ವಯಸ್ಸಿನ ಅಂತರವಿಲ್ಲದೆ ಹೋಳಿ ಸಂಭ್ರಮದಲ್ಲಿ ಭಾಗಿ

ವಯಸ್ಸಿನ ಅಂತರವಿಲ್ಲದೆ ಹೋಳಿ ಸಂಭ್ರಮದಲ್ಲಿ ಭಾಗಿ Participate in Holi celebrations regardless of age


ಮೂಡಲಗಿ 04 : ಹೋಳಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯುವ ಜನತೆ ಬಣ್ಣದಲ್ಲಿ ಮಿಂದೆದ್ದಿದ್ದಾರೆ. ಬುಧವಾರ ಬೆಳಗ್ಗೆ ಆರಂಭವಾದ ಬಣ್ಣದ  ಹಬ್ಬದ ವಾತಾವರಣ ಮಧ್ಯಾಹ್ನದವರೆಗೂ ಮುಂದುವರೆಯಿತು. 

ವಯಸ್ಸಿನ ಅಂತರವಿಲ್ಲದೆ, ದೊಡ್ಡವರಿಂದ ಹಿಡಿದು ಸಣ್ಣವರವರೆಗೂ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಹೆಣ್ಣುಮಕ್ಕಳು ತಮ್ಮ ಮನೆಯ ಅಕ್ಕಪಕ್ಕದವರಿಗೆ  ಬಣ್ಣ ಹಚ್ಚಿ  ಹಬ್ಬ ಆಚರಣೆಯಲ್ಲಿ ಭಾಗಿಯಾದರು. ಯುವಕರು ಎಂದಿನಂತೆ ರಸ್ತೆ ಬದಿಯ ಇಕ್ಕೆಲಗಳಲ್ಲಿ ಬಣ್ಣ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಸ್ನೆಹಿತರು ಎಷ್ಟೆ ಬೇಡ ಎಂದರೂ, ಬಲವಂತ ಮಾಡಿ ಬಣ್ಣ ಹಾಕುವ ಸಂಭ್ರಮ ಎಲ್ಲೇಡೆ ಮನೆ ಮಾಡಿತ್ತು.  

ತಾಲ್ಲೂಕಿನ ಡಿಡಿಪಿಐ ಅಜೀತ ಮನ್ನಿಕೇರಿ ಅವರು ಯುವಕರೊಂದಿಗೆ ಸೇರಿ ರಂಗಿನಾಟದಲ್ಲಿ ಪಾಲ್ಗೊಂಡು ಹೋಳಿ ಹಬ್ಬದ ಸಂಭ್ರಮಕ್ಕೆ ಮೆರಗು ತಂದರು. ನಗರದ ಕಲ್ಲೇಶ್ವರ ವೃತ್ತದಲ್ಲಿ ಜಮಾಯಿಸಿದ್ದ ಯುವಕರು ಡಿಡಿಪಿಐ ಅಜೀತ್ ಮನ್ನಿಕೇರಿ ಅವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರೆ ಅಷ್ಟೇ ಸಂತೋಷ ಸಂಭ್ರಮದಿಂದ ತಾವು ಯುವಕರೊಂದಿಗೆ ಬೆರೆತು ಹೋಳಿ ಹಬ್ಬವನ್ನು ಸಂಭ್ರಮಿಸಿದರು.