ಓದಿನಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ: ಎಸ್ ಜೆ ಟಿ ಸ್ವಾಮಿ

ಓದಿನಿಂದ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ: ಎಸ್ ಜೆ ಟಿ ಸ್ವಾಮಿ Only through education can a civilized society be built: SJT Swamy

ಕೈಗಾ 25: ಇತ್ತೀಚೆಗೆ ಎಲ್ಲರೂ ಟಿವಿ ಮೊಬೈಲ್ ಮಾಧ್ಯಮಗಳ ಹಿಂದೆ ಬಿದ್ದು  ಸೃಜಶೀಲ ಚಟುವಟಿಕೆಗಳು ಮತ್ತು ಸಚ್ಛಾರಿತ್ರ್ಯದ ವ್ಯಕ್ತಿತ್ವ  ಕಡಿಮೆಯಾಗುತ್ತಿದೆ. ಪುಸ್ತಕಗಳ ಓದಿನಿಂದ ನಮ್ಮ ಮನಸ್ಸು ವಿಚಲಿತವಾಗದೇ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ನಮ್ಮಿಂದ ಸಾಧ್ಯವಿದೆ ಆದ್ದರಿಂದ ನಾವು ಹೆಚ್ಚೆಚ್ಚು ಪುಸ್ತಕಗಳನ್ನು ಓದುವಂಥ ಮನೋಭಾವನೆಯನ್ನು ಬೆಳೆಸಿಕೊಂಡು ಆದಷ್ಟೂ ಮೊಬೈಲ್ ಮತ್ತು ಇ-ಮಾಧ್ಯಮಗಳಿಂದ ದೂರವಿರಬೇಕು ಅದಕ್ಕಾಗಿ ಪ್ರತೀ ಹೊತ್ತು ಹೊತ್ತಿಗೆಯದ್ದಾಗಬೇಕು ಈ ನಿಟ್ಟಿನಲ್ಲಿ ಸಹ್ಯಾದ್ರಿ ಕನ್ನಡ ಸಂಘದ ಗ್ರಂಥಾಲಯ ವಿಭಾಗವು ಓದುಗರಿಗೆಂದೇ ಪ್ರತೀ ತಿಂಗಳ ಎರಡನೆಯ ಬುಧವಾರ ಆಯೋಜಿಸುತ್ತಿರುವ "ಹೊತ್ತಿಗೆಯ ಹೊತ್ತು" ಅರ್ಥಪೂರ್ಣವಾಗಿದೆ ಎಂದು ಎಸ್‌.ಜೆ.ಟಿ.ಸ್ವಾಮಿ ಕಾರ್ಯನಿರ್ವಹಣಾ ಅಧೀಕ್ಷಕರು, ಮತ್ತು ಮುಖ್ಯಸ್ಥರು ನಿಗಮ ಸಾಮಾಜಿಕ ಜವಾಬ್ದಾರಿ ವಿಭಾಗ ಕೈಗಾ ವಿದ್ಯುತ್ ಕೇಂದ್ರ ಕೈಗಾ ಇವರು ಹೇಳಿದರು.  

ಅವರು ಸಹ್ಯಾದ್ರಿ ಕನ್ನಡ ಸಂಘ ಕೈಗಾ ವತಿಯಿಂದ ಆಯೋಜಿಸಿದ್ದ "ಹೊತ್ತಿಗೆಯ ಹೊತ್ತು" ಆರಂಭಿಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲು ಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ಭಾಷಣದಲ್ಲಿ ಈ ಆಶಯವನ್ನು ವ್ಯಕ್ತಪಡಿಸಿದರು.  

