ಪುರಸಭೆಯಲ್ಲಿ ಒನಕೆ ಓಬವ್ವ ಜಯಂತಿ: ಒಬ್ಬವ್ವಳ ಧೈರ್ಯ ಸಾಹಸ ಆಧುನಿಕ ಮಹಿಳೆಯರಿಗೆ ಸ್ಫೂರ್ತಿ
Onake Obavva Jayanti at the Municipality: One woman's courageous adventure is an inspiration to mod
ಮಹಾಲಿಂಗಪುರ 11:ಚಿತ್ರದುರ್ಗದ ಹೆಸರನ್ನು ಕೇಳಿದ ತಕ್ಷಣಅಲ್ಲಿನ ಏಳು ಸುತ್ತಿನಕೋಟೆಯ ನೆನಪಾಗುವುದು ಹೇಗೆ ಸಹಜವೋ ಹಾಗೆಯೇ ಇಂದಿಗೂ ಮನೆಮಾತಾಗಿ ಉಳಿದಿರುವ ಒನಕೆಯ ಓಬವ್ವಳ ಪರಾಕ್ರಮವು ಕಣ್ಣಮುಂದೆ ಕಟ್ಟಿದಂತಾಗುತ್ತದೆ. ಓಬವ್ವಳ ಧೈರ್ಯ ಸಾಹಸ ಇಂದಿನ ಆಧುನಿಕ ಮಹಿಳಾ ಜಗತ್ತಿಗೆ ಸ್ಫೂರ್ತಿ ಚಿಲುಮೆಯಾಗಿದೆ ಎಂದು ಪುರಸಭೆ ಅಧ್ಯಕ್ಷಯಲ್ಲನಗೌಡ ಪಾಟೀಲ ಎಂದರು.
ಅವರು ನಗರದ ಪುರಸಭೆಯಲ್ಲಿ ಆಯೋಜಿಸಿದ ಓಬವ್ವಳ ಜಯಂತಿ ಕಾರ್ಯಕ್ರಮವನ್ನು ಓಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ರಾಜ್ಯದಾದ್ಯಂತ ಓಬ್ಬವ್ವರಜನ್ಮದಿನವನ್ನು ಆಚರಣೆ ಮಾಡಲಾಗುವುದು.ಈ ಹಿನ್ನಲೆಯಲ್ಲಿ ಒನಕೆ ಓಬವ್ವ ಕರ್ನಾಟಕದ ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಒಬ್ಬ ಧೀರ ಮಹಿಳೆ.ಅವಳು ಹೈದರ್‌ಆಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದಒಬ್ಬದೇಶ ಪ್ರೇಮಿ ವೀರ ವನಿತೆ.ಈಕೆ ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾಳೆಎಂದರು.
ನಂತರ ಮಾತನಾಡಿದ ಪುರಸಭೆ ಸದಸ್ಯ ಶೇಖರಅಂಗಡಿ ರಾಜ್ಯದ ಚಿತ್ರದುರ್ಗದಲ್ಲಿ ಹೈದರ್‌ಅಲಿಯ ಪಡೆಗಳ ವಿರುದ್ಧ ಏಕಾಂಗಿಯಾಗಿ ಒನಕೆಯೊಂದಿಗೆ ಹೋರಾಡಿದ ಮಹಿಳೆ ಒನಕೆ ಓಬವ್ವ.ಆಕೆಯ ಪತಿಚಿತ್ರದುರ್ಗದ ಕಲ್ಲಿನ ಕೋಟೆಯ ಕಾವಲು ಗೋಪುರದ ಕಾವಲುಗಾರರಾಗಿದ್ದರು. ಕರ್ನಾಟಕರಾಜ್ಯದಲ್ಲಿ, ಅಬ್ಬಕ್ಕರಾಣಿ, ಕೆಳದಿ ಚೆನ್ನಮ್ಮ ಮತ್ತುಕಿತ್ತೂರು ಚೆನ್ನಮ್ಮರಜೊತೆ ಒನಕೆ ಓಬವ್ವಕೂಡ, ಅಗ್ರಗಣ್ಯ ಮಹಿಳಾ ಯೋಧೆಯಾಗಿ ಮತ್ತು ದೇಶಭಕ್ತರಾಗಿ ಗುರುತಿಸಲ್ಪಡುತ್ತಾರೆ ಎಂದರು.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಧಿಕಾರಿ ನಾಮದೇವ ಲಮಾಣಿ,ಮುಖಂಡಅರ್ಜುನ ಮೋಪಗಾರ, ಪುರಸಭೆ ಸಿಬ್ಬಂದಿ ಪ್ರಸಾದ ಸೊನ್ನದ, ಎಸ್.ಎನ್ ಪಾಟೀಲ,ಎಂ.ಎಂ ಮುಗಳಖೋಡ,ಚಿದಾನಂದ ಮಠಪತಿ, ಎಂ.ಕೆ.ದಳವಾಯಿ,ಶಿವಾನಂದ ಚೌದರಿ, ಪರಸು ನಾಗನೂರ,ಸೈಪ್ ಮುಲ್ಲಾ,ಲಕ್ಷ್ಮೀ ಪರೀಟ, ಪ್ರಕಾಶ, ಮೋದಿನ ಮುಲ್ಲಾ, ಎಂ.ಡಿ ಮಾನಿಂಗ, ಮಾನಿಂಗ ಗಸ್ತಿ ಸೇರಿದಂತೆ ಹಲವರುಇದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 