ಕಾರವಾರ ಪಾಸ್ಟಿಕ್ ಕಸ ಬೆಳಗಾವಿ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಗೆ

ಜಿಲ್ಲೆಯಲ್ಲೇ ಪ್ರಥಮ: 

ಕಾರವಾರ ಪಾಸ್ಟಿಕ್ ಕಸ ಬೆಳಗಾವಿ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಗೆ

ಕಾರವಾರ: ಇಲ್ಲಿನ ಶಿರವಾಡ ಕಸ ಸಂಗ್ರಹ ಘನತ್ಯಾಜ್ಯ ಘಟಕದಿಂದ ಪ್ಲಾಸ್ಟಿಕ್ನ್ನು ಇನ್ನು ಮುಂದೆ ಪ್ರತಿವಾರ ಟ್ರಕ್ನಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದೆ. 

ಶಿರವಾಡ ಘಟಕದಲ್ಲಿನ ಬೇರ್ಪಡಿಸಿದ ಪ್ಲಾಸ್ಟಿಕ್ನ್ನು ಸಿಮೆಂಟ್ ಕಾಖರ್ಾನೆಯಲ್ಲಿ ಮರುಬಳಸಲು ಕೊಂಡಯ್ಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ ಪ್ರಯೋಗವನ್ನು ಮೊದಲ ಬಾರಿಗೆ ಆರಂಭಿಸಿದ ಕೀತರ್ಿ ಕಾರವಾರ ನಗರಸಭೆಗೆ ಇದೀಗ ಪ್ರಾಪ್ತಿಯಾಗಿದೆ. ಪ್ಲಾಸ್ಟಿಕ್ ತುಂಬಿದ 45 ಬಂಡಲ್ಗಳನ್ನು ಟ್ರಕ್ ಮೊದಲ ಬಾರಿಗೆ ಹೊತ್ತು ಬೆಳಗಾವಿಯತ್ತ ಸಾಗಿತು. 

ತ್ಯಾಜ್ಯ ಪ್ಲಾಸ್ಟಿಕ್ ಇದೀಗ ದಾಲ್ಮಿಯಾ ಸಿಮೆಂಟ್ ಕಾಖರ್ಾನೆಯಲ್ಲಿ ಮರು ಬಳಕೆಯಾಗಲಿದೆ. ಇನ್ನು ಮುಂದೆ ಪ್ರತಿವಾರಕ್ಕೊಮ್ಮೆ ಪ್ಲಾಸ್ಟಿಕ್ ಕಸ ತೆಗದುಕೊಂಡು ಹೋಗಲು ದಾಲ್ಮಿಯಾ ಕಂಪನಿಯ ಟ್ರಕ್ ಬರಲಿದೆ. ಇದಕ್ಕಾಗಿ ನಗರಸಭೆಗೆ ಉಚಿತ ಸೇವೆಯನ್ನು ದಾಲ್ಮಿಯಾ ಕಂಪನಿ ನೀಡಲು ಮುಂದಾಗಿದೆ. ಬೆಳಗಾವಿ ಯರವಾಡದಲ್ಲಿನ ಸಿಮೆಂಟ್ ಘಟಕಕ್ಕೆ ಕಾರವಾರದ ತ್ಯಾಜ್ಯ ಪ್ಲಾಸ್ಟಿಕ್ ಸಾಗಟವಾಗಲಿದೆ. ಪರಿಸರ ರಕ್ಷಣೆಯ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದ್ದು, ಶಿರವಾಡದ ಜನತೆ ಸಹ ತ್ಯಾಜ್ಯ ಪ್ರತಿವಾರ ಸಾಗಾಟ ವಾಗುವುದರಿಂದ ಸಮಾಧಾನದ ನಿಟ್ಟುಸಿರು ಬಿಡುವ ಲಕ್ಷಣಗಳಿವೆ. 

ದಾಲ್ಮೀಯ ಕಂಪನಿ ಪ್ಲಾಸ್ಟಿಕ್ ಸಾಗಾಟದ ಸೇವೆ ನೀಡಲು ಮುಂದಾಗಿದೆ ಎಂದು. ತ್ಯಾಜ್ಯದ ಮರುಬಳಕೆಯ ಪಯರ್ಾಯವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರವಾರ ನಗರಸಭೆ ಬಳಸಿಕೊಂಡಿದೆ ಎಂದು ಪೌರಾಯುಕ್ತ ಎಸ್.ಯೋಗೇಶ್ವರ ತಿಳಿಸಿದ್ದಾರೆ. ಶಿರವಾಡದ ಘನತ್ಯಾಜ್ಯ ಘಟಕದ ಸೂಕ್ತ ನಿರ್ವಹಣೆಗೆ ಸಹ ಹಲವು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.