ಪಕ್ಷದ ಅಭ್ಯರ್ಥಿಗಳ ಭರ್ಜರಿ ಜಯಭೇರಿ: ವಿಜಯೋತ್ಸವ
ಸಿಂದಗಿ 25; ಕರ್ನಾಟಕ ರಾಜ್ಯದಲ್ಲಿ ನಡೆದ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಗಳಿಸಿದ ಪ್ರಯುಕ್ತ ಗೋಲಗೇರಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಮಹಾದೇವ ರಾಠೋಡ, ಮಡಿವಾಳ ನಾಯ್ಕೋಡಿ, ಬಾಬು ಜಾಲವಾದಿ, ನಿಂಗನಗೌಡ ಪೋಲಿಸಪಾಟೀಲ, ಶ್ರೀಶೈಲ ಹತ್ತರಕಿ, ಶಾಂತಗೌಡ ಬಿರಾದಾರ, ಶ್ರೀಶೈಲ ಗಡಿಗೇನವರ, ನಿಂಗಣ್ಣ ಚಲವಾದಿ, ಈರ್ಪ ಚಲವಾದಿ, ಶಿವಾನಂದ ಹಿರೇಮಠ, ಗೋಲ್ಲಾಳಪ್ಪ ಮಾದರ, ಬಸಪ್ಪ ಮಾದರ, ಲಕ್ಷ್ಮಣ ಕಲಾಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.