ಗಾಲಿಸಾಬ್ ಜಾತ್ರಾ ನಿಮಿತ್ಯವಾಗಿ ಶಾಂತಿ ಸಭೆ

ಗಾಲಿಸಾಬ್ ಜಾತ್ರಾ ನಿಮಿತ್ಯವಾಗಿ ಶಾಂತಿ ಸಭೆ Peace meeting on the occasion of Galisaab Jatra

ಗಾಲಿಸಾಬ್ ಜಾತ್ರಾ ನಿಮಿತ್ಯವಾಗಿ ಶಾಂತಿ ಸಭೆ.  

ಆಲಮೇಲ 25 : ಪಟ್ಟಣದ ಪೊಲೀಸ್ ಸ್ಟೇಷನ್ ಆವರಣದಲ್ಲಿ ಗ್ರಾಮ ದೇವರಾದ ಹಾಜರತ್ ಪೀರ್ ಗಾಲಿ ಸಾಬ್ ಜಾತ್ರೆಯು ಅತಿ ವಿಜ್ರಮಣೆಯಿಂದ ಊರಿನ ದೇಶಮುಖ ಮನೆತನದಿಂದ ಗಂಧದೊಂದಿಗೆ ಜಾತ್ರೆ ಪ್ರಾರಂಭಗೊಳ್ಳುವುದು.ಈ ಜಾತ್ರೆಯ ವಿಶೇಷತೆ ವೆಂದರೆ ಹಿಂದೂ -ಮುಸ್ಲಿಂ ಭೇದ ಭಾವವಿಲ್ಲದೆ ಏಕತೆ ಹೊಂದಿದ್ದಾರೆ ಹಾಗೂ ಕಮಿಟಿಯ ಅಧ್ಯಕ್ಷರು ಹಿಂದೂ ಬಾಂಧವರು ಪ್ರತಿ ವರ್ಷ ಇದನ್ನು ಅನುಸರಿಸಿಕೊಂಡು ಬಂದಿದ್ದಾರೆ. ಇದು ಒಂದು ವಿಶೇಷವಾಗಿದೆ ನಾಗರೀಕ ವೇದಿಕೆ ಅಧ್ಯಕ್ಷರಾದರಮೇಶ ಬಂಟನೂರ ಹೇಳಿದರು. ಆಲಮೇಲ ತಾಲೂಕಿಗೆ ಇದು ಒಂದು ದೊಡ್ಡ ಜಾತ್ರೆ ಇರುವುದರಿಂದ ಸುಮಾರು 43 ಹಳ್ಳಿಗಳು ಒಳಗೊಂಡಿರತಕ್ಕಂಥ ಈ ಜಾತ್ರೆಯು ಶಾಂತಿ ಕಾಪಾಡುವುದು ಈ ಆಲಮೇಲ  ಊರಿನ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ. 29 ರಂದು ಗಂಧ ಇರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ನೀಡಬೇಕು ವೆಂದು ಪ್ರಭು ವಾಲಿಕಾರ ಹೇಳಿದರು.ಹಳ್ಳಿಯಿಂದ ಬಂದಿರತಕ್ಕಂತ ನಾಗರಿಕರು ತಮ್ಮ ಬೈಕುಗಳು ಮತ್ತು ಫೋರ್ ವಿಲ್ಲರ್ ಗಳು ಎಲ್ಲಿ ಬೇಕಾದಲ್ಲಿ ನಿಲ್ಲಿಸಬಾರದು  ಒಂದು ಸುರಕ್ಷತವಾದ ಸ್ಥಳದಲ್ಲಿ ಹಚ್ಚಿ ಜನರಿಗೆ ಹೋಗಲು ಬರಲು ಅನುಕೂಲ ಮಾಡಿಕೊಡಬೇಕು ಅದರ ಜೊತೆಗೆ ತಮ್ಮ ಸಹಕಾರ  ಈ ಜಾತ್ರೆಗೆ ಅವಶ್ಯಕತೆ ಇದೆ. ಪಿ ಎಸ್ ಐ  ಅರವಿಂದ್ ಅಂಗಡಿ ಮಾತನಾಡಿ ಜಾತ್ರೆಗೆ ಬಂದ ಮಹಿಳೆಯರು ತಮ್ಮ ಒಡವೆಗಳು ಮನೆಯಲ್ಲಿ ಇಟ್ಟು  ಬರಬೇಕು ಇತ್ತೀಚಿನ ದಿನಗಳಲ್ಲಿ ಕಳ್ಳತನ ಹೆಚ್ಚಾಗುವುದರಿಂದ ಮೊಬಲ್ ತಮ್ಮ ಬೆಲೆಬಾಳುವ ಆಭರಣಗಳನ್ನು ಸೇಫಾಗಿ ಇಟ್ಟುಕೊಳ್ಳುವುದು ಉತ್ತಮ. ಜನ ದಟ್ಟಣೆಯಾದ ಸದ್ಯದಲ್ಲಿ ತಮ್ಮ ಬೈಕುಗಳನ್ನು ತಗೊಂಡು ತಿರುಗಾಡದಾಗಲಿ ಮಹಿಳೆಯರಿಗೆ ಹಾಗೂ ಹುಡುಗಿಯರಿಗೆ ಚುಡಾಯಿಸುವದಾಗಲ್ಲಿ ಅಂತಲ್ಲಿ ಏನಾದರೂ ಕಂಡುಬಂದಲ್ಲಿ ಅವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಾತ್ರೆಯ ಕಮಿಟಿ ಅಧ್ಯಕ್ಷರು ಬಸವರಾಜ್ ತೆಲ್ಲೋರ.ಹರೀಶ್ ಯಂಟಮನ ಮಾತನಾಡಿದರು.ವಾಹಬ್ ಸುಂಬುಡ್‌. ಭೀಮು ಭೋಮ್ಮನಳ್ಳಿ. ಅಮ್ಮದ ವಾಲಿಕಾರ. ಸೈಫನ್ ಜಮಾದಾರ್‌. ಅನೇಕರು ಉಪಸ್ಥಿತರಿದ್ದರು.