ಮನುಷ್ಯ ಜೀವನ ಸಾರ್ಥಕತೆಗೆ ಶಾಂತಿ ನೆಮ್ಮದಿ ಅವಶ್ಯ - ಲಿಂಗದಹಳ್ಳಿ ಶ್ರೀಗಳು.

ಮನುಷ್ಯ ಜೀವನ ಸಾರ್ಥಕತೆಗೆ ಶಾಂತಿ ನೆಮ್ಮದಿ ಅವಶ್ಯ - ಲಿಂಗದಹಳ್ಳಿ ಶ್ರೀಗಳು.  

ರಾಣೇಬೆನ್ನೂರು 20: ಭಾರತ ದೇಶ ದೇವರು, ಧರ್ಮ, ಆಧ್ಯಾತ್ಮ ಇವುಗಳನ್ನು ನಿತ್ಯದ ಬದುಕಿನಲ್ಲಿ ಪೂಜೆ ಪುನಸ್ಕಾರಗಳ ಮೂಲಕ ಮಾನಸಿಕ ಶಾಂತಿ ಮತ್ತು ನೆಮ್ಮದಿಗಾಗಿ ಅಚಾನೋಚವಾಗಿ ಆಚರಿಸುತ್ತ ಬಂದವರಾಗಿದ್ದೇವೆ. ಧಾರ್ಮಿಕ ಆಚರಣೆಯಿಂದ ಸಂಸ್ಕೃತಿ ಮತ್ತು ಸಂಸ್ಕಾರ ರೂಪುಗೊಳ್ಳಲಿದೆ. ಶಾಂತಿ ಮತ್ತು ಮಾನಸಿಕ  ನೆಮ್ಮದಿ ಹಾಗೂ ಧರ್ಮ ಸಂಸ್ಕಾರ ಪರಂಪರೆಯಲ್ಲಿ ಸಾಗಲು ದೇವಾಲಯಗಳ ಅಗತ್ಯ  ಅವಶ್ಯವಿದೆ.ಎಂದು ಸ್ಪಟಿಕಲಿಂಗ ಖ್ಯಾತಿಯ ರಂಭಾಪುರಿ ಶಾಖಾ ಹಿರೇಮಠದ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು, ಮಹಾಸ್ವಾಮಿಗಳವರು  ನುಡಿದರು. ಅವರು, ಲಿಂಗದಹಳ್ಳಿ ಗ್ರಾಮದ, ಮರಾಠ ಸಮಾಜದ ಓಣಿಯಲ್ಲಿ ಇತಿಹಾಸ ಪರಂಪರೆ ಹೊಂದಿರುವ, ಐತಿಹಾಸಿಕ ಹಿನ್ನೆಲೆಯ, ಶ್ರೀ ಅಂಬಾಭವಾನಿ  ದೇವಿಯ ನೂತನ ದೇವಾಲಯದ ಪುನರ್ ಪ್ರತಿಷ್ಠಾಪನಾ, ಕಳಸಾರೋಹಣ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.   

     ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ದೇವಾಲಯಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಧರ್ಮದ ಹಾದಿಯಲ್ಲಿ ಸಾಗಬೇಕಾದ ಮನುಷ್ಯ ಇಂದು ಧರ್ಮದ ಆಚರಣೆಯಿಂದ ವಿಮುಖನಾಗುತ್ತಿದ್ದಾನೆ ಇದು ನಮ್ಮ ಸಂಸ್ಕೃತಿಯಲ್ಲ.ಗ್ರಾಮ ಮತ್ತಷ್ಟು ಭಾವೈಕ್ಯತೆ ಬಿಂಬಿತವಾಗಬೇಕಾದರೆ, ಪ್ರತಿಯೊಂದು ಸಮಾಜದವರು, ತಮ್ಮ ಆರಾಧ್ಯ ದೇವರು, ದೇವಿಯನ್ನು ಪೂಜಿಸಿ, ಪ್ರಾರ್ಥಿಸಿ ಆತ್ಮೋದ್ಧಾರಕ್ಕೆ ಮುಂದಾಗಬೇಕು ಎಂದರು.  ಲಿಂಗದಹಳ್ಳಿ ಗ್ರಾಮದಲ್ಲಿ, ಬಹುದೊಡ್ಡ ಇತಿಹಾಸ ಹೊಂದಿರುವ ದೇವಿಯ ಮೂರ್ತಿಯು, ತಮ್ಮ ಕುಲದೈವವಾಗಿ  ಸದಾಕಾಲ  ಪೂಜಿಸುವ ಸಂಸ್ಕಾರವನ್ನು, ಮರಾಠ ಸಮುದಾಯವು, ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದವರು ಭಾವೈಕ್ಯತೆಯೊಂದಿಗೆ ತಮ್ಮ ಭಕ್ತಿಯನ್ನು ಸಮರ​‍್ಿಸುತ್ತಾ ಬಂದಿದ್ದಾರೆ ಎಂದರು.   

