ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ - ನ್ಯಾಯಾಧೀಶ ಸತೀಶ ಎಂ

ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ - ನ್ಯಾಯಾಧೀಶ ಸತೀಶ ಎಂ Observance of road safety rules is the primary duty of all of us - Judge Satish M

                ಶಿರಹಟ್ಟಿ 23 : ರಸ್ತೆ ನಿಯಮಗಳ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ,ರಸ್ತೆ ನಿಯಮಗಳನ್ನು ಮಕ್ಕಳು ಸೇರಿದಂತೆ ಎಲ್ಲರೂ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಮಯಗಳು ನಮ್ಮ ಸುರಕ್ಷತೆಗಾಗಿ ಮತ್ತು ಅನುಕೂಲಕ್ಕಾಗಿ ನಾವೇ ರೂಪಿಸಿಕೊಂಡ ನಿಯಮಗಳಾಗಿವೆ. ಈ ನಿಯಮಗಳ ಪಾಲನೆಯಿಂದ ಮನುಷ್ಯನ ಜೀವಕ್ಕೆ ಉಂಟಾಗುವ ಹಲವಾರು ಅನೀರೀಕ್ಷಿತ ಅಪಘಾತಗಳು ಕಡಿಮೆಯಾಗುತ್ತವೆ ಎಂದು ನ್ಯಾಯಾಧೀಶರಾದ ಶ್ರೀ ಸತೀಶ ಎಂ. ಹೇಳಿದರು. ಅವರು ಶುಕ್ರವಾರ ಪಟ್ಟಣದ ತಹಶಿಲ್ದಾರ ಕಚೇರಿಯಿಂದ ರಸ್ತೆ ಸುರಕ್ಷತಾ ನಿಯಮಗಳ ಮಾಸಾಚರಣೆಯ ಜಾಥಾ ಆರಂಭಿಸಿ ಮಕ್ಕಳೊಂದಿಗೆ ತಾವು ಕೂಡಾ ಹೆಜ್ಜೆ ಹಾಕುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಮರ್ಥ್ಯ ಸೌಧದಲ್ಲಿ ನೆಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ತ್ರಿಬಲ್ ರೈಡಿಂಗ್, ಮದ್ಯಪಾನ ಮಾಡಿ ವಾಹನ ಚಾಲನೆ,

              ಪರವಾನಿಗೆ ಇಲ್ಲದೆ ವಾಹನ ಚಾಲನೆ, ರಸ್ತೆ ನಿಯಮಗಳನ್ನು ಪಾಲಿಸದೆ ಅತಿವೇಗದ ವಾಹನ ಚಾಲನೆ ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದ್ದು ನ್ಯಾಯಾಂಗ ಇಲಾಖೆ ಮತ್ತು ಪೋಲೀಸ್ ಇಲಾಖೆ ಈ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು. ಈಗಾಗಲೇ ಮೋಟಾರ ವಾಹನ ಕಾಯಿದೆ ಸೇರಿದಂತೆ ರಸ್ತೆ ಸುರಕ್ಷತೆಯ ಕುರಿತು ಹಲವಾರು ಕಾನೂನುಗಳಿದ್ದು ಎಲ್ಲರೂ ಕಾನೂನಿನ ಅರಿವನ್ನು ಪಡೆಯಬೇಕು. ಕಾನೂನಿನ ಅರಿವಿಲ್ಲದೆ ಮಾಡಿದ ತಪ್ಪು ಸಹ ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾನೂನಿನಲ್ಲಿ ದಂಡ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದರು.

            ಈ ಸಂದರ್ಭದಲ್ಲಿ ವಿ.ಎ. ಮುಳಗುಂದ ಮಠ,ಉಪ ತಹಶೀಲ್ದಾರರು ಶಿರಹಟ್ಟಿ, ಬಿ.ಇ.ಓ. ನಾಣಕಿ ನಾಯಕ್, ಪಪಂ ಮುಖ್ಯಾಧಿಕಾರಿ ಸವಿತಾ ತಾಂಬ್ರೆ, ಪ್ಯಾನಲ್ ವಕೀಲರಾದ ಎನ್‌.ಸಿ. ಪಾಟೀಲ, ಹಿರಿಯ ಮೋಟರ್ ವಾಹನ ನೀರೀಕ್ಷಕರಾದ ಅರುಣ ಎಫ್‌.ಕಟ್ಟಿಮನಿ, ಸಿ.ಪಿ.ಐ. ಬಿ.ವಿ. ನ್ಯಾಮಗೌಡರ, ಸರ್ಕಾರಿ ಅಭಿಯೋಜಕರಾದ ಹೀನಾಕೌಸರ ಗಂಜಿಹಾಳ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘ ಶಿರಹಟ್ಟಿ ಲಕ್ಷ್ಮೇಶ್ವರ, ತಾಲ್ಲೂಕು ಆಡಳಿತ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯತಿ, ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆ, ಸಾರಿಗೆ ಇಲಾಖೆ, ಸಿ.ಸಿ.ಎನ್‌. ಪ್ರೌಢಶಾಲೆ, ಎಫ್‌.ಎಂ. ಡಬಾಲಿ ಪ್ರೌಢಶಾಲೆ, ಎ.ಎ.ಪಠಾಣ್ ಉರ್ದು ಪ್ರೌಢಶಾಲೆ ಶಿರಹಟ್ಟಿ ಈ ಶಾಲೆಗಳ ನೂರಾರು ಮಕ್ಕಳು, ಶಿಕ್ಷಕರು, ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿದ್ದರು.