ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು

On various laws relating to children

ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು 

ಧಾರವಾಡ. 10 : ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ” ಮಕ್ಕಳ ರಕ್ಷಣೆಗಾಗಿ ಇರುವ  ಬಾಲ ನ್ಯಾಯ ಕಾಯ್ದೆ-2015,  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ- 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವ ಕುರಿತು. 


ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದಿ:10-01-2025 ರಂದು ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರದ ವರದಿಯನ್ನು ಈ ಪತ್ರಕ್ಕೆ ಲಗತ್ತಿಟ್ಟು ಸಲ್ಲಿಸುತ್ತಿದ್ದು, ಸದರಿ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಉಚಿತವಾಗಿ ಪ್ರಕಟಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಾಗಿ ಈ ಮೂಲಕ ವಿನಂತಿಸಿದೆ.  


ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098/112 ಧಾರವಾಡ  ಇವರ ಸಂಯುಕ್ತಾಶ್ರಯದಲ್ಲಿ “ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ” ಮಕ್ಕಳ ರಕ್ಷಣೆಗಾಗಿ ಇರುವ  ಬಾಲ ನ್ಯಾಯ ಕಾಯ್ದೆ-2015,  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ- 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ” ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ದಿ:10-01-2025 ರಂದು ಜಿಲ್ಲಾ ಪಂಚಾಯತ್ ಧಾರವಾಡ ಇಲ್ಲಿ ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು. ನೆರೆದ ಗಣ್ಯ ಮಾನ್ಯರಿಂದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದಂತಹ ಶ್ರೀ ಶೇಖರಗೌಡ ರಾಮತ್ನಾಳ, ಮಾನ್ಯ ಸದಸ್ಯರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇವರು ಮಾತನಾಡುತ್ತಾ ಬಾಲನ್ಯಾಯ ಕಾಯ್ದೆ 2015, ಬಾಲ್ಯವಿವಾಹ ನಿಷೇಧ ಕಾಯ್ದೆ2006, ಶಿಕ್ಷಣ ಹಕ್ಕು ಕಾಯ್ದೆ 2009, ಪೊಕ್ಸೊ ಆ್ಯಕ್ಟ 2012 ಜೊತೆ ಜೊತೆಯಾಗಿ ಕೆಲಸ ನಿರ್ವಹಿಸುವುದು ಅತೀ ಅವಶ್ಯವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕೇವಲ ಶಿಕ್ಷಣ ಇಲಾಖೆಯ ಕೆಲಸವಲ್ಲ. ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳು. ವ್ಯಾಪ್ತಿಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಇತರೆ ಸಂಬಂಧಪಟ್ಟ ಇಲಾಖೆಯಿಂದ ಸಹ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ಕೆಲಸವನ್ನು ನಿರ್ವಹಿಸಬೇಕು. ಮಗು ಶಾಲೆಯಲ್ಲಿ ಇದ್ದರೆ ಯಾವುದೇ ರೀತಿಯ ಮಕ್ಕಳ ಹಕ್ಕುಗಳ  ಉಲ್ಲಂಘನೆಯಾಗುವುದಿಲ್ಲ. ಮಗು ಯಾವುದೇ ರೀತಿಯ ದೌರ್ಜನ್ಯವಾಗುವುದಿಲ್ಲ. ಬಾಲ್ಯ ವಿವಾಹ ಪೊಕ್ಸೊ, ಅಪರಾಧವೆಸಗುವಂತಹ ಸಂಕಷ್ಟಕ್ಕೊಳಗಾಗುವುದಿಲ್ಲ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಬಾರದೆಂದು ಎಲ್ಲ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಕಾರ್ಯಪ್ರವೃತ್ತರಾಗಬೇಕು. ಮಕ್ಕಳ ರಕ್ಷಣಾ ನೀತಿ 2016ರನ್ನು ಭದ್ರಪಡಿಸಲು, ಒತ್ತು ನೀಡಲು ಹಾಗೂ ಈ ನೀತಿಯನ್ನು ಅಳವಡಿಸಿಕೊಳ್ಳಲು ಮಕ್ಕಳ ರಕ್ಷಣಾ ಆಯೋಗವು ತರಬೇತಿಗಳನ್ನು ಆಯೋಜಿಸಿ, ಕಾರ್ಯ ರೂಪಕ್ಕೆ ತರಬೇಕಾಗಿದೆ. ಆದ್ದರಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಶಿಬಿರಾರ್ಥಿಗಳು ಸದರಿ ತರಬೇತಿಯ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.  

