ಬೆಳಗಾವಿಯಲ್ಲಿ ಯೋಗದಾ ಸತ್ಸಂಗ ಧ್ಯಾನ ಕೇಂದ್ರದ ಹೊಸ ಮಂದಿರದ ಪಲ್ಲಕ್ಕಿ ಮೆರವಣಿಗೆ
Palanquin procession of the new temple of Yogada Satsang Meditation Center in Belgaum
ಬೆಳಗಾವಿ 28: ಒಬ್ಬ ಯೋಗಿಯ ಆತ್ಮಕಥೆಯು ಪರಮಹಂಸ ಯೋಗಾನಂದರ ಜೀವನ ಅನುಭವಗಳ ಒಂದು ಪ್ರತ್ಯಕ್ಷ ವಿವರವಾಗಿದೆ. ಅಗತ್ಯವಾದ ಶಾಂತತೆ ಮತ್ತು ಏಕಾಗ್ರತೆಯ ಆಳವು, ಯೋಗದಾ ಸತ್ಸಂಗದ ಏಕಾಗ್ರತೆ ಮತ್ತು ಧ್ಯಾನದ ವೈಜ್ಞಾನಿಕ ತಂತ್ರಗಳ ಅಚಲ ಅಭ್ಯಾಸದ ಮೂಲಕ ಸ್ವಾಭಾವಿಕವಾಗಿ ನಡೆಯಲು ಸಾಧ್ಯ, ಜೀವನದ ನೆಮ್ಮದಿಗಾಗಿ ಅವರ ಮಾರ್ಗದಲ್ಲಿ ಸಾಗೋಣ ಎಂದು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ರಾಂಚಿ ಆಶ್ರಮದ ಸ್ವಾಮಿ ಶ್ರದ್ಧಾನಂದಜೀ ಅವರು ಹೇಳಿದರು. ನಗರದ ಸದಾಶಿವನಗರದಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಅಡಿಯಲ್ಲಿ ಯೋಗ ದಾಸತ್ಸಂಗ ಧ್ಯಾನ ಕೇಂದ್ರದ ಹಿ ಹೊಸ ಧ್ಯಾನ ಮಂದಿರವನ್ನು ಉದ್ಘಾಟಿಸಿ, ಪಲ್ಲಕ್ಕಿ ಮೆರವಣಿಗೆ ನಡೆಸಿ ಅವರು ಮಾತನಾಡಿದರು.
ದೇವರ ಮೇಲಿನ ಆಸೆಯನ್ನು ನಮಗೆ ಯಾರೂ ಕೊಡಲು ಸಾಧ್ಯವಿಲ್ಲ, ನಮ್ಮಲ್ಲಿ ನಾವೇ ಅದನ್ನು ಬೆಳಸಿಕೊಳ್ಳಬೇಕು ಎಂದರು. ಸಮೂಹ ಧ್ಯಾನದ ಮಹತ್ವವನ್ನು ವಿವರಿಸುತ್ತ, ಭಕ್ತಾದಿಗಳು ಹೆಚ್ಚು ಸಮೂಹ ಧ್ಯಾನದಲ್ಲಿ ಪಾಲ್ಗೊಳ್ಳಲು ಕರೆ ಕೊಟ್ಟರು. ಪರಮಹಂಸ ಯೋಗಾನಂದರು 1893ರ ಜನವರಿ 5ರಂದು ಜನಿಸಿದರು. ಅವರು ಬೆಳೆದದ್ದು ಮುಕುಂದ ಲಾಲ್ ಘೋಶ್ ಎಂಬ ಹೆಸರಿನಿಂದ. ಹುಟ್ಟಿದ್ದು ಬಂಗಾಳಿ ಕುಟುಂಬದಲ್ಲಿ. ಅದೇನು ಪುಣ್ಯ ಭೂಮಿಯೋ ಆ ಬಂಗಾಳ. ಎಂತೆಂತಹ ಅಧ್ಯಾತ್ಮ-ವೈಜ್ಞಾನಿಕ - ಚಿಂತಕ ಮಹಾಶಯರನ್ನು ಆ ನಾಡು ಕಂಡಿದೆ. ಯೋಗದಾಸತ್ಸಂಗ ಸೊಸೈಟಿಆಫ್ ಇಂಡಿಯಾವು ಯೋಗಿಯ ಆತ್ಮಕಥೆಯ ಲೇಖಕರಾದ ಶ್ರೀ ಪರಮಹಂಸಯೋಗಾನಂದಜೀಯ ವರಿಂದ 1917 ರಲ್ಲಿ ಸಂಸ್ಥಾಪಿಸಿ, ಅಧ್ಯಾತ್ಮ-ವೈಜ್ಞಾನಿಕ ಚಿಂತನೆಗಳು ವಿಶ್ವಕ್ಕೆ ಸಾರಿದವರು ಎಂದರು.
ಬೆಳಗಿನ ಜಾವ, ಯೋಗಿಯ ಆತ್ಮಕಥೆಯ ಲೇಖಕರಾದ ಪರಮಹಂಸ ಯೋಗಾನಂದಜೀ ಗುರುಗಳ ಭಾವಚಿತ್ರಕ್ಕೆ ಹೂಮಾಲೆಗಳಿಂದ ಅಲಂಕರಿಸಿ ಪಲ್ಲಕಿಯಲ್ಲಿರಿಸಿ, ಭಕ್ತಾದಿಗಳು ಆಧ್ಯಾತ್ಮಿಕ ಮೆರವಣಿಗೆಯನ್ನು ನಡೆಸಿದರು.ಈ ವೇಳೆ ಮಂದಿರಕ್ಕಾಗಿ ನೆರವು ನೀಡಿದ ಚುನಮರಿ ದಂಪತಿಗಳನ್ನು ಹಾಗೂ“ವೈಷ್ಣವಿರೆಸಿಡೆನ್ಸಿ”ಯ ಬಿಲ್ಡರ್ ವೀರೇಶ್ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕ್ರಿಯಾಯೋಗ ದೀಕ್ಷೆಯ ಸಮಾರಂಭವನ್ನೊಳಗೊಂಡ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಯೋಗದಾ ಸತ್ಸಂಗಧ್ಯಾನ ತಂತ್ರಗಳ ತರಗತಿಗಳನ್ನು ವೈಎಸ್ ಎಸ್ ಸಂನ್ಯಾಸಿಗಳು ನಡೆಸಿಕೊಡುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 