ಪೋಷಕ ಶಿಕ್ಷಕರ ಸಭೆ ಯಶಸ್ವಿ: ಶಿಕ್ಷಣದಿಂದಲೇ ದೇಶದ ಪ್ರಗತಿ

ಪೋಷಕ ಶಿಕ್ಷಕರ ಸಭೆ ಯಶಸ್ವಿ: ಶಿಕ್ಷಣದಿಂದಲೇ ದೇಶದ ಪ್ರಗತಿ Parent-Teacher Meeting Successful: Country's Progress Comes from Education

                  ಹೊಸಪೆಟೆ 16: ಸ.ಕಿ.ಪ್ರ ಶಾಲೆ 88-ಮುದ್ಲಾಪುರದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪೋಷಕ-ಶಿಕ್ಷಕರ ಮಹಾಸಭೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಗರಸಭೆಯ ನೂತನ ಉಪಾಧ್ಯಕ್ಷರಾದ ಜೀವರತ್ನಂರವರು ಮಡಿಕೆಗೆಧಾನ್ಯ ಹಾಕಿ ನಂತರಜವಾಹರ್‌ಲಾಲ್‌ನೆಹರುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ದೇಶದ ಭವಿಷ್ಯದ ನಿರ್ಮಾತೃಗಳಾದ ಇಂದಿನ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರದೇಶದ ಪ್ರಗತಿ ಸಾಧ್ಯ ಮಕ್ಕಳು ದಿನಂಪ್ರತಿ ಶಾಲೆಗೆ ಹಾಜರಾಗಿಉತ್ತಮ ಶಿಕ್ಷಣ ಪಡೆಯಬೇಕು ಪೋಷಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು.88-ಮುದ್ಲಾಪುರ ಸರ್ಕಾರಿ ಶಾಲೆಯಲ್ಲಿಉತ್ತಮ ಶಿಕ್ಷಕರಿದ್ದು,ಉತ್ತಮ ಮೂಲಭೂತ ಸೌಕರ್ಯಗಳಿವೆ. ಹಾಗಾಗಿ ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ತಿಳಿಸಿದರು. 

             ಮುಖ್ಯ ಗುರುಗಳಾದ ಬಸವರಾಜ.ಕೆರವರುಕಾರ್ಯಕ್ರಮದಲ್ಲಿ ಮಾತನಾಡಿಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಷಕ-ಶಿಕ್ಷಕರ ಮಹಾಸಭೆಆಯೋಜಿಸಲಾಗಿದೆ.ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಮಕ್ಕಳ ಉತ್ತಮಆರೋಗ್ಯಕ್ಕಾಗಿಕೆನೆಭರಿತ ಹಾಲು, ಬಿಸಿ ಊಟ, ಮೊಟ್ಟೆ/ಬಾಳೆಹಣ್ಣು, ಬೇಯಿಸಿದ ಕಾಳು ನೀಡಲಾಗುತ್ತಿದೆ.ಅಲ್ಲದೆಉಚಿತ ಸಮವಸ್ತ್ರ,ಉಚಿತ ಪಠ್ಯಪುಸ್ತಕಎಲ್ಲರೀತಿಯ ಸೌಲಭ್ಯ ನೀಡುತ್ತಿದೆ.ಈ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಹಾಗೂ ಪೋಷಕರು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು.ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ದತಿಶಿಕ್ಷಾರ್ಹ ಅಪರಾಧವಾಗಿದ್ದು,

            ಪೋಷಕರು ಬಾಲ್ಯವಿವಾಹ, ಬಾಲಕಾರ್ಮಿಕಪದ್ದತಿತಪ್ಪಿಸಲು ಸಹಕರಿಸಬೇಕು.ಆದ್ದರಿಂದ 14 ವಯಸ್ಸಿನ ಎಲ್ಲಾ ಮಕ್ಕಳು ತಪ್ಪದೇ ಶಾಲೆಯಲ್ಲಿರುವಂತೆ ಪೋಷಕರು ನಿಗಾವಹಿಸಬೇಕು.ಶಾಲೆಯಅಭಿವೃದ್ಧಿಗೆ ಪೋಷಕರ ಸಹ ಅಗತ್ಯಎಂದು ತಿಳಿಸಿದರು.ನಂತರ ನಗರಸಭೆಯನೂತನಉಪಾಧ್ಯಕ್ಷರಾದಜೀವರತ್ನಂಅವರನ್ನು ಶಾಲಾವತಿಯಿಂದಅಭಿನಂದಿಸಲಾಯಿತು. ಈ ಕಾರ್ಯಕ್ರಮಕ್ಕೆಎಸ್‌.ಡಿ.ಎಂ.ಸಿ.ಉಪಾಧ್ಯಕ್ಷರಾದದುರುಗಣ್ಣ,ಎಸ್‌.ಡಿ.ಎಂ.ಸಿ.ಸದಸ್ಯರಾದಧರ್ಮಣ್ಣ,ರೇಣುಕಾ ಪಾಟೀಲ್, ಹುಲಿಗೆಮ್ಮಊರಿನ ಮುಖಂಡರಾದತಾಯಪ್ಪ, ಶಿಕ್ಷಕರಾದ ಎಸ್‌.ರಮೇಶ್, ಪಾರ್ವತಿ.ಬಿ.ಭಜಂತ್ರಿ, ರಾಧಾ.ಪಿ.ಎಸ್‌. ಹಾಗೂ ಪೋಷಕರು ಹಾಜರಿದ್ದರು.