ಡಿಸೆಂಬರ್ 20 ರಂದು‘ತಿಂಡಿಗೆ ಬಂದತುಂಡೇರಾಯ’ ನಾಟಕ

On December 20, the play 'Thindige Bandadhunderaya'

ಡಿಸೆಂಬರ್ 20 ರಂದು‘ತಿಂಡಿಗೆ ಬಂದತುಂಡೇರಾಯ’ ನಾಟಕ 

ಬೆಳಗಾವಿ 17 : ಖ್ಯಾತ ನಟ ಪ್ರಕಾಶ ರೈಅವರ ನೇತೃತ್ವದ ನಿರ್ದಿಗಂತ ತಂಡವು ಅಭಿನಯಿಸುವ ಈ ವರ್ಷದ ಬಹುಚರ್ಚಿತ ನಾಟಕ‘ ತಿಂಡಿಗೆ ಬಂದ ತುಂಡೇರಾಯ’ ಶುಕ್ರವಾರ ದಿ: 20 ಡಿಸೆಂಬರ್ 2024 ರ ಸಂಜೆ7 ಕ್ಕೆ ಇಲ್ಲಿಯ ಇಂಜಿನಿಯರ್ ಇನ್ಸಿ-್ಟಟ್ಯೂಟ್ ಎದುರು,ರಾಮದೇವ ಹೊಟೆಲ್ ಹಿಂಭಾಗದಲ್ಲಿರುವ ಕನ್ನಡ ಭವನರಂಗ ಮಂದಿರದಲ್ಲಿ ಪ್ರಯೋಗಗೊಳ್ಳಲಿದೆ.  

ಜರ್ಮನ್ ನಾಟಕಕಾರ ಬ್ರೆಕ್ಟ್‌ ನ ‘ದಿ ರೆಜಿಸ್ಟೇಬಲ್ ರೈಸ್ ಆಫ್ ಅರ್ಥೊರೊ ಊಯಿ’ ಆಧರಿಸಿದ ನಾಟಕವನ್ನು ಕನ್ನಡ ನೆಲದ ಗುಣಕ್ಕೆ ಅಳವಡಿಸಲಾಗಿದೆ.ಎರಡನೆಯ ವಿಶ್ವಯುದ್ಧಕ್ಕೂ ಮೊದಲು ಜರ್ಮನಿಯ ಅಡಾಲ್ಫ್‌ ಹಿಟ್ಲರ್‌ಮತ್ತು ನಾಝಿ ಪಕ್ಷದ ಬೆಳವಣಿಗೆಯ ಸಂಕೇತವಾಗಿ ಹುಟ್ಟಿದ ವಿಡಂಬನಾತ್ಮಕ ನಾಟಕ. ಆ ನಾಟಕದಎಲ್ಲಾ ಪಾತ್ರಗಳು ಹಾಗು ಘಟನೆಗಳು, ನಾಝಿಜರ್ಮನಿಯ ಇತಿಹಾಸದಲ್ಲಿ ನಡೆದ ನೈಜ ಪ್ರಸಂಗಗಳನ್ನು ಆಧರಿಸಿವೆ. 

ಸಣ್ಣ ಪುಟ್ಟ ಕೊಲೆ, ಸುಲಿಗೆ, ದರೋಡೆಗಳನ್ನು ಮಾಡಿಕೊಂಡು ಬದುಕಿದ್ದ ತುಂಡೇರಾಯನ ಹೆಸರು ರಾಜ್ಯದ ಆರ್ಥಿಕ ಸಂಕಷ್ಟದಿಂದಾಗಿ, ಸಮಾಜದ ಭಯರಹಿತ ವಾತಾವರಣದಿಂದಾಗಿ ಜನರ ಮನಸ್ಸಿನಿಂದ ಅಳಿಸಲಾರಂಭಿಸುತ್ತದೆ. ಸರಕಾರದ ಆಸ್ತಿಯನ್ನು ಖಾಸಗೀಕರಣಗೊಳಿಸುವುದರಲ್ಲಿ ಲಂಚ ಪಡೆದ ಭ್ರಷ್ಟರಾಜ ಕಾರಣಿಯ ಕಥೆ ಕಿವಿಗೆ ಬೀಳುತ್ತಿದ್ದಂತೆ ಅವನ ಮಹತ್ವಾಕಾಂಕ್ಷೆಯ ಕನಸಿಗೆ ರೆಕ್ಕೆ ಮೂಡಲಾರಂಭಿಸುತ್ತದೆ.ಇದನ್ನೇ ಮೆಟ್ಟಿಲಾಗಿಸುವ ತುಂಡೇರಾಯ ತನ್ನದೇ ಆದ ಪ್ರತ್ಯೇಕ ಗುಂಪು ಕಟ್ಟಿಕೊಂಡು ದೊಂಬಿ ಗಲಭೆಗಳನ್ನು ಸೃಷ್ಟಿಸುತ್ತ ,ತನ್ನ ಬುದ್ಧಿ ಹಾಗೂ ಬಲ ಪ್ರಯೋಗದಿಂದ ಅಧಿಕಾರದ ಗದ್ದುಗೆ ಏರುತ್ತಾನೆ. ಬಯಸಿದ್ದನ್ನು ಪಡೆಯಲು ಏನೂ ಮಾಡಲು ಹಿಂಜರಿಯದ ಈತ ಮೋಡಿ ಮಾಡುವ ಮಾತುಗಳಿಂದ ಹಾಗೂ ತನ್ನ ಹಿಂಸಾತ್ಮಕ ನೀತಿಗಳಿಂದ ಒಬ್ಬ ಸರ್ವಾಧಿಕಾರಿಯಾಗಿ ಬೆಳೆಯುತ್ತಾನೆ.ದುರಾಸೆ ಮತ್ತು ಅಧಿಕಾರದ ದಾಹ ಹೆಚ್ಚಾದಂತೆ ಅದನ್ನು ಸಾಧಿಸುವ ಮಾರ್ಗಇನ್ನೂ ಹೆಚ್ಚೆಚ್ಚು ಕ್ರೂರವಾಗುತ್ತ ಸಾಗುತ್ತದೆ. ಜನರನ್ನು ಮರುಳು ಮಾಡುತ್ತ ,ಮರುಳಾಗದವರನ್ನು ಕೊಲ್ಲುತ್ತ ,ಒಂದಾದ ಮೇಲೆ ಒಂದುರಾಜ್ಯವನ್ನು ಕಬಳಿಸುತ್ತ  ಅನಭಿಷಕ್ತ ದೊರೆಯಾಗಿ ಮೆರೆಯುತ್ತಾನೆ.-ಇದು ತುಂಡೇರಾಯನ ಆಶಯದ ನಾಟಕ. 

ವಿನ್ಯಾಸ ಪರಿಕಲ್ಕನೆ ಮತ್ತು ನಿರ್ದೇಶನ ಶಕೀಲ ಅಹ್ಮದ್ ಅವರದು.ಉತ್ತರ ಕರ್ನಾಟಕದ ಜವಾರಿ ಭಾಷಾ ಸೊಗಡಿನ ಈ ನಾಟಕವನ್ನು ಬೆಳಗಾವಿಯ ವಿನುತಾ ಶ್ರೇಯಾ ಪ್ರಕಾಶನ, ಕನ್ನಡ ಭವನ ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿವೆ. ರೂ,100 ಪ್ರೋತ್ಸಾಹ ಧನ ವಿದೆ. ರಂಗಾಸಕ್ತರು ಇದರ ಲಾಭ ಪಡೆಯಿರಿ.