ಫೆ.14ರಂದು ಬೂದು ಕೊಕ್ಕರೆ ಮಾಲತೇಶವರ ಕ್ಯಾಮೆರಾಕಣ್ಣಿಗೆ ಸೆರೆಯಾಗಿವೆ
ಹಾವೇರಿ 14: ಐತಿಹಾಸಿಕ ಹೆಗ್ಗೇರೆಕೆಯ ಪ್ರದೇಶದಲ್ಲಿ ಫೆ.14ರಂದು ಬೂದು ಕೊಕ್ಕರೆ (ಗ್ರೇ ಹೆರಾನ್) ಹಾರಾಡುತ್ತಾ ಆಹಾರ ಅರಸುತ್ತಿದ್ದ ವೇಳೆ ಮೀನು ಭಕ್ಷಣೆಯ ವೇಳೆ ಹಿರಿಯ ಪತ್ರಕರ್ತರು ಹಾಗೂ ಖ್ಯಾತ ಛಾಯಾ ಚಿತ್ರಕಾರರಾದ ಮಾಲತೇಶ ಅಂಗೂರ ಅವರ ಕ್ಯಾಮೆರಾಕಣ್ಣಿಗೆ ಸೆರೆಯಾಗಿವೆ.ಬೂದು ಕೊಕ್ಕರೆ ಕಂದು ನೀಲಿ ಬಣ್ಣದ ಹದ್ದಿನಷ್ಟು ದೊಡ್ಡದಾದ ಹಕ್ಕಿ. ಕುತ್ತಿಗೆ ಮತ್ತು ತಲೆ ಬೆಳ್ಳಗಿದ್ದು ತಲೆಯ ಮೇಲೆ ಕರಿಯ ಜುಟ್ಟು ಹಿಮ್ಮುಖನಾಗಿ ಬಾಗಿರುತ್ತದೆ.ಕುತ್ತಿಗೆಯನ್ನು ಯಾವಾಗಲೂ ಕುಡುಗೋಲಿನ ಆಕಾರದಲ್ಲಿ ಮಡಚಿಕೊಂಡಿರುತ್ತದೆ.
ಇದರ ಕುತ್ತಿಗೆಯಲ್ಲಿ ಮೇಲಿನಿಂದ ಕೆಳಗಿನರೆಗೂ ಇರುವ ಕಪ್ಪು ಪುಕ್ಕಗಳ ಗೆರೆಯಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಎದೆ ಹೊಟ್ಟೆಗಳೆಲ್ಲ ಕಂದುಬೆಳ್ಳಗಿರುತ್ತದೆ. ಹೊಳೆ ಕೆರೆಗಳ ಪಕ್ಕ ಇರುವ ಜೊಂಡು ಬೆಳೆದ ಚೌಗಿನಲ್ಲಿ ಇದು ಸಾಧಾರಣವಾಗಿ ಆಹಾರಾನ್ವೇಷಣೆ ಮಾಡುತ್ತದೆ. ಏಕಾಂಗಿಯಾಗಿ ಬೇಟೆಯಾಡುವ ಇದು ಗುಂಪುಗಳಲ್ಲಿ ಎಂದೂ ಇರುವುದಿಲ್ಲ.ಮೋಟ್ಟೆ ಇಡುವ ಸಮಯದಲ್ಲಿ ಮಾತ್ರ ಗಂಡು ಹೆಣ್ಣಿನ ಜೋಡಿಗಳಲ್ಲಿರುತ್ತದೆ.ಹಾರುವಾಗ ಕುತ್ತಿಗೆ0ುನ್ನು ಮಡಚಿಕೊಂಡು ಎರಡು ರೆಕ್ಕೆಗಳ ನಡುವೆ ಹುದುಗಿಸಿ ಹಾರುವುದು ಈ ಕೊಕ್ಕರೆಗಳ ವೈಶಿಷ್ಟ್ಯ. ದಕ್ಷಿಣ ಭಾರತದಲ್ಲಿ ಜುಲೈಯಿಂದ ಸೆಪ್ಟೆಂಬರ್‌ವರೆಗೂ ಉತ್ತರದಲ್ಲಿ ನವೆಂಬರಿನಿಂದ ಮಾರ್ಚ್‌ವರೆಗೂ ಗೂಡು ಕಟ್ಟುತ್ತದೆ.ಸಮಶೀತೋಷ್ಣ ವಲಯದ ಪಕ್ಷಿ ಇದಾಗಿದೆ ಎಂದು ಮಾಲತೇಶ ಅಂಗೂರ ಅವರು ಮಾಹಿತಿ ನೀಡಿದರು.