ಧಾರವಾಡ 08: ತ್ಯಾಗ, ಅಂತಃಕರಣ, ಸ್ವಾಭಿಮಾನ, ಸಮರ್ಪಣೆಯಂತಹ ಮಾನವೀಯ ಗುಣಗಳೊಂದಿಗೆ ಮಕ್ಕಳಲ್ಲಿ ದೇಶಾಭಿಮಾನ ಬಿತ್ತಿ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸಬೇಕೆಂದು ಇಲ್ಲಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಕರೆ ನೀಡಿದರು.
ಅವರು ತಮ್ಮ ಬೆಳಗಾವಿ ವಿಭಾಗ ವ್ಯಾಪ್ತಿಯ ಬಾಗಲಕೋಟ ಜಿಲ್ಲೆ ತುಂಗಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೈಜ್ಞಾನಿಕ ಮನೋಭಾವದಿಂದ ಎಲ್ಲವನ್ನೂ ನೋಡುವ, ಪ್ರಶ್ನಿಸುವ ಪ್ರವೃತ್ತಿ ವಿದ್ಯಾಥರ್ಿಗಳಲ್ಲಿ ಹೆಚ್ಚಾಗಬೇಕು. ನಮ್ಮ ದೇಶ ಆಥರ್ಿಕ ಸ್ವಾವಲಂಬನೆ, ಆಹಾರ ಭದ್ರತೆ, ವಿಜ್ಞಾನ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆದರೆ ಇನ್ನೂ ಬಡತನ, ಭ್ರಷ್ಟಾಚಾರ, ಮೂಢನಂಬಿಕೆ, ಅಸ್ಪೃಶ್ಯತೆಯಂತಹ ಪಿಡುಗುಗಳಿಂದ ಮುಕ್ತವಾಗಲು ಸಾಧ್ಯವಾಗಿಲ್ಲ ಎಂದರು.
ತಮ್ಮ ತಂದೆ ಶಿವಯ್ಯ ಹಿರೇಮಠ ಶಿಕ್ಷಕ ದಂಪತಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ತಾವು ವಿದ್ಯಾಥರ್ಿಯಾಗಿ ತುಂಗಳ ಶಾಲೆಯ ಕಟ್ಟೆಯ ಮೇಲೆ ಕುಳಿತು ಕಲಿತ ಅಕ್ಷರಗಳು, ಗಣಿತಜ್ಞಾನ ನನ್ನನ್ನು ಈ ಹುದ್ದೆಗೆ ಬರುವಂತೆ ಮಾಡಿದವು ಎಂದು ಮೇಜರ್ ಸಿದ್ಧಲಿಂಗಯ್ಯ ನೆನಪಿಸಿಕೊಂಡರು.
ಲೋಕಾರ್ಪಣೆ : ತುಂಗಳ ಗ್ರಾಮದವರಾದ ಪ್ರಸ್ತುತ ಕನರ್ಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಧನವಂತ ಹಾಜವಗೋಳ ಅವರ 'ಮರೆಯಲಾಗದ ಟಕ್ಕೋಡ ಮಾಸ್ತರ' ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಅವರು, ಆಗಿನ ಶಿಕ್ಷಕರ ಸಮರ್ಪಣಾ ಭಾವದ ಸೇವೆಯನ್ನು ಈ ಕೃತಿಯಲ್ಲಿ ದಾಖಲುಗೊಳಿಸಿದ್ದಾರೆ. ಒಬ್ಬ ಮಾದರಿ ಶಿಕ್ಷಕ ಹೇಗಿರಬೇಕು, ಹೇಗಿದ್ದರು ಎಂಬುದನ್ನು ಈ ಪುಟ್ಟ ಕೃತಿ ಕಟ್ಟಿಕೊಟ್ಟಿದೆ ಎಂದರು.
