ದೇಹದ ಅಭಿಮಾನಕ್ಕಿಂತ ದೇಶಾಭಿಮಾನ ಮುಖ್ಯ: ಶಿವಯೋಗಿ ಶಿವಾಚಾರ್ಯ

ದೇಹದ ಅಭಿಮಾನಕ್ಕಿಂತ ದೇಶಾಭಿಮಾನ ಮುಖ್ಯ: ಶಿವಯೋಗಿ ಶಿವಾಚಾರ್ಯ  Patriotism is more important than physical pride: Shivayogi Shivacharya

ಶಿಗ್ಗಾವಿ  02: ವಿಶ್ವದಲ್ಲಿ ಹಿಂದೂ ದೇಶ ಯಾವುದಾದರೂ ಇದೆ ಎಂದರೆ ಅದೇ ಭವ್ಯ ಬಾರತ ದೇಶ. ದೇಹದ ಅಭಿಮಾನಕ್ಕಿಂತ ದೇಶಾಭಿಮಾನ ಮುಖ್ಯವಾಗಿದೆ ಎಂದು ರಾಣೆಬೆನ್ನೂರ ಹಿರೇಮಠ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.    ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಹಿಂದೂ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಗವಂತ ನಮಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಕೆಲವೊಂದು ಜವಾಬ್ದಾರಿ ಕೊಡುತ್ತಾನೆ ಅದನ್ನು ಚೆನ್ನಾಗಿ ನಿರ್ವಹಿಸಬೇಕು ಅಲ್ಲದೇಬಿದ್ದವರನ್ನು ಮತ್ತು ಬಿಳುತ್ತಿರುವವರನ್ನು ಮೇಲೆತ್ತುವುದೇ ನಿಜವಾದ ಧರ್ಮ ವಾಗಿದೆ  ಅಲ್ಲದೇ ಎಚ್ಚರದಿಂದ ಬದುಕಿ ಬಾಳಬೇಕು.

ದುಷ್ಟರಿಗೆ ಯಮದೂತರಾದಾಗ ದೇಶ ಕಟ್ಟಲು ಸಾಧ್ಯ. ಮಾತಿನಲ್ಲಿ ಹಿಂದುತ್ವ ಬೇಡಾ ಮನಸ್ಸಿನಲ್ಲಿ ಹಿಂದುತ್ವ ಬೇಕು. ದೇಹ ಬಹಳ ಮುಖ್ಯವಲ್ಲ ದೇಶವೇ ಮುಖ್ಯ. ನಮ್ಮ ಮನೆಯಲ್ಲಿ ಮೊದಲಿಗೆ ಹಿಂದೂ ಪರಂಪರೆ ಕಟ್ಟಿಗೊಳ್ಳಬೇಕು.ನಮ್ಮ ಪರಂಪರೆ ಉಳಿಯ ಬೇಕಾದರೆ ಸನಾತನ ಧರ್ಮ ಉಳಿಯಬೇಕು ಎಂದರು.    ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ ನಮ್ಮಲ್ಲಿ ಭೋದನೆಯ ಕೊರತೆಯಿದೆ ಆದ್ದರಿಂದ ಧರ್ಮ ಜಾಗೃತಿ ಅವಶ್ಯವಾಗಿದೆ ಏಕೆಂದರೆ ಜಾತಿ ವ್ಯವಸ್ಥೆ ಸರಿಪಡಿಸ ಬೇಕಾಗಿದೆ.  ಅಲ್ಲದೇ ವೈಯಕ್ತಿಕ ದ್ವೇಷಗಳಿಂದ ನಮ್ಮ ದೇಶ ವಿನಾಶದತ್ತ ಸಾಗಿದೆ ನಮ್ಮವರು ಧರ್ಮವನ್ನು ಪಾಲನೆ ಮಾಡಬೇಕು. ಅನ್ಯ ದರ್ಮಿಯರನ್ನು ದ್ವೇಷಿಸದೇ ಗೌರವಿಸಬೇಕು. ಪ್ರಜಾಪ್ರಭುತ್ವ ಉಳಿಸುವ ಕೆಲಸವಾಗ ಬೇಕಾಗಿದೆ. ಭಾರತ ಮಾತೆಯನ್ನು ರಕ್ಷಿಸುವ ಕೆಲಸ ಮಾಡಿ ಎಂದರು.   

