ಶ್ರೀಗಳ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನ ಗೊಂಡಿದೆ : ದುಂಡಿಗೌಡ್ರ

ಶ್ರೀಗಳ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನ ಗೊಂಡಿದೆ : ದುಂಡಿಗೌಡ್ರ

ಶ್ರೀಗಳ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನ ಗೊಂಡಿದೆ : ದುಂಡಿಗೌಡ್ರ 

ಶಿಗ್ಗಾವಿ  28       : ಶ್ರೀಗಳ ಪಾದ ಸ್ಪರ್ಶದಿಂದ ನಮ್ಮ ನೆಲ ಪಾವನ ಗೊಂಡಿದೆ. ಚಿಕ್ಕಮಣಕಟ್ಟಿ ಎನ್ನುವ ಚಿಕ್ಕ ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ನಡೆದ ಧರ್ಮ ಜಾಗೃತಿ ಕಾರ್ಯಕ್ರಮ ಇದಾಗಿದೆ  ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು. 

     ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಬಾಳೆಹೊನ್ನರ್ ಶ್ರೀಮದರಂಭಾಪುರಿ ಡಾ. ವೀರಸೋಮೇಶ್ವರ  ಜಗದ್ಗುರುಗಳರವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ನಂದೀಶ್ವರ ಶೀಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಮತ್ತು ಶ್ರೀಮದ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ - ಧರ್ಮ ಜಾಗೃತಿ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದ ಅವರು ತಾಲೂಕಿನ ಎಲ್ಲ ಹಿರಿಯರ ಆಶೀರ್ವಾದಿಂದ ಧರ್ಮದ ಜಾಗೃತಿ ಕಾರ್ಯಕ್ರಮಗಳು ಅನ್ನ ದಾಸೋಹ , ಅಕ್ಷರ ದಾಸೋಹಗಳಂತಹ ಮಹೋನ್ನತ ಕಾರ್ಯಗಳು ಜರಗುತ್ತ ಬಂದಿದ್ದು. ಇಂತಹ  ಕಾರ್ಯಗಳು ಕಾಲ ಕಾಲಕ್ಕೆ ನಡೆಯುತ್ತ ಇರಬೇಕು ನಮ್ಮ ಶಕ್ತಿಗುಮೀರಿ ತನು, ಮನ, ಧನ ಸಹಿತ ಗ್ರಾಮದ ಜನತೆಯೊಂದಿಗೆ ನಾವು ಇದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

   ಈ ಸಂದರ್ಭದಲ್ಲಿ ಗಂಜಿಗಟ್ಟಿ ಚರಮೂರ್ತೇಶ್ವರ ಶ್ರೀಗಳು, ಬಂಕಾಪೂರ ಅರಳೇಲೆ ಹಿರೇಮಠ ರೇವಣಸಿದ್ದೇಶ್ವರ ಶ್ರೀಗಳು, ಮಣಕಟ್ಟಿ ಶ್ರೀಗಳು ಸಾನಿಧ್ಯ ವಹಿಸಿದ್ದರು ಮತ್ತು ಮುಖಂಡರಾದ ಬಿ.ಟಿ.ಇನಾಮತಿ, ತಿಪ್ಪಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ  ಹಾಗೂ ಗ್ರಾಮದ ಹಿರಿಯರು, ಯುವಕರು, ತಾಯಂದಿರು ಉಪಸ್ಥಿತರಿದ್ದರು.