ಸಹ್ಯಾದ್ರಿ ಕನ್ನಡ ಸಂಘವು ಆಯೋಜಿಸುವ ಎಲ್ಲ ಕಾರ್ಯಗಳೂ ಸಮಾಜ ಮುಖಿಯಾಗಿರುತ್ತವೆ ಅದರಲ್ಲೂ ಪುಸ್ತಕಗಳನ್ನು ಓದುವಂತೆ ಮಾಡುತ್ತಿರುವ ಈ ಪ್ರಯತ್ನ ಮತ್ತು ನಮ್ಮಂಥ ಕನ್ನಡೇತರರಿಗೆ ಕನ್ನಡ ಕಲಿಕಾ ಶಿಬಿರದ ಆಯೋಜನೆ ಮುಂತಾದವು ಶ್ಲಾಘನೀಯ ಎಂದು ಹಿರಿಯ ತಾಂತ್ರಿಕ ಅಭಿಯಂತರರಾದ ನಾಚಿಮ್ಮಯ್ಯ ಹೇಳಿದರು. ಸಂಘದ ಅಧ್ಯಕ್ಷರಾದ ಜೀತೇಂದ್ರರವರು ಮಾತನಾಡಿ ಓದುಗರ ಮನಸ್ಸನ್ನು ಗ್ರಂಥಾಲಯದತ್ತ ಸೆಳೆಯಲು "ಹೊತ್ತಿಗೆಯ ಹೊತ್ತು " ಕಾರ್ಯಕ್ರಮ ಅತ್ಯುತ್ತಮವಾಗಿದೆ. ಓದುಗರು ಹೆಚ್ಚೆಚ್ಚು ಪುಸ್ತಕಗಳ ಬಳಕೆ ಮಾಡುತ್ತಾ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಅದರಲ್ಲೂ ಯುವಜನತೆ ಪುಸ್ತಕ ಓದುವತ್ತ ಹೊರಳಬೇಕು ಎಂದರು.  

ಸಂಘದ ಕಾರ್ಯದರ್ಶಿ ರಾಘವೇಂದ್ರ ಮಾತಾನಾಡಿ ಪುಸ್ತಕಗಳಿಂದ ನಮ್ಮ ಮಸ್ತಕಗಳು ಸಮಾಜವನ್ನು ಸೃಜನಶೀಲದತ್ತ ಕೊಡೊಯ್ಯುತ್ತವೆ ಈ ನಿಟ್ಟಿನಲ್ಲಿ ನಾವು ಆದಷ್ಟೂ ಪುಸ್ತಕಗಳನ್ನು ಓದುವತ್ತ ಮನಸ್ಸನ್ನು ಕೊಡಬೇಕು.ನಮ್ಮ ಪ್ರತೀ ಹೊತ್ತು ಹೊತ್ತಿಗೆಯ ಜೊತೆ ಇರಲಿ ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಓದುಗರು ಬಂದು ಅದರ ಉಪಯೋಗ ಪಡೆದುಕೊಂಡವರಿಗೆ ಬಹುಮಾನಗಳನ್ನು ನೀಡಲಾಗುವುದು ಈ ನಿಟ್ಟಿನಲ್ಲಿ ನಮ್ಮ ಕನ್ನಡ ಸಂಘದ ಪ್ರಯತ್ನ ಸಫಲವಾಗಲಿ ಎಂದರು.  

ಗ್ರಂಥಾಲಯದ ಓದುಗರಾದ ಶ್ರೀ ಫಣಿರಾಜ್, ಗಜಾನನ ನಾಯ್ಕ, ಸಾಹಿತಿ ಗೌಡಪ್ಪನವರ ಶಿವಕುಮಾರ್ ಮತ್ತು ಸಂಘದ ಸದಸ್ಯರಾದ ಮೊಹಮ್ಮದ್ ಹರಿಬಿಡಿ, ಕುಬೇರ​‍್ಪ ಪೂಜಾರ್, ಕೆ ಎಸ್ ಮೋಹನ, ಲೇಖಕ ಮಹಾಂತೇಶ ಓಶೀಮಠ ಮತ್ತು ಇನ್ನೂ ಹಲವಾರು ಓದುಗರು ತಾವು ಓದಿದ ಪುಸ್ತಕಗಳ ವಿಶ್ಲೇಷಣೆ ಮಾಡಿದರು. ಕೆಲವರು ಇಂದಿನಿಂದಲೇ ಒಂದೊಂದು ಪುಸ್ತಕವನ್ನು ಓದುತ್ತೇನೆ ಎಂದು ಪ್ರತಿಜ್ಞೆಮಾಡಿದರು. ಸಂಘದ ಖಜಾಂಚಿ, ಕವಿ ಎಸ್‌.ಆರ್‌.ಎನ್‌.ಮೂರ್ತಿ ಕಾರ್ಯಕ್ರಮವನ್ನು ನಿರ್ವಹಿಸಿದರು.