ಹತ್ತರಿಗಿಯಿಂದ ಬೆಳಗಾವಿಗೆ ಲೋಕಲ್ ಬಸ್ ಬಿಡಲು ಪ್ರಯಾಣಿಕರ ಒತ್ತಾಯ

ಹತ್ತರಿಗಿಯಿಂದ ಬೆಳಗಾವಿಗೆ ಲೋಕಲ್ ಬಸ್ ಬಿಡಲು ಪ್ರಯಾಣಿಕರ ಒತ್ತಾಯ  Passengers demand to stop local buses from Hatarigi to Belgaum

ಹತ್ತರಿಗಿಯಿಂದ ಬೆಳಗಾವಿಗೆ ಲೋಕಲ್ ಬಸ್ ಬಿಡಲು ಪ್ರಯಾಣಿಕರ ಒತ್ತಾಯ  

ಯಮಕನಮರಡಿ 14: ಸಮೀಪದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ ಹತ್ತರಗಿ ಬಸ್ ನಿಲ್ದಾಣಕ್ಕೆ ಬೆಳಗಾವಿ ದಾವಣಗೆರೆ ಹುಬ್ಬಳ್ಳಿ ಬೆಂಗಳೂರು ಮಂಗಳೂರು ಕಡೆಗೆ ಹೋಗುವ ಬಸ್ಸುಗಳು ಬರದೇ ಇದ್ದ ಕಾರಣ ಪ್ರಯಾಣಿಕರಿಗೆ ಭಾರಿ ತೊಂದರೆ ಆಗುತ್ತಿದೆ ಬಸ್ಸಿನವರು ಬಸ್ ನಿಲ್ದಾಣಕ್ಕೆ ಬರದೆ ನೇರವಾಗಿ ಹೊರಗಡೆಯಿಂದ ಬೆಳಗಾವಿ ಕಡೆಗೆ ಹೋಗುತ್ತಿದ್ದಾರೆ ಇದರಿಂದಾಗಿ ಬೆಳಗಾವಿಗೆ ಹೋಗಲು ಬಾರಿ ತೊಂದರೆಯಾಗುತ್ತಿದ್ದು ಕಾರಣ ಹತ್ತರಿಗಿಯಿಂದ ಬೆಳಗಾವಿಗೆ ಪ್ರತಿ ಒಂದು ಗಂಟೆಗೆ ಲೋಕಲ್ ಬಸ್ ಬಿಡುವಂತೆ ಒತ್ತಾಯಿಸುತ್ತಿದ್ದಾರೆ. 

ಈ ಕುರಿತು ಸಾಕಷ್ಟು ಸಲ ಸಂಬಂಧ ಪಟ್ಟ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಪತ್ರಗಳನ್ನು ಕಳಿಸಿದರು ಸಹಿತ ಯಾವುದೇ ತರದ ಅನುಕೂಲತೆ ಆಗುತ್ತಿಲ್ಲ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬೆಳಗಾವಿ ಕಡೆಗೆ ಹೋಗಬೇಕಾದರೆ ಹೊರಗಡೆ ಜೊತಬಿದ್ದು ಹೋಗುವ ಪರಿಸ್ಥಿತಿ ಉಂಟಾಗಿದೆ ಪ್ರತಿನಿತ್ಯವು ವಿದ್ಯಾರ್ಥಿಗಳ ಗೋಳನ್ನು ಕೇಳುವರೇ ಇಲ್ಲದಂತಾಗಿದೆ.  

ಪುರುಷರು ಪ್ರಯತ್ನ ಮಾಡಿ ಬಸ್ಸಿನಲ್ಲಿ ಹತ್ತುತ್ತಾರೆ ಆದರೆ ವಿದ್ಯಾರ್ಥಿನಿಯರು ಬಸ್ಸಿನಲ್ಲಿ ಹತ್ತುವ ಸಮಯದಲ್ಲಿ ಬಸ್ಸನ್ನು ಓಡಿಸಿಬಿಡುತ್ತಾರೆ ತಮ್ಮ ಭವಿಷ್ಯಕ್ಕಾಗಿ ಬೇರೆ ಕಡೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಯರು ಹೋಗಬೇಕಾದರೆ ಭಾರಿ ತೊಂದರೆ ಕೊಡುತ್ತಿದ್ದು ಇದರಿಂದಾಗಿ ಹತ್ತಿರಗಿ ಇಂದ ನೇರವಾಗಿ ವಿದ್ಯಾರ್ಥಿಗಳಿಗಾಗಿ ಬೆಳಗಾವಿ ಒಂದು ಲೋಕಲ್ ಬಸ್ಸನ್ನು ಪ್ರಾರಂಭಿಸಿದರು ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾದಂತಾಗುತ್ತದೆ ಅಲ್ಲದೆ ಕೇವಲ ಆಧಾರ್ ಕಾರ್ಡ್‌ ತೋರಿಸಿ ಪ್ರತಿನಿತ್ಯವೂ ಪ್ರಯಾನಿಸುವ  ಮಹಿಳಾ  ಮನಿಗಳು  ಹೆಚ್ಚಾಗಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಕೇವಲ ವಿದ್ಯಾರ್ಥಿಗಳಿಗಾಗಿ ಒಂದು ಬಸ್ ಪ್ರಾರಂಭಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ. 

 ಕಾರಣ ಕೆಎಸ್‌ಆರ್ ಟಿ ಸಿ ಸಂಕೇಶ್ವರ ಘಟಕದಿಂದ ಕೂಡಲೇ ಬಸ್ಸನ್ನು ಪ್ರಾರಂಭಿಸಬೇಕು ಇಲ್ಲವಾದಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು ಬೀದಿಗಿಳಿಯುವ ಪರಿಸ್ಥಿತಿ ಉಂಟಾಗುತ್ತದೆ ಯಮಕನಮರಡಿ ಗ್ರಾಮವು ಹುಕ್ಕೇರಿ ತಾಲೂಕಿನ ಮೂರನೇ ಕೇಂದ್ರವಾಗಿದ್ದು ಈ ಗ್ರಾಮಕ್ಕೆ ಕೆ ಎಸ್ ಆರ್ ಟಿ ಸಿ ಇಲಾಖೆಯವರು ಒಂದು ಉಪಘಟ್ಟಕವನ್ನು ಏಕೆ ಪ್ರಾರಂಭಿಸಬಾರದು ಎಂದು ಸಾರ್ವಜನಿಕ ಪ್ರಯಾಣಿಕರ ಅನಿಸಿಕೆಯಾಗಿದೆ ವರದಿ ಗೋಪಾಲ್ ಚಪನಿ ಪತ್ರಕರ್ತರು ಸಮಾಜ ಸೇವಕರು ಯಮಕನಮರಡಿ ಹತ್ತರಗಿ.