ಕೂಸಿನ ಮನೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ: ಇಒ ದುಂಡಪ್ಪ ತುರಾದಿ

Nursing Homes Help Children's Intellectual Development: EO Dundappa Turadi

ಕೂಸಿನ ಮನೆಗಳು ಮಕ್ಕಳ ಬೌದ್ಧಿಕ ಬೆಳವಣಿಗೆ ಸಹಕಾರಿ: ಇಒ ದುಂಡಪ್ಪ ತುರಾದಿ 

ಕೊಪ್ಪಳ 21: ಮಕ್ಕಳ ಬೌದ್ದಿಕ ಬೆಳವಣಿಗೆಗೆ ಕೂಸಿನ ಮನೆಗಳು ಗ್ರಾಮೀಣ ಭಾಗಕ್ಕೆ ಸಹಕಾರಿಯಾಗಿದೆಂದು ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಕರೆ ನೀಡಿದರು.  

ಅವರು ಶನಿವಾರ ಕೊಪ್ಪಳ ತಾಲೂಕ ಪಂಚಾಯತಿಯ ಸಾಸಭಾಂಗಣದಲ್ಲಿ ಕೂಸಿನ ಮನೆಯ ಆರೈಕೆದಾರರಿಗೆ ಏರಿ​‍್ಡಸಿದ್ದ 7 ದಿನಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.  

ಕೂಸಿನ ಮನೆಗಳು ಮಕ್ಕಳಿಗೆ ಬೇಕಾದ ಕಲಿಕಾ ಪೂರಕ ಚಟುವಟಿಕೆಗಳನ್ನು ಜರುಗಿಸಲು ನಾನಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯತಿಗೆ ಬಿಡುಗಡೆಯಾದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗಿದ್ದು ಮಕ್ಕಳ ಆರೈಕೆದಾರರು ಕೂಸಿನ ಮನೆಗೆ ದಾಖಲಾಗುವ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕೆಂದರು. ಕೂಸಿನ ಮನೆಯ ಮಕ್ಕಳನ್ನು ತಮ್ಮ ಮಕ್ಕಳಂತೆ ಆರೈಕೆ ಮಾಡಿ ಅವರಿಗೆ ಆಹಾರವನ್ನು ಕ್ರಮಬದ್ದವಾಗಿ ನೀಡುವಂತೆ ತಿಳಿಸಿದರು. ಕೂಸಿನ ಮನೆಗೆ ನಿಗದಿಪಡಿಸಲಾದ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಮಕ್ಕಳಿಗೆ ಸಂಬಂಧಿಸಿದ ವಿಷಯವಾಗಿರುವದರಿಂದ ಯಾವುದೇ ರೀತಿಯಾಗಿ ನಿರ್ಲಕ್ಷ್ಯವಹಿಸುವಂತಿಲ್ಲವೆಂದರು. ಪ್ರತಿ ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಜರುಗಿಸುವದರ ಜೊತೆಗೆ ಪ್ರತಿ ಮಗುವಿನ ತೂಕ ಮತ್ತು ಆರೋಗ್ಯದ ಬಗ್ಗೆ ನಿಗಾವಹಿಸಲು ಪಾಲಕರಿಗೆ ಮಾಹಿತಿ ನೀಡಬೇಕೆಂದರು.  

ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ ಮಾತನಾಡಿ, 7 ದಿನಗಳ ಕಾಲ ತರಬೇತಿಯನ್ನು ನೀಡಲಾಗಿದ್ದು ಆರೈಕೆದಾರರು ಆಸಕ್ತವಹಿಸಿ ಕೂಸಿನ ಮನೆಯನ್ನು ಮಾದರಿ ಕೂಸಿನ ಮನೆಯನ್ನಾಗಿ ನಿರ್ಮಿಸುವಲ್ಲಿ ನಿಮ್ಮಗಳ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಜರುಗಿಸುವದರಿಂದ ಮಕ್ಕಳ ಬೌಧ್ದಿಕ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.  

ಶಿಬಿರಾರ್ಥಿಗಳು ತರಬೇತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ವ್ಯವಸ್ಥಾಪಕ ಬಸವರಾಜ ಪಾಟೀಲ್, ವಿಷಯ ನಿರ್ವಾಹಕ ಬಸವರಾಜ ಬಳಿಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಮಾಸ್ಟರ್ ಟ್ರೈನರಗಳಾದ ಜಯಶ್ರೀ, ಉಷಾ, ಎಚ್‌.ಎಸ್‌.ಹೊನ್ನುಂಚಿ ಸೇರಿದಂತೆ ಶಿಬಿರಾರ್ಥಿಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.