 ಗೌರವಾನ್ವಿತ ಉಪಸ್ಥಿತಿ ವಹಿಸಿದಂತಹ ಶ್ರೀ ಪರಶುರಾಮ ದೊಡ್ಡಮನಿ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ ಇವರು ಮಾತನಾಡುತ್ತಾ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲ ಇಲಾಖೆಗಳಿಂದ ಮಕ್ಕಳಿಗೆ ಸಂಬಂದಿಸಿದ ವಿವಿಧ ಕಾನೂನುಗಳ ಕುರಿತು ಹಲವಾರು ಬಾರಿ ಜಾಗೃತಿ ಕಾರ್ಯಕ್ರಮಗಳು ಜರುಗಿದರೂ ಪೋಕ್ಸೋ ಪ್ರಕರಣಗಳು ಮತ್ತು ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಎಲ್ಲ ಇಲಾಖೆಯವರು ಕಡ್ಡಾಯವಾಗಿ ಯಾವುದೇ ಮಕ್ಕಳ ಪ್ರಕರಣಗಳು ಕಂಡು ಬಂದಲ್ಲಿ ಈಋ ದಾಖಲಿಸಬೇಕು. ಮಕ್ಕಳ ಕಾನೂನುಗಳ ಕುರಿತು ಎಲ್ಲ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವು ಅವಶ್ಯವಿದೆ. ಈ ನಿಟ್ಟಿನಲ್ಲಿ ಸದರಿ ಕಾರ್ಯಕ್ರಮವು ತುಂಬಾ ಉಪಯುಕ್ತವಾಗಿದ್ದು, ಶಿಬಿರಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.  

ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಡಾ.ಹೆಚ್‌.ಹೆಚ್‌.ಕುಕನೂರ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಧಾರವಾಡ ಇವರು ಮಾತನಾಡುತ್ತಾ ಮಕ್ಕಳ ಪರವಾಗಿ ಇರುವಂತಹ ಕಾನೂನುಗಳ ಕುರಿತು ಎಲ್ಲ ಇಲಾಖೆಯವರು ಕಾರ್ಯನಿರ್ವಹಿಸಬೇಕು.  ಸದರಿ ತರಬೇತಿಯು ಉಪಯುಕ್ತವಾಗಿದೆ ಮಕ್ಕಳು ಶಾಲೆಯಲ್ಲಿ ಇರುವ ಹಾಗೆ ನೋಡಿಕೊಂಡರೆ ಮಕ್ಕಳಿಗೆ ಪೊಷಕಾಂಶಯುಕ್ತ ಆಹಾರವು ಶಾಲೆಯಲ್ಲಿ ಸಿಗುತ್ತದೆ.   ಮಕ್ಕಳು ಕೆಲವೊಮ್ಮೆ ಶಾಲೆಗೆ ಹೋಗಲು ಆಸಕ್ತಿ ತೊರಿಸುವುದಿಲ್ಲ ಮಕ್ಕಳ ಮನವೊಲಿಸಿ ಮರಳಿ ಶಾಲೆಗೆ ದಾಖಲಿಸುವುದು ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾರ್ಯನಿರ್ವಹಿಸಬೇಕು. ಇಲಾಖೆಗೆ ಹಲವಾರು ಕೆಲಸಗಳು ಇರುತ್ತದೆ ಆದರೆ ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಬಂದಾಗ ಆದ್ಯತೆ ಮೆರೆಗೆ ಕಾರ್ಯನಿರ್ವಹಿಸಬೇಕು. ಗ್ರಾಮ ಮಟ್ಟದಲ್ಲಿ ಇರುವ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಬಾಲ್ಯ ವಿವಾಹ ಪ್ರಕರಣಗಳು ಆಗದಂತೆ ನಿಗಾವಹಿಸಬೇಕು.  

ನಂತರ ಶ್ರೀ ಹರೀಶ ಜೋಗಿ ಕಾರ್ಯಕ್ರಮ ವ್ಯವಸ್ಥಾಪಕರು, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ, ಕೊಪ್ಪಳ. ಇವರು ನೆರೆದ ತರಬೇತುದಾರರಿಗೆ ಮಕ್ಕಳ ರಕ್ಷಣೆಗಾಗಿ ಇರುವ ಬಾಲ ನ್ಯಾಯ ಕಾಯ್ದೆ-2015, ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ 2012, ಬಾಲ್ಯ ವಿವಾಹ ನಿಷೇದ ಕಾಯ್ದೆ-2006, ಮಕ್ಕಳ ರಕ್ಷಣಾ ನೀತಿ-2016, ಮಕ್ಕಳ ಸಹಾಯವಾಣಿ -1098/112 ಹಾಗೂ ಮಕ್ಕಳಿಗೆ ಸಂಬಂಧಪಟ್ಟ ವಿವಿಧ ಕಾನೂನುಗಳ” ಕುರಿತು ಉಪನ್ಯಾಸವನ್ನು ಮನ ಮುಟ್ಟುವಂತೆ ತಿಳಿಸಿದರು.  

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯಮಾನ್ಯರನ್ನು ಹಾಗೂ ಉಪಸ್ಥಿತರಿರುವ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ಶ್ರೀಮತಿ ನೀತಾ ವಾಡಕರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡ ಇವರು ಪ್ರಸ್ತಾವಿಕ ಭಾಷಣ ಮಾಡಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀ ಗೋಪಾಲ.ಹೆಚ್‌.ಲಮಾಣಿ ಮಾನ್ಯ ಜಿಲ್ಲಾ ಅಧಿಕಾರಿಗಳು, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ (ಪ್ರಭಾರ) ಇವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಮಹ್ಮದಅಲಿ ತಹಶೀಲ್ದಾರ ಇವರು ನಿರೂಪಿಸಿ ವಂದಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಭಾಗವಹಿಸಿದ್ದರು. ಸದರಿ ಮಾಹಿತಿಯ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಮೂಲಕ ವಿನಂತಿಸಿದೆ.