ಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ಪಂಚಾಚಾರ್ಯರಿಗಿಲ್ಲ.

ಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ಪಂಚಾಚಾರ್ಯರಿಗಿಲ್ಲ.  Panchacharyas are not qualified to speak about Basavanna.

ಬಸವಣ್ಣನವರ ಬಗ್ಗೆ ಮಾತನಾಡುವ ಯೋಗ್ಯತೆ ಪಂಚಾಚಾರ್ಯರಿಗಿಲ್ಲ.  

ವಿಜಯಪುರ  29:  ವಿಶ್ವಗುರು ಬಸವಣ್ಣನವರ ಬಗ್ಗೆ ಇತ್ತೀಚಿಗೆ ದಾವಣಗೆರೆ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಪೂಜ್ಯರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ಯೋಗ್ಯತೆಯನ್ನು ಬಹಿರಂಗಪಡಿಸಿದ್ದಾರೆ. ತಮ್ಮಷ್ಟಕ್ಕೆ ತಾವೇ ಜಗದ್ಗುರುಗಳು ಎಂದು ಘೋಷಣೆ ಮಾಡಿಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರೆಯುವ ಪಂಚಾಚಾರ್ಯರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗ್ಗೆ ಮಾತನಾಡುವ ನೈತಿಕತೆ ಇವರಿಗಿಲ್ಲವೆಂದು ರೈತ ಮುಖಂಡ ಹಾಗೂ ಬಸವ ವಂಶಸ್ಥರಾದ ಅರವಿಂದ ಕುಲಕರ್ಣಿ ಪಂಚಾಚಾರ್ಯರ ವಿರುದ್ಧ ಹರಿಹಾಯ್ದಿದ್ದಾರೆ. ಮಂಗಳವಾರದಂದು ವಿಜಯಪುರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆದಿದ್ದ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿದ ಅವರು ಪಂಚ ಪೀಠದ ರಂಭಾಪುರ ಶ್ರೀಗಳೊಬ್ಬರು ಪತ್ರಿಕಾ ಹೇಳಿಕೆ ನೀಡಿ ವೀರಶೈವ ಧರ್ಮದಲ್ಲಿ ಪಂಚಪೀಠಗಳಲ್ಲಿ ಇರುವಷ್ಟು ಮಹತ್ವ ಪಾವಿತ್ಯ್ರ ಬೇರೆ ಮಠಗಳಿಗಿಲ್ಲ ಎಂದು ಹೇಳಿ ವಿಶ್ವಗುರು ಬಸವಣ್ಣನವರು ಪಂಚಾಚಾರ್ಯರ ತತ್ವಗಳಿಗೆ ಮಾರುಹೋಗಿ 12ನೇ ಶತಮಾನದಲ್ಲಿ ಪಂಚಾಚಾರ್ಯರ ಧರ್ಮ ಸ್ವೀಕರಿಸಿದರೆಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆ ಪ್ರಕಾರ ಬಸವಣ್ಣನವರ 12ನೇ ಶತಮಾನ ಪಂಚಾಚಾರದ್ದು 