ಕಿಶೋರಿಯರ ಬಲವರ್ಧನೆಗೆ ಪೌಷ್ಟಿಕ ಆಹಾರ ಆತ್ಮರಕ್ಷಣೆಯ ಕೌಶಲ್ಯ ಅಗತ್ಯ:ಮೋತಿಬಾಯಿ

ಕಿಶೋರಿಯರ ಬಲವರ್ಧನೆಗೆ ಪೌಷ್ಟಿಕ ಆಹಾರ ಆತ್ಮರಕ್ಷಣೆಯ ಕೌಶಲ್ಯ ಅಗತ್ಯ:ಮೋತಿಬಾಯಿ Nutritional food and self-defense skills are essential for the empowerment of teenagers: Motibai

 

ದೇವರಹಿಪ್ಪರಗಿ  03: ತಾಲೂಕಿನ ಕೆರೂಟಗಿ ಗ್ರಾಮದ ಸರ್ಕಾರಿ  ಪ್ರೌಡ ಶಾಲೆಯಲ್ಲಿ ಕಿಶೋರಿಯರ ಬಲವರ್ಧನೆ ಕಾರ್ಯಕ್ರಮವನ್ನು ಸೋಮವಾರ ಮಾಡಲಾಯಿತು. ಆರೋಗ್ಯ ಇಲಾಖೆ ಯಿಂದ ಆಗಮಿಸಿದ ಎಂ.ಡಿ ಮೋತಿಬಾಯಿ ಮಾತನಾಡಿ ಕಿಶೋರಿಯರು ಎಂದರೆ 13 ರಿಂದ 19 ವರ್ಷದೊಳಗಿನ ಎಲ್ಲರನ್ನು ಕಿಶೋರಿಯರು ಎಂದು ಕರೆಯುತ್ತಾರೆ. ಇಂದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಕಿಶೋರಿಯರು ಎದುರಿಸುತ್ತಿದ್ದಾರೆ ಅಪೌಷ್ಟಿಕತೆ ರಕ್ತ ಹೀನತೆ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವರೀಗೆ ಪೌಷ್ಟಿಕ ಆಹಾರದ ಸೇವನೆ ಐರನ್ ಮಾತ್ರೆಗಳು ಪೋಲಿಕ್ ಆಸಿಡ್ ಮಾತ್ರೆಗಳ  ಸೇವನೆಯ ಬಗ್ಗೆ ತಿಳಿಸಿದರು. ಶಿಕ್ಷಕರಾದ ಎಂ.ಎಂ.ಕರೆಕ್ಕಿ ಮಾತನಾಡಿ ಅನಾದಿಕಾಲದಿಂದಲೂ ಹೆಣ್ಣು ಮಕ್ಕಳನ್ನು ಪೂಜ್ಯನೀಯ ಗೌರವ ಭಾವದಿಂದ ನೋಡುವ  ಸಂಸ್ಕೃತಿ ನಮ್ಮಲ್ಲೇ ಇದೆ. ಆದರೆ ಇಂದು ಸರ್ಕಾರದ ಹಲವಾರು ಸೌಲಭ್ಯಗಳು ಯೋಜನೆಗಳು ಇದ್ದರೂ ಅವುಗಳು ಕಿಶೋರಿಯರಿಗೆ ಸರಿಯಾದ ಹಂತದಲ್ಲಿ ತಲುಪುತ್ತಿಲ್ಲ ಕಿಶೋರಿಯರು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಬೇಕಿದೆ. ನಿಮ್ಮ ಸಹಾಯಕ್ಕೆ ಹಲವಾರು ಸಂಘ-ಸಂಸ್ಥೆಗಳು ಸರಕಾರದ ಯೋಜನೆಗಳು ಇವೆ ಎಂದರು. ಸ್ನೇಹ ಸಂಸ್ಥೆಯ ಸಿಬ್ಬಂದಿ ಗೌಡಪ್ಪ ಬಿರಾದಾರ ಮಾತನಾಡಿ, ಬಾಲ್ಯ ವಿವಾಹದ ದುಷ್ಪರಿಣಾಮಗಳು, ಹೆಣ್ಣು ಭ್ರೂಣ ಹತ್ಯ, ಲಿಂಗ ತಾರತಮ್ಯ ಕಿಶೋರಿಯರ ಜವಾಬ್ದಾರಿಗಳು  ಮತ್ತು ಪಾಲಕರ ಕನಸುಗಳನ್ನು ನೀವು ನನಸಾಗಿಸಬೇಕಿದೆ. ಆದ ಕಾರಣ ನೀವು ಆರೋಗ್ಯ, ಶಿಕ್ಷಣ, ವಯಕ್ತಿಕ ಸ್ವಚ್ಚತೆ ಎಲ್ಲವನ್ನೂ ಪಾಲಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತೆಯರ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.