12ರಂದು ‘ಸಂಕ್ರಾಂತಿಯ ಸ್ವರ-ಸಂಜೆ ಕಾರ್ಯಕ್ರಮ

On 12th, 'Swara-Samje program of Sankranti


12ರಂದು ‘ಸಂಕ್ರಾಂತಿಯ ಸ್ವರ-ಸಂಜೆ ಕಾರ್ಯಕ್ರಮ 

ಬೆಳಗಾವಿ 9: ನಗರದ ಪಂ. ಬಿ. ವ್ಹಿ. ಕಡ್ಲಾಸ್ಕರಬುವಾ ಮೆಮೋರಿಯಲ್ ಟ್ರಸ್ಟ್‌ ಬೆಳಗಾವಿ ಇವರು ‘ಸಂಕ್ರಾಂತಿಯ ಸ್ವರ-ಸಂಜೆ’ ಕಾರ್ಯಕ್ರಮವನ್ನು ದಿ. 12 ರವಿವಾರದಂದು ಸಾಯಂಕಾಲ 6 ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದಾರೆ. 

ಚೆನ್ನಮ್ಮ ಕಿತ್ತೂರಿನ ರಜತ ಕುಲಕರ್ಣಿಯವರಿಂದ ಲಘು ಮತ್ತ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದ್ದು ಯೋಗೇಶ ರಾಮದಾಸ ಹಾರ್ಮೋನಿಯಂ ಮತ್ತು ನಾರಾಯಣ ಗಣಾಚಾರಿ ತಬಲಾ ಸಾಥ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಾಸಕ್ತರು ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಗುರುರಾಜ ಕುಲಕರ್ಣಿ ಮತ್ತು ವಿಜಯ ಬಾಂದಿವಡೆಕರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.