ಜನರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡಬೇಕಿದೆ: ಲಕ್ಷ್ಮಣ ಸವದಿ
People need to give more importance to their health: Lakshman Savadi
ಸಂಬರಗಿ 19: ಜನರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಮಹತ್ವ ನೀಡಬೇಕಿದೆ ಈಗ ಎಲ್ಲವೂ ಮೂದಲಿನಂತೆ ಇಲ್ಲ ಎಲ್ಲವೂ ಎಲ್ಲ ಕಡೆ ಕಲಬೇರೆಕೆ ನಡೆಯುತ್ತಿದ್ದು ಇದರಿಂದ ಯಾವ ಕ್ಷೇತ್ರಗಳು ಹೊರತಾಗಿಲ್ಲ ಜನರ ಆರೋಗ್ಯ ಸೇವೆ ಉಚಿತವಾಗಿ ಒದಗಿಸುವದು ಸರಕಾರದ ಜವಾಬ್ದಾರಿ ಆಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ತಂಗಡಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡುತ್ತಿದ್ದರು,
ಸುಮಾರು 3.20 ಲಕ್ಷ ರೂಗಳ ಅನುದಾನದಿಂದ ಸುಸಜ್ಜಿತವಾದ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಿಸಲಾಗುತ್ತಿದೆ ಒಟ್ಟು ಇಂತಹ ನಾಲ್ಕು ಕೇಂದ್ರಗಳು ತಾಲೂಕಿನಲ್ಲಿ ಸ್ಥಾಪಿಸಲಾಗುತ್ತದೆ, ತೆಲಸಂಗ,ಐಗಳಿ,ಕೊಕಟನೂರ ಈ ಮೊದಲು ನಂಜುಡಪ್ಪ ವರದಿ ಮೇರೆಗೆ ಬೇಡಿಕೆ ರಹಿತ ತಾಲ್ಲೂಕು ಎಂದು ಗುರುತಿಸಲ್ಪಡುವದನ್ನು ತಗೆದು ಹಾಕಿ ಹಿಂದುಳಿದ ತಾಲ್ಲೂಕು ಗುರುತಿಸಿ ಅಭಿವೃದ್ಧಿ ಮಾಡಬೇಕೆಂಬ ಗೋವಿಂದರಾವ ವರದಿಯ ಅನುಗುಣವಾಗಿ ಬೇಡಿಕೆ ಸಹಿತ ತಾಲ್ಲೂಕು ಎಂದು ಗುರುತಿಸಿಲಾಗಿ ಬದಲಾವಣೆ ಗೊಂಡ ನಂತರ ತಾಲೂಕಿನ ವ್ಯಾಪ್ತಿಯ ಒಟ್ಟು 11 ಆರೋಗ್ಯ ಕೇಂದ್ರಗಳು ಸ್ಥಾಪನೆಗೆ ಮಂಜುರಾತಿ ದೊರಕಿದ್ದು ಅವುಗಳು ಸಹ ಮುಂದೆ ಜನರಿಗೆ ಸಮರೆ್ಣ ಗೊಳ್ಳಲಿವೆ.
ಇವುಗಳನ್ನು ಒದಗಿಸಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ ಮತ್ತು ಮುಖ್ಯಮಂತ್ರಿಗಳನ್ನ ಸ್ಮರಿಸಿಕೊಳ್ಳಬೇಕು.ಜನಸಂಖ್ಯೆ ಬೆಳೆದಂತೆ ಆಹಾರ ಪದ್ಧತಿಯಲ್ಲಿ ಬದಲಾಣೆ ಮಾಡಿಕೊಳ್ಳ ಬೇಕಿದೆ. ಆಹಾರ ದಿಂದ ಆರೋಗ್ಯದ ಕಡೆ ಹೋಗಬೇಕಿದೆ,ನಾವೇಲ್ಲರು ರೋಗ ತಡೆದು ಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತಿದ್ದೆವೆ ಎಲ್ಲವೂ ಹ್ಯಾಬ್ರೀಡ್ ಮಯವಾಗಿದೆ,ಬೂಮೀಗೆ ಅತೀಯಾದ ರಸಾಯನಿಕ ಬಳಕೆಯಿಂದ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತಿದ್ದೇವೆ, ಇದೆ ರೀತಿ ಕಲಬೇರಿಕೆ ವಸ್ತುಗಳ ಪ್ರಮಾಣ ಮುಂದೆ ವರಿದದ್ದೆಯೇ ಯಾದಲ್ಲಿ ಇಂದು ಜಿಲ್ಲೆಗೊಂದರಂತೆ ಕ್ಯಾನ್ಸರ್ ಆಸ್ಪತ್ರೆಗಳು ಇವೆ ಮುಂದೆ ಇನ್ನೋಂದು ಹತ್ತು ವರ್ಷಗಳಲ್ಲಿ ತಾಲೂಕಿಗೆ ಒಂದು ಕ್ಯಾನ್ಸರ್ ಆಸ್ಪತ್ರೆ ಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಜನರಿಗೆ ಮೂಲಭೂತ ಸೌಕರ್ಯಗಳಾದ ಶಿಕ್ಷಣ,ನೀರು,ವಿದ್ಯುತ್,ರಸ್ತೆ ಒದಗಿಸಿದಲ್ಲಿ ರೈತ ಸ್ವಾಲಂಬಿಯಾಗಿ ಬದುಕಲು ಸಾಧ್ಯವಾಗಲಿದೆ ಎಂದರು. ರಾಜ್ಯದಲ್ಲಿ ಅಥಣಿ ವಿಧಾನಸಭಾ ಕ್ಷೇತ್ರ ಹೊಸೂರು ಕ್ರಾಂತಿ ಮಾಡಿ ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ ಜನರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಬರುದಿಂದ ಸಾಗುತ್ತಾ ಇದ್ದೇವೆ ಈ ವೇಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾಂತ್ ಪಾಟೀಲ್ ಮಾಜಿ ಅಧ್ಯಕ್ಷ ರಾಮಚಂದ್ರ ಪಾಟೀಲ್ ಅನಿಲ್ ತಳವಾರ್ ಜಿಲ್ಲಾ ವೈದ್ಯಾಧಿಕಾರಿ ಈಶ್ವರ್ ಗಡಾದ್ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಶರಣಪ್ಪ ಗಡಾದೇ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಿನಾಯಕ್ ಬಾಗಡಿ ಮಹೇಶ್ ಪಾಟೀಲ್ ಲಕ್ಷ್ಮಣ ಅವಳಿ ಪವನ್ ಬಾಗಡಿ ಸೇರಿದಂತ ಎಲ್ಲ ಗಣ್ಯರು ಕಾರ್ಯಕರ್ತರು ಅಧಿಕಾರಿಗಳು ಉಪಸ್ಥಿತಿ ಇದ್ದರು ಬಸಗೌಡ ಕಾಗೆ ಸ್ವಾಗತಿಸಿದರುಫೋಟೋತಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಶಾಸಕ ಲಕ್ಷ್ಮಣ ಸವದಿ ಚಾಲನೆ ನೀಡಿ ಸತ್ಕರಿಸಿದ ನಂತರ ಮಾತನಾಡಿದರು ಇವಳೇ ಕಾಂತ ಪಾಟೀಲ್ ವಿನಾಯಕ್ ಬಾಗಡಿ ಅನಿಲ್ ತಳವಾರ್ ಲಕ್ಷ್ಮಣ ಅವಳಿ ಇನ್ನಿತರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 