ಪ್ರೊ. ಧನವಂತ ಹಾಜವಗೋಳ ಬರೆದ 'ಆಯಗಾರರು ಮತ್ತು ಜಾಗತೀಕರಣ' ಕೃತಿಯನ್ನು ಮುರುಘೇಂದ್ರ ಸಿಂಧೂರ, 'ಬಿತ್ತದೆ ಬೆಳೆಯದು' ಕೃತಿಯನ್ನು ಸಿ. ಎಂ. ನೇಮಗೌಡ ಹಾಗೂ 'ಧಾರವಾಡ ಜಿಲ್ಲೆಯ ದಲಿತ ಕವಿಗಳು' ಎಂಬ ಕೃತಿಯನ್ನು ದಶರಥ ಟಕ್ಕೋಡ ಅವರು ಬಿಡುಗಡೆ ಮಾಡಿದರು.
ಸವದತ್ತಿ ಬಿಆರ್ಸಿ ಸಂಪನ್ಮೂಲ ವ್ಯಕ್ತಿ ಬಿ. ಆಯ್. ಚಿನಗುಡಿ ಕೃತಿ ಪರಿಚಯ ಮಾಡಿ, 'ಮರೆಯಲಾಗದ ಟಕ್ಕೋಡ ಮಾಸ್ತರ' ಕೃತಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಮಾದರಿ ಕೃತಿಯಾಗಿದೆ. ಇದು ಈಗಿನ ಶಿಕ್ಷಕರಿಗೆ ಪ್ರೇರಣೆ ಒದಗಿಸುವುದು ಎಂದರು. ನಿವೃತ್ತ ಶಿಕ್ಷಕರಾದ ಎಂ. ಎಸ್. ಸಿಂಧೂರ, ಡಿ. ಟಿ. ಟಕ್ಕೋಡ, ಶಿವಯ್ಯ ಹಿರೇಮಠ, ಬಿ. ಡಿ. ಯಾದವ, ವಿಠ್ಠಲ ಗಿರಡ್ಡಿ ಇವರಿಗೆ ಗುರುವಂದನೆಯನ್ನು ಸಲ್ಲಿಸಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ದಶರಥ ಟಕ್ಕೋಡ, ವಿಠ್ಠಲ ಗಿರಡ್ಡಿ ಅವರು ಮಾತನಾಡಿದರು. ತಮ್ಮ ಸೇವಾ ಅವಧಿಯ ಸವಿನೆನಪುಗಳನ್ನು ಹಂಚಿಕೊಂಡರು. ಈ ಶಾಲೆಯ ವಿದ್ಯಾಥರ್ಿಗಳಾದ ಧನವಂತ ಹಾಜವಗೋಳ ಮತ್ತು ಬೆಳಗಾವಿ ಡಯಟ್ ಪ್ರಾಚಾರ್ಯರಾದ ಮುರುಘೇಂದ್ರ ಸಿಂಧೂರ ಇವರನ್ನು ಈಗಿನ ಶಾಲಾ ಶಿಕ್ಷಕರು ಸನ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಭೀಮಪ್ಪ ಗೊಲಬಾವಿ ವಹಿಸಿದ್ದರು. ಜಮಖಂಡಿ ಸಿಟಿಇ ಪ್ರಿನ್ಸಿಪಾಲ್ ಮತ್ತು ಸಹ ನಿದರ್ೆಶಕ ರಾಜು ನಾಯ್ಕ, ಲೇಖಕ ಪ್ರೊ. ಧನವಂತ ಹಾಜವಗೋಳ, ತಾಲೂಕು ಪಂಚಾಯತ್ ಸದಸ್ಯರಾದ ಶೋಭಾ ಗೌಡಪ್ಪ ಹೊಸೂರು, ಎಪಿಎಂಸಿ ಸದಸ್ಯರಾದ ಶಾರದಾ ಕಲ್ಲಪ್ಪ ಲಿಂಗನೂರ, ತುಂಗಳ ಶಾಲೆಯ ಮುಖ್ಯಾಧ್ಯಾಪಕಿ ಎಸ್. ಬಿ. ಜಮಖಂಡಿ, ಶಿವಲಿಂಗಪ್ಪ ಮೈಗೂರ, ಅಬ್ಬಾಸ್, ತಿಮ್ಮಣ್ಣ ಗಿರಡ್ಡಿ, ರಮೇಶ ಹಾಜವಗೋಳ ಇದ್ದರು.