 ಸಮಾಜದ ಹಿರಿಯರು ದೇವಾಲಯದ ನಿರ್ಮಾಣಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಎಲ್ಲರ ಸಹಕಾರದೊಂದಿಗೆ, ಅಂಬಾ ಭವಾನಿ ದೇವಿಯು, ಗ್ರಾಮದಲ್ಲಿ ಮುಹೂರ್ತ ಸ್ವರೂಪರಾಗಿದ್ದಾಳೆ. ನಿತ್ಯವೂ, ಪೂಜಿಸಿ, ಆರಾಧಿಸಿ, ದೇವಿಯ ಆಶೀರ್ವಾದವನ್ನು ಪಡೆದು ಜನ್ಮ ಸಾರ್ಥಕತೆ ಪಡಿಸಿಕೊಳ್ಳಬೇಕು. ಎಂದರು.ದೇವಾಲಯದಲ್ಲಿ ನಿತ್ಯವೂ, ಪೂಜೆ, ಪುನಸ್ಕಾರ, ನೈವೇದ್ಯ, ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ  ಮತ್ತು ದೇವಿಯ ಜಾತ್ರೆ ಉತ್ಸವ, ಸೇರಿದಂತೆ ಸಾಂಪ್ರದಾಯಕವಾಗಿರುವ  ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಆಚರಿಸಲು ಮುಂದಾಗಬೇಕು ಎಂದು  ಶ್ರೀಗಳು ಕರೆ ನೀಡಿದರು. ಅಂಬಾ ಭವಾನಿ ದೇವಿಯ ನೂತನ ದೇವಾಲಯವು, ಪೂಜೆ ಸಲ್ಲಿಸಿ, ಪ್ರಥಮ ಪ್ರವೇಶ ಪಡೆದು, ದೇವಾಲಯ ಲೋಕಾರೆ​‍್ಣಗೊಳಿಸಿದ, ಬೆಂಗಳೂರಿನ ಅಂಕಿ ಅಂಶ ಇಲಾಖೆಯ ಉಪ ನಿರ್ದೇಶಕ ಮಲ್ಲೇಶ ರಾವ್ ಚಾಕರಿ ಅವರು ಮಾತನಾಡಿ, ಮರಾಠ ಸಮುದಾಯದ ಕುಲದೇವರು ಅಂಬಾ ಭವಾನಿ. ಕಳೆದ 50 ವರ್ಷಗಳಿಂದ, ಇದೇ ಸ್ಥಳದಲ್ಲಿ, ಮೂರ್ತಿಯ ಪೂಜೆ ನಡೆಸಿಕೊಂಡು ಬಂದಿದ್ದೇವೆ. ಗ್ರಾಮಸ್ಥರ ಸಹಕಾರ, ಸಮಾಜದ ಮುಖಂಡರ ಸಂಕಲ್ಪದಂತೆ ದೇವಾಲಯ ನಿರ್ಮಾಣವಾಗಿದೆ ಎಂದರು.       ಭಾವೈಕ್ಯತೆಯ ಬಂಧುಗಳಾಗಿರುವ ಮರಾಠ ಸಮಾಜದ ಮುಖಂಡರು, ಯುವಕರು, ಭವಾನಿ ದೇವಾಲಯ ನಿರ್ಮಾಣದಿಂದಾಗಿ ತುಂಬಾ ಸಂತೋಷವಾಗಿದೆ. ಸಾಂಪ್ರದಾಯಕವಾಗಿ  ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಆಯಾ ಸಂದರ್ಭದಲ್ಲಿ, ನೆರವೇರಲಿದೆ ಎಂದ ಅವರು, ಅಂದಾಜು 50 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ ದೇವಾಲಯದ ನಿರ್ಮಾಣಕ್ಕಾಗಿ ಸಹಕರಿಸಿದ ಗ್ರಾಮಸ್ಥರು, ಸಮಾಜದ ಮುಖಂಡರನ್ನು ಅಭಿನಂದಿಸಿ ತಮ್ಮ ಕೃತಜ್ಞತೆ ಸಲ್ಲಿಸಿದರು.     