15ನೇ ಶತಮಾನ. ಇದನ್ನು ಅರಿತುಕೊಳ್ಳದೆ ಮನಸ್ಸಿಗೆ ಬಂದಂತೆ ಮಾತನಾಡಿಕೊಳ್ಳುವುದು. ಇವರ ಪೀಠಕ್ಕೆ ಶೋಭೆ ತರುವಂತಹದ್ದಲ್ಲ. ಬಸವಣ್ಣನವರ ವಿರುದ್ಧ ಹೇಳಿಕೆ ಮೂಲಕ ತಮ್ಮ ಸಣ್ಣತನವನ್ನು ತೋರಿಸಿ ಕೊಟ್ಟಿದ್ದಾರೆ. ಬಸವಣ್ಣನವರು ಹೊಸ ಪಂಗಡ ಅಥವಾ ಹೊಸ ಪಂಥವನ್ನು ಸೃಷ್ಟಿಸಿಲ್ಲವೆಂದು ಹೇಳುತ್ತಾ. ಬಸವ ತತ್ವಗಳನ್ನು ಪಂಚಪೀಠಗಳು ಪ್ರಚಾರ ಮಾಡುತ್ತಿವೆ ಆದರೆ ಬಸವ ತತ್ವದ ಅನುಯಾಯಿಗಳು ರೇಣುಕಾಚಾರ್ಯರ ತತ್ವ ಪ್ರಚಾರ ಮಾಡುವದಿಲ್ಲವೆಂದು ಇದು ದೊಡ್ಡ ತಪ್ಪು ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ಗಮನಿಸಿದರೆ ಪಂಚಾಚಾರ್ಯರಿಗೆ ತಮ್ಮ ತತ್ವದ ಮೇಲೆ ತಮಗೆ ನಂಬಿಕೆಯಿಲ್ಲ. ಅವರ ಪಂಚಾಚಾರ್ಯರ ತತ್ವಗಳು ಸುಳ್ಳು ಮತ್ತು ಗೊಳ್ಳಿನಿಂದ ಕೂಡಿದ್ದರಿಂದಲೇ ತಮ್ಮ ತತ್ವಗಳನ್ನು ಬಿಟ್ಟು ಬಸವಣ್ಣನವರ ತತ್ವಗಳನ್ನು ಪ್ರಚಾರ ಮಾಡಲು ಮುಂದಾಗಿದ್ದಾರೆ. ವೇಧಗಳು ಆಗಮನಗಳು ಶಾಸ್ತ್ರಗಳಲ್ಲಿ ಮತ್ತು ಬಸವಣ್ಣನವರ ಆದಿಯಾಗಿ ಎಲ್ಲ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಎಲ್ಲಿಯೂ ಪಂಚಾಚಾರ ಬಗ್ಗೆ ಉಲ್ಲೇಖವಿಲ್ಲ. ಇವರ ಹೇಳಿಕೆಯನ್ನು ಗಮನಿಸಿದರೆ ಪಂಚಾಚಾರ್ಯರಿಗೆ ಬಸವ ತತ್ವಗಳನ್ನಾಗಲಿ, ವಚನ ಸಾಹಿತ್ಯವನ್ನಾಗಲಿ ಬಿಟ್ಟರೆ ಇವರಿಗೆ ಬದುಕೆ ಇಲ್ಲ. ಬಸವಣ್ಣನವರನ್ನು ಜಗತ್ತೇ ಕೊಂಡಾಡುತ್ತಿರುವಾಗ ಪಂಚಾಚಾರ್ಯರು ಯಾವ ಲೆಕ್ಕ. ಆದರೆ ಪಂಚಾಚಾರ್ಯರು ಹೇಳುವ ತತ್ವಗಳು ಯಾವವು?. ನೀವು ಯಾವ ತತ್ವಗಳನ್ನು ಅನುಸರಿಸಿಕೊಂಡು ಬಂದಿದ್ದೀರಿ. ನಿಮ್ಮದು ವಚನ ಸಾಹಿತ್ಯವೋ? ಅಥವಾ ಶೈವ ಸಾಹಿತ್ಯವೋ?. ನಿಮ್ಮ ಯಾವ ಸಾಹಿತ್ಯವನ್ನು ಬಸವಣ್ಣನವರು ಉಪಯೋಗ ಮಾಡಿದ್ದಾರೆಂದು ಬಹಿರಂಗ ಪಡಿಸಿರಿ. ಸುಖಾ ಸುಮ್ಮನೆ ಬಸವಣ್ಣನವರಿಗೆ ಪದೇ ಪದೇ ಪಂಚಾಚಾರ್ಯರು ಕೆಣಕುವದು ಸರಿಯಲ್ಲ. ಅವರ ವ್ಯಕ್ತಿತ್ವಕ್ಕೆ ಪಂಚಾಚಾರ್ಯರು ತೃಣ ಸಮಾನರು. 