ಲೊಕದರ್ಶನ ವರದಿ
ಶಿರಹಟ್ಟಿ 22: ಇತ್ತೀಚೆಗೆ ಬೆಂಗಳೂರಿನ ಪಾದರಾಯನಪುರದ ದಾಂದಲೆ ಮತ್ತು ನಂತರದ ಘಟನೆಗಳಿಂದ ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದ ಬಾಂಧವರು ಜಗತ್ತಿನಲ್ಲಿ ಹರಡಿರುವ ಮಹಾ ಮಾರಿ ಕೊರೋನಾ ಭೀಕರತೆಯನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು ಹಾಗೂ ಜನರು ಅನಾಗರಿಕರಂತೆ ವತರ್ಿಸಿ ಇಡೀ ಸಮಾಜಕ್ಕೆ ಕಳಂಕ ತರಬಾರದು ಎಂದು ತಾಲೂಕಾ ಅಲ್ಪ ಸಂಖ್ಯಾತರ ಮೋಚರ್ಾ ಅಧ್ಯಕ್ಷ ಶರೀಫಸಾಬ ಚಬ್ಬಿ ಅವರು ಕರೆ ನೀಡಿದರು.
ಅವರು ಮುಂದುವರೆದು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಸಕರ್ಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ರಾಜಕೀಯ ಉದ್ದೇಶ ಇಟ್ಟುಕೊಂಡಿರುವವರು ಉದ್ರೇಕಕಾರಿ ಭಾಷಣದ ಮಾತುಗಳಿಗೆ ಮರುಳಾಗಿ ಇಂತಹ ಕೃತ್ಯಗಳಲ್ಲಿ ಯಾರೂ ಭಾಗವಹಿಸಬಾರದು.
ಒಂದು ವೇಳೆ ಯಾರಾದರೂ ಕೊರೊನಾ ರೋಗಕ್ಕೆ ತುತ್ತಾಗಿದ್ದರೆ ತಲೆ ಮರೆಸಿಕೊಂಡು ಓಡಾಡದೇ ಸ್ವಯಂ ಪ್ರೇರಣೆಯಿಂದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಕುರಿತು ಮಾಹಿತಿ ಪಡೆಯಲು ಬಂದ ಆರೋಗ್ಯ ಮತ್ತು ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಂಯಮದಿಂದ ವತರ್ಿಸಬೇಕು. ಕೊರಂಟೈನ್ ಪ್ರದೇಶಗಳಲ್ಲಿ ವ್ಯವಸ್ಥೆ ಕಲ್ಪಿಸುವಲ್ಲಿ ವಿಳಂಬವಾದರೆ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು ಅದನ್ನು ಬಿಟ್ಟು ದಾಂದಲೆ ಮಾಡಿ ಸಮಾಜದ ಮತ್ತು ಸರಕಾರದ ಕೆಂಗಣ್ಣಿಗೆ ಗುರಿಯಾಗಬಾರದು.
ಈ ಸಮಯದಲ್ಲಿ ಯಾರೋ ಕೆಲವು ಕಿಡಿಗೇಡಿಗಳು ಮಾಡುವ ಇಂತಹ ಕೆಲಸಗಳಿಂದಾಗಿ ಇಡೀ ಸಮಾಜ ಅವಹೇಳಕ್ಕೆ ಗುರಿಯಾಗುವುದನ್ನು ತಪ್ಪಿಸಲು ಎಲ್ಲರೂ ಒಗ್ಗಟ್ಟಾಗಿ ಜಾಗೃತಿ ಮೂಡಿಸುವ ಅನಿವಾರ್ಯತೆ ಉಂಟಾಗಿದೆ. ಸಮಾಜ ಬಾಂಧವರು ಸರಕಾರದ ತೀಮರ್ಾನವನ್ನು ಗೌರವಿಸಿ ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸಬೇಕೇ ವಿನಃ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂಯಮದಿಂದ ವತರ್ಿಸಿ ಎಲ್ಲರ ಆರೋಗ್ಯವನ್ನು ಕಾಪಾಡುವಲ್ಲಿ ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಈ ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈ ಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.