ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

Panchkalyana Pratistha Mahotsava

  ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ 

ಯಮಕನಮರಡಿ 06: ಹುಕ್ಕೇರಿ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಪ್ರಾರಂಬವಿರುವ ಜೈನ ಸಮುದಾಯದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವದ ಗುರುವಾರ ದಿ 6 ರಂದು ರಾಜ್ಯಾಭಿಷೇಕ ಧಿಕ್ಷಾ ಕಲ್ಯಾಣಿಕ, ಭೊಗದಿಂದ ಪತದ ಕಡೆಗೆ ಹಾಗೂ ಚಿಕ್ಕಮಕ್ಕಳ ಮೌಜಿ ಸಮಾರಂಭ ಮತ್ತು ಮಹಾಶಾಂತಿ ಧಾರಾ ಮಂತ್ರ ಪಠಣ ಧಿಕ್ಷಾ ಕಲ್ಯಾಣಕ ಅರ್ಘ್ಯ ಫ್ರದಾನ ಬಲಿಯಕ್ಷ ನೃತ್ಯ, ಪೂಜ್ಯ ಆಚಾರ್ಯ ಶ್ರೀಗಳಿಂದ ಮಂಗಳ ಪ್ರವಚನ, ರಾಜ್ಯಾಭಿಷಢಕ, ರಾಜವೈಭವ, 56 ದೇಶದ ರಾಜರಿಂದ ಕಪ್ಪ ಕಾಣಿಕೆ ಸಮರೆ​‍್ಣ,  

ರಾಜ ಧರ್ಬಾರದಲ್ಲಿ ನೃತ್ಯ ವೈರಾಗ್ಯ ಭಾವನೆ ಲೊಕಾಂಕಿತ ದೇವಾಗಮನ, ವೈರಾಗ್ಯ ಸ್ತುತಿ, ಧಿಕ್ಷಾ ವನದ ಕೆಡೆಗೆ ಭಗವಂತನ ಭವ್ಯ ಮೇರವಣಿಗೆ, ಧಿಕ್ಷಾ ಕಲ್ಯಾಣ ಮಹೋತ್ಸವ, ಶಾಸ್ತ್ರ ಪ್ರವಚನ, ಕಮಟೋಪಸರ್ಗ ಪಾರ್ಶ್ವನಾಥ ತಿರ್ಥಂಕರ ಕುರಿತು ಭವ್ಯನಾಟಕ ಸವಾಲು ಕಾರ್ಯಕ್ರಮ, ಸಂಗೀತ ಆರತಿ ಇತ್ಯಾದಿ ಕಾರ್ಯಕ್ರಮಗಳು ಜರುಗಿ ಜೈನ ಧರ್ಮದ ಪರಂಪರೆಯನ್ನು ಪ್ರಸಾರ ಮಾಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.  

ಕಾರ್ಯಕ್ರಮದಲ್ಲಿ  ಖಾನಾಪುರ ಗ್ರಾಮದ ಪೂಜ್ಯರಾದ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದು ಬೆಳಗಿನ ಕಾರ್ಯಕ್ರಮ  ಯಶಸ್ವಿಗೊಳಿಸಿದರು ಸಾಯಂಕಾಲ ಪ ಪೂ ವಾತ್ಸಲ್ಯ ವಾರಿದಿ ಧರ್ಮಕೇಶರಿ 1008 ಜೀನಸೇನ ಮುನಿ ಮಹಾರಾಜರ ಪ್ರವಚನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನ ಸಮೀತಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸಧಸ್ಯರು ಉಪಸ್ಥಿತರಿದ್ದು ಬೇರೆ ಊರಿನಿಂದ ಬಂದ ಜೈನ ಮುಖಂಡರನ್ನು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.