12ನೇ ಶತಮಾನದಲ್ಲಿ ಬಸವಣ್ಣನವರ ಆದಿಯಾಗಿ ಎಲ್ಲ ಶರಣರು ರಚಿಸಿದ ವಚನಸಾಹಿತ್ಯವನ್ನು ಬಿಟ್ಟು ಪುರಾಣ ನಡೆಸಲಿ ಅಂದಾಗ ಇವರ ಬಂಡವಾಳ ಬಯಲಾಗುತ್ತದೆ. ಸೂರ್ಯನಿಗೆ ಉಗುಳಿದರೆ ಉಗಳಿದವರ ಮೈಮೇಲೆ ಬೀಳುತ್ತದೆ ಹೊರತು ಸೂರ್ಯನಿಗಲ್ಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು ಬಸವಣ್ಣನವರು. ಸಮಾನತೆ ತಂದು ಕೊಟ್ಟವರು ಬಸವಣ್ಣನವರು. ಆದರೆ ಜಗದ್ಗುರುಗಳು ಎಂದು ಹೇಳಿಕೊಳ್ಳುವ ಪಂಚಾಚಾರ್ಯರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರಿಗೆ ಪ್ರತ್ಯೇಕ ಎತ್ತರದ ಆಸನದ ವ್ಯವಸ್ಥೆ ಬೇಕು. ಉಳಿದ ಪಂಚಾಚಾರ್ಯರರ ಪೀಠಕ್ಕೆ ಸಂಬಂಧಿಸಿದ ಮಠಾಧೀಶರು ಅವರ ಕೆಳಗಿನ ಆಸನದಲ್ಲಿ ಇರುತ್ತಾರೆ. ಇಂತವರಿಗೆ ಸಮಾನತೆಯ ಅರ್ಥ ಗೊತ್ತಿದೆಯೇ ಹೇಗೆ?. ಬಸವಣ್ಣನವರು ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲವೆಂದು ಹೇಳಿದ ಬಸವಣ್ಣನವರು ವಿಶ್ವಕ್ಕೆ ಗುರುವಾಗಿದ್ದಾರೆ. ಪಂಚಾಚಾರ್ಯರು ಹೆಚ್ಚೆಂದರೆ ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಕೆಲವೇ ಕೆಲವು ರಾಜ್ಯಗಳಲ್ಲಿ ಇವರ ಪರಿಚಯ ಅಷ್ಟೇ. ಬಸವಣ್ಣನವರಂತೆ ಇವರೇನು ಸಮುದ್ರ ದಾಟಿ ಹೋಗಿದ್ದಾರೆ ಹೇಗೆ. ಮುಗ್ದ ಭಕ್ತರ ಹೆಗಲ ಮೇಲೆ ಅಡ್ಡ ಪಲ್ಲಕ್ಕಿ ಹೊರೆಸಿ ಇವರು ಬಂಗಾರದ ಕೀರೀಟವನ್ನು ಹಾಕಿಕೊಂಡು ಮೆರೆಯುವದು ಅಷ್ಟೇ ಗೊತ್ತು. ಇವರ ಈ ಸಿದ್ಧಾಂತ ಮಾನವ ಕುಲಕ್ಕೆ ಕೊಡುವ ಹಿಂಸೆ ಅಲ್ಲವೇ?. ಮಾತ್ತೆತ್ತಿದರೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೊಗಳೆ ಬಿಡುತ್ತಾರೆ. ಆದರೆ ಬಸವಣ್ಣನವರು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದಂತವರು. ಇಂತಹ ಬಸವಣ್ಣನವರ ತತ್ವಗಳನ್ನು ಅನುಸರಿಸದೆ ತಮ್ಮಷ್ಟಕ್ಕೆ ತಾವೇ ಜಗದ್ಗುರುಗಳು ಎಂದು