ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ : ಮಣ್ಣಣ್ಣವರ

People understand BJP leaders' concern and stance for the people: Mannannavara

ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ : ಮಣ್ಣಣ್ಣವರ

ಶಿಗ್ಗಾವಿ 13 : ಕಾಂಗ್ರೆಸ್ ಸರ್ಕಾರದ ಜನಪರ ಆರ್ಥಿಕ ಸದೃಢತೆ ಕಲ್ಪಿಸುವ ಐತಿಹಾಸಿಕ ಗ್ಯಾರೆಂಟಿಗಳ ಕುರಿತು ಬಾಯಿಗೆ ಬಂದಂತೆಲ್ಲ ಮಾತನಾಡಿ ಇದೀಗ ಗ್ಯಾರಂಟಿಗಳ ಬಗ್ಗೆ ಮಾತನಾಡಿಲ್ಲ ಅನ್ನುವ ಬಿಜೆಪಿಯ ಮುಖಂಡರ ಜನಪರ ಕಾಳಜಿ ಮತ್ತು ನಿಲುವು ಜನರಿಗೆ ಅರ್ಥವಾಗಿದೆ ಎಂದು ತಾಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿ ವಕ್ತಾರ ಮಂಜುನಾಥ ಮುನ್ನಣ್ಣವರ ಹೇಳಿದರು.  ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ಇದೀಗ ಕೈಗೆಲಾಗದವರು ಮೈ ಮೈಯೆಲ್ಲಾ ಕೆರೆದು ಕೊಂಡಂತೆ ಕಾಂಗ್ರೆಸ್ ಪಕ್ಷದ ಜೀವಾಳ ಕಾರ್ಯಕರ್ತರಿಗೆ ಗ್ಯಾರಂಟಿ ಸಮರ​‍್ಕ ಅನುಷ್ಠಾನ ಮಾಡಲು ಗೌರವದನ ಕಾಂಗ್ರೆಸ್ ಸರಕಾರ ನೀಡಿದರೆ ಬಿಜೆಪಿ ನಾಯಕರು ವಿರೋಧಿಸುತ್ತಿರುವುದನ್ನು ನೋಡಿದರೆ ಕಾರ್ಯಕರ್ತರಿಲ್ಲದ ಕೇವಲ ಹಣ ಬಲ ಅಧಿಕಾರ ಇರುವ ನಾಯಕರ ಗೂಡಾಗಿರುವ ಇಂದಿನ ಬಿಜೆಪಿ ಮೊದಲು ತಮ್ಮ ಕಾರ್ಯಕರ್ತರಿಗೆ ಗೌರವ ಕೊಡುವುದನ್ನು ಕಲಿಯಲಿ ಬೊಮ್ಮಾಯಿ ಅವಧಿಯಲ್ಲಿ ಅಧಿಕಾರದ ಕೊನೆಯ ಹಂತದಲ್ಲಿ ಕಾರ್ಯಕರ್ತರನ್ನು ಗುತ್ತಿಗೆ ಮೂರು ತಿಂಗಳ ಸೀಮಿತ ಅವಧಿಗೆ ನಾಮ ನಿರ್ದೇಶನ ಮಾಡಿರುವುದನ್ನು ಬಿಜೆಪಿ ಕಾರ್ಯಕರ್ತರ ಕಾಳಜಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.