ಜನಗಣತಿ ಸಮೀಕ್ಷೆಯಲ್ಲಿ ತಮ್ಮ ಜಾತಿ ನಮೂದಿಸಬೇಕು: ದೈವಜ್ಞ ಮಹಾಸಭಾ
People should mention their caste in the census survey: Daivajna Mahasabha
ಜನಗಣತಿ ಸಮೀಕ್ಷೆಯಲ್ಲಿ ತಮ್ಮ ಜಾತಿ ನಮೂದಿಸಬೇಕು: ದೈವಜ್ಞ ಮಹಾಸಭಾ
ಗದಗ 16 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ) ಸಮೀಕ್ಷೆಗೆ ಮನೆಮನೆಗೆ ಸಮೀಕ್ಷೆದಾರರು ಬಂದಾಗ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಧರ್ಮದ ಕಾಲಮ್‌ನಲ್ಲಿ ಹಿಂದೂ ಎಂದು ಜಾತಿ ಕಾಲಮ್‌ನಲ್ಲಿ ದೈವಜ್ಞ ಬ್ರಾಹ್ಮಣ ಎಂದು ಬರೆಸಬೇಕೆಂದು ಅಖಿಲ ಕರ್ನಾಟಕ ದೈವಜ್ಞ ಮಹಾಸಭಾದ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಪಾಲನಕರ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರಲ್ಲಿ ವಿನಂತಿಸಿರುತ್ತಾರೆ.
ಘನ ಕರ್ನಾಟಕ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಇದೇ ದಿನಾಂಕ ಸೆಪ್ಟೆಂಬರ್ 22 ರಿಂದ ಸಮಸ್ತ ರಾಜ್ಯವ್ಯಾಪಿ ಜನ ಗಣತಿಯೊಂದಿಗೆ ಸಮುದಾಯದ ಜಾತಿ ಗಣತಿಯನ್ನು ಕೈಗೊಳ್ಳಲಾಗುತ್ತಿರುವದು. ಇದು ಕೇಂದ್ರ ಸರಕಾರದ ಐತಿಹಾಸಿಕ ಜನ ಗಣತಿಯೊಂದಿಗೆ ಜಾತಿ ಗಣತಿ ಯನ್ನು ಕೂಡಾ ಕೈಗೊಳ್ಳುವ ಮಹಾತ್ವಾಕಾಂಕ್ಷಿ ನಿರ್ಧಾರವನ್ನು ಕೈಗೊಳ್ಳಲಾದಂತೆ, ಕಾರ್ಯಪ್ರವೃತವಾಗಿರುತ್ತದೆ. ಆ ಮೂಲಕ ಸಮಸ್ತ ರಾಷ್ಟ್ರವ್ಯಾಪಿ ರಹವಾಸಿಯಾಗಿರುವ ಸಮಸ್ತ ನಾಗರಿಕರ ನಿಖರವಾದ ಜನಗಣತಿಯೊಂದಿಗೆ ಜಾತಿ ಗಣತಿಯ ಮಾಹಿತಿಯನ್ನು ಧಾಖಲಿಸಲು ನೆರವುದಾಯಕವಾಗಿರುತ್ತದೆ.
ರಾಜ್ಯಾದ್ಯಂತ ಹಲವಾರು ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಇಂತಹ ಸಂಧಿಗ್ದತೆಯಲ್ಲಿ ಸಿಲುಕಿರುವರು.ನಮ್ಮ ದೈವಜ್ಞ ಬ್ರಾಹ್ಮಣ ಸಮುದಾಯದಲ್ಲಿಯೂ ಸಮಸ್ತ ರಾಜ್ಯವ್ಯಾಪಿಯಾಗಿ 28 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಬ್ರಹತ್ ಸಮಾಜವಾಗಿದ್ದು, ಆದರೆ ನಿಖರವಾದ ಅಧಿಕೃತವಾದ ಜನಸಂಖ್ಯೆಯ ಅಂಕಿ- ಸಂಖ್ಯೆಗಳ ಕೊರತೆಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ನೈತಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿ ಉಳಿದಿರುತ್ತದೆ. ಇದಕ್ಕೆ ಉತ್ತಮ ನಿರ್ದೇಶನವೆಂಬಂತೆ ಇತ್ತೀಚಿಗಷ್ಟೇ ಘನ್ ರಾಜ್ಯ ಸರಕಾರದಿಂದ ಕೈಗೊಳ್ಳಲಾದ ಜಾತಿ ಗಣತಿಯ ಅಂಕಿ ಸಂಖ್ಯೆಗಳಲ್ಲಿ ನಮ್ಮ ಹಿಂದೂ ದೈವಜ್ಞ ಬ್ರಾಹ್ಮಣ ಸಮಾಜದವರು ಸಮಸ್ತ ಕರ್ನಾಟಕ ರಾಜ್ಯದಲ್ಲಿಯೇ ಕೇವಲ 80155 ಎಂದು ನಮೂದಾಗಿರುತ್ತದೆ.
ಇತರೆ ಅನ್ಯ ಸಮುದಾಯದಂತೆ ನಮ್ಮ ದೈವಜ್ಞ ಬ್ರಾಹ್ಮಣ ಸಮಾಜದವರು ಅಭಿವೃದ್ಧಿ ಪಥದತ್ ಸಾಗಲು ಸಮಸ್ತ ಕರ್ನಾಟಕ ರಾಜ್ಯವ್ಯಾಪಿ ರಹವಾಸಿಯಾಗಿರುವ ಹಿಂದೂ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಜಾತಿ ಗಣತಿಯ ಸಂಧರ್ಭದಲ್ಲಿ ಕಡ್ಡಾಯವಾಗಿ ಹಿಂದೂ ದೈವಜ್ಞ ಬ್ರಾಹ್ಮಣ ಎಂದು ಬರೆಯಿಸಿ ಇದರಿಂದ ನಮ್ಮ ದೈವಜ್ಞ ಬ್ರಾಹ್ಮಣ ಸಮುದಾಯಕ್ಕೆ ದೊರಕುವ ಸರಕಾರಿ ಸೌಲಭ್ಯಗಳನ್ನು ಪಡೆಯಲು ನಮಗೆ ಹಾಗೂ ನಮ್ಮ ಮುಂದಿನ ಜನಸಮುದಾಯಕ್ಕೆ ವ ಮುಂದಿನ ಪೀಳಿಗೆಗೆ ನೆರವುದಾಯಕವಾಗಲೂ ಅಖಿಲ ಕರ್ನಾಟಕ ದೈವಜ್ಞ ಮಹಾಸಭಾ (ರಿ) ಗದಗ ಇದರ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಪಾಲನಕರ ಪ್ರಕಟಣೆಯ ಜನಾಗ್ರಹವನ್ನು ವ್ಯಕ್ತಪಡಿಸುವ ಮೂಲಕ ಸಮಸ್ತ ದೈವಜ್ಞ ಬ್ರಾಹ್ಮಣ ಭಾಂದವರಲ್ಲಿ ವಿನಂತಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 