ಹೇಳಿಕೊಳ್ಳುತ್ತಾ ಮುಗ್ಧ ಭಕ್ತರಿಗೆ ಶೋಷಣೆ ಮಾಡುತ್ತಿದ್ದಾರೆ. ಬಸವಣ್ಣನವರ ತತ್ವದ ಆದಾರದ ಮೇಲೆ ಆಗಿರುವ ವಿರಕ್ತ ಪೀಠಗಳೊಂದಿಗೆ ಕೂಡಿಕೊಳ್ಳುತ್ತೇವೆಂದು ಹೇಳುವ ನೀವು ಬಸವಣ್ಣವರನ್ನೇ ವಿರೋಧ ಮಾಡುತ್ತೀರಿ. ಹಾಗಿದ್ದರೆ ನೀವು ವಿರಕ್ತರೊಂದಿಗೆ ಕೂಡಿಕೊಳ್ಳುವುದು ಹೇಗೆ ಸಾಧ್ಯ?. ವಿರಕ್ತ ಪರಂಪರೆಯ ಮಠಗಳೆಲ್ಲಾ ಹಾಗೂ ಮಠದ ಪೀಠಾಧೀಪತಿಗಳು ಬಸವಣ್ಣನವರ ಅನುಯಾಯಿಗಳಾಗಿದ್ದಾರೆ. ಆದರೆ ನೀವು ಬಸವಣ್ಣನವರ ಅನುಯಾಯಿಗಳಿಂದ ಕಂದಕವೆಂದು ಹೇಗೆ ಹೇಳುತ್ತಿದ್ದೀರಿ. ಅವರ ಜೊತೆಗೆ ಬೆರೆಯಬೇಕೆಂಬ ಆಸೆ ಹೇಗೆ ಮಾಡುತ್ತೀರಿ. ಇದು ಕೇವಲ ನಿಮ್ಮ ಬುಟಾಟಿಕೆಯ ಮಾತುಗಳು ಆಗಿವೆ. ನೀವು ಹೇಳುವ ಪುರಾಣದಲ್ಲಿ ವಚನ ಸಾಹಿತ್ಯ ಬಿಟ್ಟು ಬೇರೆ ಸಾಹಿತ್ಯವಿಲ್ಲ. ಶರಣರು ರಚಿಸಿದ ವಚನ ಸಾಹಿತ್ಯ ಬಿಟ್ಟು ನೀವು ಪುರಾಣ ನಡೆಸುವುದು ಸಾಧ್ಯವಿಲ್ಲ. ಆದರೂ ನೀವು ಬಸವಣ್ಣನವರಿಗಿಂತಲೂ ಪಂಚಾಚಾರ್ಯರು ದೊಡ್ಡವರೆಂದು ಹೇಳುತ್ತಾ ತಿರುಗುತ್ತೀರಿ. ಬಸವಣ್ಣನವರಕ್ಕಿಂತಲೂ ದೊಡ್ಡರೆಂದು ಕೇಳಿಕೊಳ್ಳುವ ನೀವು ಅವರಿಗಿಂತಲೂ ಮಾಡಿದ ಘನಕಾರ್ಯವೆನೂ?. ಎಂಬುದನ್ನು ಸಾಭೀತು ಪಡಿಸಿರಿ. 4 ಜನರ ಮೇಲೆ ಅಡ್ಡ ಪಲ್ಲಕ್ಕಿ ಹೊರೆಸಿ ಬಂಗಾರದ ಕೀರೀಟವನ್ನು ಧರಿಸಿಕೊಂಡು ಮೆರೆಯುವುದೊಂದೆ ನಿಮಗೆ ಗೊತ್ತು. ಮನುಷ್ಯನ ಮೇಲೆ ಮನುಷ್ಯ ಹೊತ್ತುಕೊಂಡು ಹೋಗುವದು ಸತ್ತಾಗ ಮಾತ್ರ. ನೀವು ಭಕ್ತರನ್ನು ಷೋಷಣೆ ಮಾಡಿ ಹೆಗಲ ಮೇಲೆ ಪಲ್ಲಕ್ಕಿ ಹೊರೆಸಿ ಮೆರವಣಿಗೆ ಮಾಡಿಸಿಕೊಳ್ಳುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ. ಮತ್ತು ಇವರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಬೊಗಳೆ ಬಿಡುತ್ತಾ ಧರ್ಮದ ಹೆಸರಿನಲ್ಲಿ ಷೋಷಣೆ ಮಾಡುತ್ತಾ ಸಾಗುತ್ತಿದ್ದಾರೆ. ಕೀರೀಟವನ್ನು ಹಾಕಿಕೊಂಡು ಮೆರವಣಿಗೆ ಮಾಡಿಸಿಕೊಳ್ಳಲು ಇವರೇನು ದೇಶದ ರಾಜರಾ ಹೇಗೆ?. ಇವರೆಲ್ಲ ಪೊತರಾಜರಂತೆ.. ಬಸವಣ್ಣನವರು ಜಾತಿರಹಿತವಾದ ಲಿಂಗಾಯತ ಧರ್ಮವನ್ನು ಕರುಣಿಸಿದವರು. ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನ ಮಾನಕ್ಕಾಗಿ ಹೋರಾಟ ಮಾಡುವ  ಸಂದರ್ಭದಲ್ಲಿ ಪಂಚಾಚಾರ್ಯರು ಅದನ್ನು ತಪ್ಪಿಸಲು ಅಡ್ಡಗಾಲು ಹಾಕಿರುವುದು ಏತಕ್ಕೆ. ಇದು ಇವರ ಮಾನವ ಧರ್ಮವೇ ಹೇಗೆ?  ವೀರಶೈವರೂ ಲಿಂಗಾಯತ ಪದದ ವಿರೋಧಿಗಳು. ನೀವು ಚತುರಾಚಾರ್ಯರೇ? ಅಥವಾ ಪಂಚಾಚಾರ್ಯರೇ? ಚತುರಾಚಾರ್ಯರ ಪುರಾಣ ಏನು ಹೇಳುತ್ತದೆ. ಕೇದಾರದಲ್ಲಿ ನೀವು ಪ್ರಧಾನ ಅರ್ಚಕರೇ ಹೊರತು ಮಠಾಧಿಪತಿಯಲ್ಲ. ಪೂಜಾರಿ ಎಂಬ ಪದ ಜಗದ್ಗುರು ಪದವಲ್ಲ. ಎಂಬುದನ್ನು ಅರಿತುಕೊಂಡು ಇನ್ನು ಮುಂದಾದರು ಬಸವಣ್ಣವರ ಕುರಿತು ಇಲ್ಲಸಲ್ಲದ ಹೇಳಿಕೆಗಳನ್ನು ಬಿಟ್ಟು ಅವರ ಅನುಯಾಯಿಗಳಾಗಿ ಮುಂದುವರೆದರೆ ಮಾತ್ರ ನೀವು ಬೆಳೆಯಲು ಸಾಧ್ಯ ಎಂದರು. ಹಾಗೂ ವಿಜಯಾನಂದ ಕಾಶಪ್ಪನವರು ಪತ್ರಿಕಾ ಹೇಳಿಕೆ ನೀಡಿ ಕೂಡಲ ಸಂಗಮಕ್ಕೆ ಪಂಚಾಚಾರ್ಯರನ್ನು ಕರೆಯಿಸಿ ಪಾವನ ಮಾಡಲು ಹೊರಟ್ಟಿದ್ದಾರೆ. ಹಾಗಿದ್ದರೆ ಕೂಡಲ ಸಂಗಮ ಅಪವಿತ್ರವೇ ಇದನ್ನು ಅಪವಿತ್ರಗೊಳಿಸಿದವರು ಯಾರು ? ಇದನ್ನು ಸಾಭೀತು ಪಡಿಸಬೇಕೆಂದು ಅರವಿಂದ ಕುಲಕರ್ಣಿ ಸವಾಲು ಹಾಕಿದ್ದಾರೆ. ಇಲ್ಲದಿದ್ದರೆ ನಾಡಿನ ಸಮಸ್ತ ಬಸವಾಭಿಮಾನಿಗಳು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹುಣಶ್ಯಾಳ ಪಿ.ಬಿ.ಗ್ರಾಮದ ಸಂಗನ ಬಸವ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರ ಬಗ್ಗೆ ಕೆಣಕದಿದ್ದರೆ ಪಂಚಾಚಾರರಿಗೆ ಸಮಾಧಾನ ಆಗುವುದಿಲ್ಲ. ಅನಾವಶ್ಯಕವಾಗಿ ಬಸವಣ್ಣವರ ಅವರ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ತಮ್ಮ ಗೌರವವನ್ನು ಕಳೆದುಕೊಳ್ಳಬಾರದು ಎಂದು ಪತ್ರಿಕಾಗೋಷ್ಠಿಯಲ್ಲಿ ಪಂಚಾಚಾರರಿಗೆ ಕಿವಿ ಮಾತು ಹೇಳಿದರು.