ಶಿಕ್ಷಣ ಸಂಸ್ಥೆಗಳ ನಿಜವಾದ ಬೆನ್ನೆಲುಬು ಭೋಧಕೇತರ ಸಿಬ್ಬಂದಿ ವರ್ಗ: ಸಂತೋಷ ಕಾಮಗೌಡ
Non-teaching staff are the real backbone of educational institutions: Santosh Kamagowda
ಶಿಕ್ಷಣ ಸಂಸ್ಥೆಗಳ ನಿಜವಾದ ಬೆನ್ನೆಲುಬು ಭೋಧಕೇತರ ಸಿಬ್ಬಂದಿ ವರ್ಗ: ಸಂತೋಷ ಕಾಮಗೌಡ
ಕಾಗವಾಡ 36: ಶಿಕ್ಷಣ ಸಂಸ್ಥೆಗಳು ಬೆಳೆಯ ಬೇಕಾದರೆ ಭೋಧಕೇತರ ಸಿಬ್ಬಂದಿಯವರು ಕೌಶಲ್ಯರಾಗಿರುವುದು ಬಹಳ ಅವಶ್ಯವಾಗಿದೆ. ಮನುಷ್ಯ ಬದಲಾವಣೆಗೆ ಬೇಗನೆ ಹೊಂದಿಕೊಳ್ಳುವದಿಲ್ಲ. ತಂತ್ರಜ್ಞಾನ ತುಂಬಾ ಅಭಿವೃದ್ದಿಗೊಂಡಿದೆ ಆ ಪ್ರಕಾರ ಬೊಧಕೇತರ ಸಿಬ್ಬಂದಿ ತಮ್ಮಲ್ಲಿ ಬದಲಾವಣೆಯನ್ನು ತಂದುಕೊಂಡು ಕಾರ್ಯತಪ್ತರಾಗಿರಬೇಕು. ವಾಣಿಜ್ಯ ವಿಷಯದಲ್ಲಿ ಗ್ರಾಹಕನೇ ರಾಜ ಎಂಬಂತೆ ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ರಾಜನಂತೆ ಕಂಡು, ಆ ಪ್ರಕಾರ ವರ್ತಿಸಬೇಕು ಅಂದಾಗ ಮಾತ್ರ ಶಿಕ್ಷಣ ಸಂಸ್ಥೆಯ ಅಭಿವೃದ್ದಿ ಸಾಧ್ಯ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡಾ ತಿಳಿಸಿದ್ದಾರೆ. ಅವರು ಇತ್ತೀಚಿಗೆ ಬೆಳಗಾವಿ ನಗರದ ಕನ್ನಡ ಭವನದಲ್ಲಿ ಎಸ್‌ಎಸ್‌ಎಸ್ ಸಮಿತಿಯ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಹಮ್ಮಿಕೊಂಡ ಭೋಧಕೇತರ ಸಿಬ್ಬಂದಿಯವರ ವೃತ್ತಿಪರ ಕೌಶಲ್ಯಗಳು ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಧಾರವಾಡದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಕರಿಮುನ್ನಿಸಾ ಸೈಯದ್ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರೆದತೂ ಮನುಷ್ಯನ ಪ್ರತಿಭೆಯೇ ದೊಡ್ಡದು. ಮನುಷ್ಯನ ಬುದ್ದಿವಂತಿಕೆಯ ಮುಂದೆ ಯಾವುದೇ ಬದಲಿ ವ್ಯವಸ್ಥೆ ಇಲ್ಲ. ಬೋಧಕೇತರ ಸಿಬ್ಬಂದಿಯವರು ಸಂಸ್ಥೆಯ ಕಾರ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಯ ಪ್ರವೇಶದಿಂದ ಹಿಡಿದು ವರ್ಗಾವಣೆ ಪತ್ರದ ವರೆಗೆ ಅವರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಸರಿಯಾದ ತರಬೇತಿಯ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಈ ಕಾರ್ಯಾಗಾರ ತುಂಬಾ ಮಹತ್ವದ್ದಾಗಿದೆ ಎಂದರು. ಅಧ್ಯಕ್ಷತೆಯನ್ನು ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಕಾಲೇಜು ಆಡಳಿತ ಮಂಡಳಿ ಚೇರಮನ್ನ ವಿನೋದ ಎಸ್. ಪಾಟೀಲ ವಹಿಸಿ, ಮಾತನಾಡಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಭರತ. ಅಲಸಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತೇಶ ಎಜ್ಯುಕೇಶನ್ ಟ್ರಸ್ಟನ್, ಹನಿಮಿನಾಳ ಪ್ರೌಢ ಶಾಲೆಯ ವಿದ್ಯಾರ್ಥಿನಿಯರ ನಮೊಕಾರ ಮಂತ್ರ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಾಗಾರದಲ್ಲಿ 100 ಕ್ಕೂ ಅಧಿಕ ಸಿಬ್ಬಂದಿಗಳು ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೋ. ರವಿ ದಂಡಗಿ, ಸ್ವಾಗತಿಸಿದರು. ಪ್ರೋ. ಬಿ. ಎಸ್. ಪಾಟೀಲ ಮತ್ತು ಪೋ. ನಿರ್ಮಲಾ ಗಡಾದ ಪರಿಚಯಿಸಿದರು. ರೇಖಾ ಕಲಬುರ್ಗಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 