ಲೋಕದರ್ಶನ ವರದಿ
ಕೊಪ್ಪಳ 30: ನಗರದಲ್ಲಿ ಪಾವಣಸ್ಕರ್ ಮ್ಯೂಸಿಕ್ ಫೌಂಡೆಶನ್ ಸಂಸ್ಥೆಯ ವಿವಿಧ ಸಂಘಟನೆಗಳ ಸಂಯೊಗದಲ್ಲಿ ಸಾಮಾಜಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದಾಯಕವಾಗಿದೆ, ಮತ್ತು ಅವರ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಕೊಪ್ಪಳ ಶಾಖೆಯ ವ್ಯವಸ್ಥಾಪಕ ಚಿನ್ಮಯ ಎಂ ಹೇಳಿದರು.
ಅವರು ನಗರದ ಕೊಟೆಯ ಬಡವಾಣೆಯಲ್ಲಿರುವ ಶ್ರೀ ಶಾರದಾಂಬ ಧ್ಯಾನ ಮಂದಿರದಲ್ಲಿ ಪಾವಣಸ್ಕರ್ ಮ್ಯೂಸಿಕ್ ಫೌಂಡೆಶನ್ ಕೊಪ್ಪಳ, ಬ್ಯಾಂಕ್ ಆಫ್ ಬರೋಡ (ವಿಜಯಾ ಬ್ಯಾಂಕ್) ಕೊಪ್ಪಳ, ಯಶಸ್ವಿ ಟೌನ್ಶಿಪ್ ಪ್ರಾಜೆಕ್ಟಸ್ ಪ್ರೈ.ಲಿ. ಬೆಂಗಳುರು ಇವುಗಳ ಸಂಯುಕ್ತ ಆಶ್ರಯದಲ್ಲಿ ತೃತಿಯ ವರ್ಷದ ಪಾವಣಸ್ಕರ ಸಂಗೀತ ಮಹೊತ್ಸವ 2019 ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮುಖ್ಯಸ್ತ ಜಿ.ಡಿ.ಪಾವಣಸ್ಕರ್ ವಹಿಸಿದ್ದರು, ಮುಖ್ಯ ಅತೀಥಿಗಳಾಗಿ ುಶಸ್ವಿ ಟೌನ್ಶಿಪ್ ಪ್ರಾಜೆಕ್ಟಸ್ ಪ್ರೈ.ಲಿ. ಬೆಂಗಳುರಿನ ವ್ಯವಸ್ತಾಪಕ ನಿದರ್ೇಶಕ ಎ.ಎಸ್.ಪಾಟೀಲ್, ಡಾ. ಶ್ರೀನಿವಾಸ ದೇಶಪಾಂಡೆ, ಜಗನ್ನಾಥ ಶಾಸ್ತ್ರಿ, ಅಂಬಣ್ಣ ಕೊಪ್ಪರದ, ರವಿ ಪೂರೊಹಿತ್, ಗೀರಿಶ ಕುಲಕರಣಿ, ಕೆ.ಮುರಳಿಧರರಾವ್ ವಕೀಲರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪಂಡಿತ್ ಅಶೊಕ ನಾಡ್ಗೇರ್, ಹೇಮಂತ್ ಕುಲಕರಣಿ, ಕೃಷ್ಣ ಕ್ಷತ್ರೀಯ, ಪರಶುರಾಮ ಭಜಂತ್ರಿ, ಗಾಯತ್ರಿ ಕುಲಕರಣಿ, ಭರತ ಹೆಗಡೆ, ಕೃಷ್ಣಕುಮಾರ ಕುಲಕರಣಿ, ನವೀನ ಕುಲಕರಣಿರವರುಗಳಗೆ ಪ್ರಶಸ್ತಿ ಮತ್ತು ಸನ್ಮಾನ ಎರ್ಪಡಿಸಲಾಗಿತ್ತು, ನಂತರ ಅವರು ಸಂಗಿತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದರಲ್ಲಿ ಸ್ಥಳಿಯ ಸಂಗೀತ ಕಲಾವಿಧರು ಸೇರಿದಂತೆ ಸಾರ್ವಜನಿಕರು, ಸಂಗೀತ ಕಲಾಭಿಮಾನಿಗಳು ಪಾಲ್ಗೊಂಡದ್ದರು.