  ಸ್ಥಳಿಯ ಮರಾಠಾ ಸಮಾಜದ  ಅಂಬಾಭವಾನಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ತಮ್ಮ ಮುಕ್ತ ಹಸ್ತದಿಂದ, ಧನ ಕನಕ ,ದೇಣಿಗೆ ನೀಡಿದ ಗ್ರಾಮದ ಹಾಗೂ ನಾಡಿನ ಅನೇಕ ಧಾನಿಗಳನ್ನು  ಶಾಲು ಹೊದಿಸಿ, ಫಲ   ಸನ್ಮಾನಿಸಿದರು. ಬೆಂಗಳೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ  ಪ್ರಾಂಶುಪಾಲೆ ಮಂಜುಳಾಬಾಯಿ ಮ. ಚಾಕರೆ ಮತ್ತು ಅನುಪಮಾ ಮಾಲತೇಶ ತುಳಜಣ್ಣನವರ,  ಶ್ರೀಮತಿ ರೇಖಾ ರಂಜಿತ, ತುಳಜಣ್ಣನವರ, ಗ್ರಾಮದ ಮುಖಂಡರಾದ, ಲಿಂಗರಾಜ ಭೈರಣ್ಣನವರ, ಮಾಲತೇಶ್ ಪಾಚಪರೆ,ಪ್ರವೀಣ ಚಾಕರಿ, ಮಂಜಪ್ಪ ತುವಾರ, ತೇಜಪ್ಪ ಕಮ್ಮಾರ, ಗದಿಗೆಪ್ಪ ಮರಿಯಣ್ಣನವರ, ದೇವಪ್ಪ ಕಮ್ಮಾರ, ಯಮನಪ್ಪ ಬೈರಣ್ಣನವರ, ಮಲ್ಲೇಶಪ್ಪ ಕದಂ, ಮೈಲಾರ​‍್ಪ ಮಾಳಗಿ, ಕರಬಸಪ್ಪ ದುರ್ಗಣ್ಣನವರ, ಚಂದ್ರಶೇಖರ​‍್ಪ  ಬೈರಣ್ಣನವರ, ಮೈಲಪ್ಪ ಬೈರಣ್ಣನವರ, ಸೇರಿದಂತೆ ಸಮಿತಿಯ ಸದಸ್ಯರು, ಪದಾಧಿಕಾರಿಗಳು, ಸಮಾಜದ ಮುಖಂಡರು  ಗ್ರಾಮದ ಗಣ್ಯರು, ಮರಾಠ ಸಮಾಜದ ಯುವ ನಾಯಕರು, ಮತ್ತು ಲಿಂಗದಹಳ್ಳಿ ಮತ್ತು ಸುತ್ತ ಮುತ್ತಲ ಗ್ರಾಮದ ಸರ್ವ ಸಮಾಜದ ನಾಗರಿಕರು ಪಾಲ್ಗೊಂಡಿದ್ದರು. ದೇವಾಲಯ ಲೋಕಾರೆ​‍್ಣಗೂ ಮುನ್ನ, ಎರಡು ದಿವಸಗಳ ಕಾಲ, ಜಲವಾಸ, ಧಾನ್ಯ ವಾಸ, ಹೋಮ, ಹವನ  ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ನೆರವೇರಿಸಲಾಯಿತು.