ಕಬ್ಬಿನ ಟ್ರ್ಯಾಕ್ಟರ್‌ಗಳ ಟ್ರಾಲಿಗಳಿಗೆ ರಿಫ್ಲೆಕ್ಟರ್ ಅಳವಡಿಸಿದ ಪಿಎಸ್‌ಐ
PSI installs reflectors on sugarcane tractor trolleys
ರಬಕವಿ-ಬನಹಟ್ಟಿ 21: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಸವಾರರು ಜನಬೀಡಿ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಿ, ಯಾವುದೇ ರೀತಿಯ ಅಪಾಯಗಳಿಗೆ ಅವಕಾಶ ಕೊಡದೆ ಸಂಚರಿಸಬೇಕು. ರಾತ್ರಿ ಹೊತ್ತು ಗಾಡಿಗಳಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ಟ್ರ್ಯಾಲಿಗಳ ಹಿಂಬದಿ ಕಡ್ಡಾಯವಾಗಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕೆಂದು ಬನಹಟ್ಟಿ ನಗರದ ಪಿಎಸ್‌ಐ ಶಾಂತ ಹಳ್ಳಿ ಚಾಲಕರಿಗೆ ತಿಳಿಸಿದರು. ಅವರು ಬನಹಟ್ಟಿ ನಗರದ ಆಸಂಗಿ ಕ್ರಾಸ್ ಬಳಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳ ಟ್ರಾಲಿಗಳಿಗೆ ರಿಫ್ಲೆಕ್ಟರ್ ಅಳವಡಿಸಿ ಮಾಹಿತಿ ನೀಡಿದರು.
ಹೆಚ್ಚಿನ ವಾಹನಗಳನ್ನು ರಾತ್ರಿಯಲ್ಲೇ ಕಬ್ಬು ಸಾಗಿಸುವುದರಿಂದ ಹಿಂಬದಿ ವಾಹನಗಳಿಗೆ ಚಲಿಸಲು ರಿಫ್ಲೆಕ್ಟರ್‌ಗಳ ಅಳವಡಿಕೆಯಿಂದ ಸಹಾಯವಾಗುತ್ತದೆ. ಚಾಲಕರು ತಮ್ಮ ವಾಹನಗಳಿಗೆ ರಿಫ್ಲೆಕ್ಟರ್ ಅಳವಡಿಸಲು ಸೂಚಿಸಿ, ಚಾಲಕರು ಎಲ್ಲ ರೀತಿಯ ಸುರಕ್ಷತೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬನಹಟ್ಟಿ ಪಿಎಸ್‌ಐ ಶಾಂತಾ ಹಳ್ಳಿ ಸೂಚನೆ ನೀಡಿದರು. ಕ್ರೈಂ ಪಿಎಸ್‌ಐ ಪಿ.ಬಿ.ಪೂಜಾರಿ, ಎಎಸ್‌ಐ ಎನ್.ಡಿ. ಐಯತವಾಡ ಮತ್ತು ಎಂ.ಎನ್.ಕಾಗವಾಡ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 