ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಪರೀಕ್ಷೆ ತಯಾರಿ
One-day exam preparation for SSLC students
ತಾಳಿಕೋಟಿ 09: ತಾಲೂಕ ಅಂಬೇಡ್ಕರ್ ಸೇನೆ ಸಂಯುಕ್ತ ಆಸರೆಯಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಗಳಿಗೆ ಒಂದು ದಿನದ ಪರೀಕ್ಷೆ ತಯಾರಿ ಕಾರ್ಯಗಾರ ಕಾರ್ಯಕ್ರಮ ಪಟ್ಟಣದ ತಹಸಿಲ್ದಾರ್ ಅವರ ಕಾರ್ಯಾಲಯದ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಸರಕಾರಿ ಶಾಲೆಯ ನೂರಕ್ಕೆ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡುವ ಮೂಲಕ ಗೌರವತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಮುದ್ದೇಬಿಹಾಳ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಆರ್ ಬಿ ದಮ್ಮೂರ್ ಮಠ ಅವರು ಭಾಗವಹಿಸಿ ಸಮಾರಂಭದ ಉದ್ದೇಶಿಸಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ವಿಚಾರ ಮತ್ತು ಅವರು ತಮ್ಮ ಶಿಕ್ಷಣದಿಂದ ಈ ದೇಶಕ್ಕೆ ನೀಡಿದ ಕೊಡುಗೆ ತುಂಬಾ ಅಪಾರವಾದದ್ದು ಅದನ್ನು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯವಿರುತ್ತದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ (ಚಂದ್ರಕಾಂತ್ ಕಾಂದ್ರೂಳಿ ಬಣದ) ಜಿಲ್ಲಾಧ್ಯಕ್ಷರಾದ ಬಾಲಚಂದ್ರ ಹುಲ್ಲೂರು ಅವರು ಕೂಡ ಪರೀಕ್ಷೆ ಕುರಿತು ಜಾಗೃತಿ ವಿಷಯ ಮಂಡಿಸಿದರು. ಇನ್ನೂರು ಅತಿಥಿಗಳಾದ ಆರ್.ಎ ವಿಜಯಪುರ ಸಿಆರ್ಿ ತಾಳಿಕೋಟಿ ಅವರು ಮಾತನಾಡಿದರು. ಅಂಬೇಡ್ಕರ್ ಸೇನೆ ವಿಜಯಪುರ ಜಿಲ್ಲಾ ಉಪಾಧ್ಯಕ್ಷರಾದ ಬಸು. ಈ. ಕಟ್ಟಿಮನಿ(ಮಾದರ) ಅವರು ಮಾತನಾಡಿ ಸರಕಾರ ಶಿಕ್ಷಣಕ್ಕಾಗಿ ವಸತಿ ನಿಲಯ ಮತ್ತು ಪಠ್ಯಪುಸ್ತಕ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ಕಾರ್ಯ ಮಾಡುತ್ತಿದ್ದು ಅದರ ಸದೀ ಉಪಯೋಗ ಪಡೆದುಕೊಂಡು ಜಿಲ್ಲೆಯಲ್ಲಿ ಅತ್ಯುತ್ತಮ ಅಂಕ ಪಡೆದು ಜಿಲ್ಲೆಯ ಕೀರ್ತಿ ತರುವಂತ ಆಗಬೇಕೆಂದರು .
ವಿಶೇಷ ಉಪನ್ಯಾಸಕರಾಗಿ ಸಂಗಮೇಶ್ ದೊಡ್ಡಮನಿ ಶಿಕ್ಷಕರು ಇಂದಿರಾ ಗಾಂಧಿ ವಸತಿ ಶಾಲೆ ತಮದಡ್ಡಿ ಅಶೋಕ ಲಮಾಣಿ ಶಿಕ್ಷಕರು ಇಂದಿರಾ ಗಾಂಧಿ ವಸತಿ ಶಾಲೆ ಗೊಟಗಂಡ್ಕ ರಾಕೇಶ್ ದೊಡ್ಡಮನಿ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರನಾಳ ಅವರು ಭಾಗಿಯಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಕುರಿತು ವಿಸ್ತಾರವಾಗಿ ಹಿಂದಿ ಇಂಗ್ಲಿಷ್ ಮತ್ತು ಸಮಾಜ ವಿಷಯವನ್ನು ಸುಮಾರು ನಾಲ್ಕು ಗಂಟೆವರೆಗೆ ವಿಷಯ ಮಂಡಿಸಿದರು. ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲಕಟ್ಟಿ ಮನಿ ಅವರು ಗಣ್ಯರನ್ನು ಗೌರವಿಸಿ ಸ್ವಾಗತಿಸಿದರು.
ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಆರ್ ಆರ್ ರಜಪೂತ ಅವರು ಕಾರ್ಯಕ್ರಮದ ಸಂಪೂರ್ಣ ವಿವರವನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಒಂದನ್ನಾರೆ್ಣ ಕೂಡ ಮಾಡಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ದುರ್ಗಪ್ಪ ದೊಡ್ಡಮನಿ ಅಬ್ದುಲ್ ಕಲಾಂ ಫೌಂಡೇಶನ್ ಅಧ್ಯಕ್ಷ ಶಬೀರ್ ಇನಾಂದರ್ ಹಾಗೂ ಅಂಬೇಡ್ಕರ್ ಸೇನೆ ಪದಾಧಿಕಾರಿಗಳಾದ ಪರಶುರಾಮ ತಳವಾರ್ ಯಮನಪ್ಪ ನಾಯ್ಕೊಡಿ ಮೆಹಬೂಬ್ ಅವಟಿ ಕಾಶಿನಾಥ್ ಕಟ್ಟಿಮನಿ ನಾಗರಾಜ್ ಗಜಕೋಶ ಬಸವರಾಜ್ ತೋಟದ ಬಸವರಾಜ ಪತ್ತಾರ ಆಸೀಪ್ ಕೆಂಭಾವಿ ಆಕಾಶ್ ಮನಗೂಳಿ ಕಾಶಿನಾಥ್ ವಜ್ಜಲ ಸಮರಸಿಂಗ್ ಮೂಲಿಮನಿ ಕಾಶಿನಾಥ್ ಮಡಿಕೇಶ್ವರ್ ಎಲ್ಲಾ ಅಂಬೇಡ್ಕರ್ ಸೇನೆ ಪದಾಧಿಕಾರಿಗಳು ಹಾಗೂ ಶಿಕ್ಷಣ ಪ್ರಿಯರು ಭಾಗಿಯಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 