ದಿಕ್ಸೂಚಿ ಭಾಷಣಕಾರ ಶ್ರೀಕಾಂತ ಹೊಸಕೇರಾ ಮಾತನಾಡಿ ಜಗತ್ತಿನ ಬಹಳಷ್ಟು ಸಂಸ್ಕೃತಿಗಳು ಹುಟ್ಟಿದ್ದವು ಅಷ್ಟೇ ವೇಗವಾಗಿ ನಾಶವಾದವು, ದಾಳಿ ಮಾಡಿದ್ದು ನಮ್ಮವರು ಭಾರತ ಮಾತೆಯ ಮಕ್ಕಳು ಸಂಸ್ಕೃತ ಮತ್ತು ಸಂಸ್ಕೃತಿ ಮರೆಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ನಮ್ಮ ಸಂಸ್ಕೃತಿ ಉಳಿಯಲು  ವೀರ ಮರಣ ಹೊಂದಿದ ಮಹನಿಯರನ್ನು ಸ್ಮರಣೆ ಮಾಡಬೇಕು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ದೇಶದ ಉದ್ದಗಲಕ್ಕೂ ಧರ್ಮ ಉಳಿವು ಹಾಗೂ ಜಾಗೃತಿಗಾಗಿ ಅಲ್ಲದೇ ಹಿಂದೂ ರಾಷ್ಟ್ರ ಮಾಡುವ  ಕಾರ್ಯಕ್ರಮ ಇದಾಗಿದೆ. ನಾವೆಲ್ಲವೂ ಒಂದು ನಾವೆಲ್ಲವೂ ಬಂದು. ದೇಶದಲ್ಲಿ ಕುಟುಂಬ ವ್ಯವಸ್ಥೆ ಸದೃಡಗೋಳಿಸಬೇಕು. 

ಸಂಘವಾಗಿ ಮಾಡುವ ಕೆಲಸವಲ್ಲ ಸಮಾಜವಾಗಿ ಕೆಲಸ ಮಾಡಬೇಕು.  ಪರಿಸರ ಉಳಿಸುವ ಕೆಲಸವಾಗಬೇಕು. ಸಾಮಾಜಿಕ ಸಾಮರಸ್ಯ ನಿರ್ಮಾಣವಾಗಬೇಕು. ಹಬ್ಬ ಹರಿದಿನ ಸಂಪ್ರದಾಯ, ನಾಗರೀಕ ಶಿಷ್ಟಾಚಾರವನ್ನು ಪಾಲನೆ ಮಾಡಬೇಕು. ಸಂಘಕ್ಕಾಗಿ ಪಂಚ ಪರಿವರ್ತನೆ  ಅಲ್ಲ ಸಮಾಜದ ಪರಿವರ್ತನೆಗಾಗಿ ಎಂದರು.     ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶಶೀಧರ ಸುರಗೀಮಠ ಮಾತನಾಡಿದರು.    ಈ ಸಂದರ್ಭದಲ್ಲಿ ಭರತ ಬೊಮ್ಮಾಯಿ, ಬಸಣ್ಣಾ ಹೆಸರೂರ, ಮುದುಕಣ್ಣಾ ವನಹಳ್ಳಿ, ಸಂಜನಾ ರಾಯ್ಕರ, ಪ್ರತೀಕ ಕೊಳೇಕರ, ಸೇರಿದಂತೆ  ಎಲ್ಲ ಸಮಾಜದ ಮುಖಂಡರು ಉಪಸ್ಥಿತರಿದ್ದರು.  ರಾಜು ಕೆಂಭಾವಿ ಸ್ವಾಗತಿಸಿದರು, ರಾಘವೇಂದ್ರ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.