ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಪಾಲಕರ ಸಭೆ: ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ

Parents' meeting at Koppal District Sports Hostel: Outstanding athletes honored

ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಪಾಲಕರ ಸಭೆ: ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ 

ಕೊಪ್ಪಳ 01: ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳ ಪಾಲಕರ ಸಭೆಯಲ್ಲಿ ಸಾಧಕ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುತ್ತಾರೆ. ಉತ್ತಮ ರೀತಿಯಲ್ಲಿ ಕ್ರೀಡಾ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಕ್ರೀಡಾ ಇಲಾಖೆಯಿಂದ ಕ್ರೀಡಾಪಟುಗಳಿಗೆ ನೀಡಲಾಗುವ ಕ್ರೀಡಾ ಸೌಲಭ್ಯಗಳಾದ ನುರಿತ ಎನ್‌ಐಎಸ್ ತರಬೇತುದಾರರಿಂದ ದೈನಂದಿನ ಕ್ರೀಡಾ ತರಬೇತಿ ನೀಡುವುದು, ಕ್ರೀಡಾ ತರಬೇತಿಗೆ ಅವಶ್ಯಕ ಉನ್ನತ ಸಾಮಾಗ್ರಿ, ಅಲ್ಲದೇ ಕ್ರೀಡಾ ಸಾಮಾಗ್ರಿಗಳಾದ ಟ್ರ್ಯಾಕ್‌ಶ್ಯೂಟ್ ಟೀಶರ್ಟ್ಸ್‌, ಶ್ಯೂ ಇನ್ನಿತರೆ ಸಾಮಾಗ್ರಿ, ನುರಿತ ಶಿಕ್ಷಕರಿಂದ ಟ್ಯೂಷನ್ ನೀಡಲಾಗುವುದು. ಪೌಷ್ಠಿಕಾಂಶಯುಕ್ತ ಊಟೋಪಹಾರವನ್ನು ನೀಡಲಾಗುವುದು. ಒಳಾಂಗಣ ಕ್ರೀಡಾಂಗಣ, ಜಿಮ್ ಹಾಗೂ ಈಜುಕೊಳ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿಯನ್ನು ನೀಡಿದರು. ಅಥ್ಲೆಟಿಕ್ಸ್‌ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ಕ್ರೀಡಾ ಸಾಧನೆಗೈದ ಕ್ರೀಡಾಪಟುಗಳಾದ ಜಗದೀಶ, ರಾಹುಲ್, ಪ್ರಜ್ವಲ್, ಸಂಗೀತಾ, ವಿದ್ಯಾ ಮತ್ತು ವಾಲಿಬಾಲ್ ಕ್ರೀಡಾಪಟುಗಳಾದ ಶಿಲ್ಪಾ, ಸ್ಪೂರ್ತಿ, ಶಾರದಾ, ದುರಗಮ್ಮ, ಅನಿತಾ, ಕಾವೇರಿ, ಭೂಮಿಕಾ, ಪೂಜಾ, ಶಶಾಂಕ್, ಮೋಹನ್, ವಿಜಯ್, ಕಾಸಿಂಸಾಬ, ಗುರುನಾಥ, ಯಮನೂರ ಇಲಾಖೆಯಿಂದ ಈ ಎಲ್ಲಾ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಖೋಖೋ ತರಬೇತುದಾರರಾದ ಎ.ಎನ್‌. ಯತಿರಾಜು, ಅಥ್ಲೆಟಿಕ್ಸ್‌ ತರಬೇತುದಾರರಾದ ರೋಹಿಣಿ ಪರ್ವತಿಕರ್, ವಿಷಯ ನಿರ್ವಾಹಕರಾದ ಬಿ.ಕೀರ್ತಿವರ್ಧನ್, ವಾಲಿಬಾಲ್ ತರಬೇತುದಾರರಾದ ಸುರೇಶ ಹಾಗೂ ಕಮಲ್ ಸಿಂಗ್ ಬಿಶ್ಟ್‌, ಅಥ್ಲೆಟಿಕ್ಸ್‌ ತರಬೇತುದಾರರಾದ ವಿಶ್ವನಾಥ ಕರ್ಲಿ, ಖೇಲೋ ಇಂಡಿಯಾ ವಾಲಿಬಾಲ್ ತರಬೇತಿದಾರರು ದೀಪಾ, ಕಚೇರಿ ಸಿಬ್ಬಂದಿಗಳಾದ ಹನುಮೇಶ ಪೂಜಾರ, ತುಕಾರಾಮ ರಂಜಪಲ್ಲಿ, ಲಕ್ಷ್ಮೀ ಹಾಗೂ ಮತ್ತಿತರರು ಉಪಸ್ಥಿತರಿದ್ದರು.