದೀಂ ಮುಲ್ಲಾ ವೇದಿಕೆಯ ಮೇಲೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.
ಕಾರ್ಯಕ್ರಮದ ವಿಶೇಷತೆಯಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಇಡೀ ಸಮಾರಂಭವನ್ನು ಅತ್ಯಂತ ವ್ಯವಸ್ಥಿತವಾಗಿ ನಿರೂಪಿಸಿ ನಡೆಸಿಕೊಟ್ಟರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನಸೂರೆಗೊಂಡವು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 