ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಏನೆ ಬರಲಿ ಇಷ್ಟ ಪಟ್ಟು ಓದಿ ಗುರಿ ಸಾಧಿಸಿ: ಎಸೈ ಚಂದಲಾಪೂರ
No matter what difficulties you face in your student life, study hard and achieve your goals: Esai
ತಾಳಿಕೋಟೆ 22: ಪಟ್ಟಣದ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಪದವಿ ಪೂರ್ವ ಕಾಲೇಜಿನ ಪಿಯುಸಿ ಹಾಗೂ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡು ಕಾರ್ಯಕ್ರಮದಲ್ಲಿ ’ಸಾಧಕರಿಗೆ ಸನ್ಮಾನ’ ದಲ್ಲಿ ಪಿಎಸ್‌ಐ ಗೋವಿಂದಪ್ಪ ಚಂದಲಾಪುರ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಹೇಳಿದರು.
ತಾನು ಬಿ.ಇ. ಎಮ್ಟೆಕ್ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಪೋಲಿಸ್ ಇಲಾಖೆಯಲ್ಲಿ ಎಸೈ ಹುದ್ದೆ ಪಡೆದೆ ಅದಕ್ಕೆ ಎಸ್ಕೆ ಪ್ರೌಢಶಾಲೆಯಲ್ಲಿ ಗಟ್ಟಿ ಅಡಿಪಾಯವನ್ನು ಹಾಕಿ ಕಳಿಸಿದ ನಮ್ಮ ಶಿಕ್ಷಕರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪೋಲಿಸ ಇಲಾಖೆಯಲ್ಲಿ ಎತ್ತರ, ದೈಹಿಕ ಗಟ್ಟಿತನ ಬೇಕಾಗಿರುವುದರಿಂದ ಉಳಿದೆಲ್ಲ ಇಲಾಖೆಗೆ ಹೋಲಿಸಿದರೆ ಇಲ್ಲಿ ಸ್ಪರ್ಧೆ ಕಡಿಮೆ ಇರೋದರಿಂದ ಅವಕಾಶಗಳು ಹೆಚ್ಚಾಗಿವೆ, ದೇಶ ವಿದೇಶಗಳಲ್ಲಿ ಇಲಾಖೆಯ ಕೆಲಸದ ಮೇಲೆ ತೆರಳುವಾಗ ನಮಗೆ ಇಂಗ್ಲಿಷ್ ಹಿಂದಿ ಭಾಷೆಗಳ ಜ್ಞಾನ ಅವಶ್ಯಕತೆ ಇದೆ ಅದೆಲ್ಲವು ನನಗೆ ಈ ಸಂಸ್ಥೆಯ ಶಿಕ್ಷಕರು ಧಾರೆ ಎರೆದು ಕಳಿಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಏನೆ ಬರಲಿ ಇಷ್ಟ ಪಟ್ಟು ಓದಿ ಗುರಿ ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು. ಇನ್ನೋರ್ವ ಸಂಗೀತ ಕ್ಷೇತ್ರದಲ್ಲಿ ಜುನಿಯರ್ ಎಸ್ಪಿಬಿ ಎಂದು ಕರೆಸಿಕೊಳ್ಳುವ ಸಾಧಕ ವೀರೇಶ ವಾಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ವಿದ್ಯಾರ್ಜನೆ ಮಾಡುವಾಗಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಭಾವುಕರಾದರು. ತನ್ನೂರು ನಾಲತವಾಡದಲ್ಲಿ ಪಿಯುಸಿ ಪದವಿ ಕಾಲೇಜು ಬಿಟ್ಟು ಎಸ್.ಕೆ ಕಾಲೇಜಿನಲ್ಲಿಯೇ ಓದಬೇಕೆಂಬ ಹಂಬಲದಿಂದ ಇಲ್ಲಿ ಕಲಿತೆ, ಮುಂದೆ ಹಾಡುಗಾರಿಕೆ ಯಲ್ಲಿ ಆಸಕ್ತಿಯನ್ನು ಹೊಂದಿದ್ದರಿಂದ ಆ ಕಡೆಗೆ ಸಿಕ್ಕು ಬದಲಿಸಿಕೊಂಡು ಜೀವನ ಸಾಗಿಸುತ್ತಿರುವೆ ,
ಇಲ್ಲಿಯ ಆಡಳಿತ ಮಂಡಳಿ, ಶಿಕ್ಷಕರು ಪ್ರೋತ್ಸಾಹಿಸಿದರು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಹನುಮಂತ ಪೂಜಾರಿ ಮಾತನಾಡುತ್ತಾ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿರಂತರ ಅಧ್ಯಯನ ಮಾಡಬೇಕು,ದಿನಕ್ಕೆ 7 ಗಂಟೆ ಓದಬೇಕು ಎಂದು ಹೇಳಿದರು. ಸ್ವರಚಿತ ಮೂರಕ್ಷರದ ಶಬ್ದಗಳ ಪದ್ಯ ಓದಿದರು.ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಉತ್ತೀರ್ಣರಾಗು ಎರಡೆರಡು ವಿದ್ಯಾರ್ಥಿಗಳು ನಮ್ಮದೇ ಸಂಸ್ಥೆಯಲ್ಲಿ ಪಿಯುಸಿ,ಪದವಿ ಪೂರ್ವ, ಪದವಿ ಹಾಗೂ ಬಿ.ಇಡಿ ಪ್ರವೇಶದಲ್ಲಿ ಪ್ರವೇಶ ಪಡೆದರೆ ಅವರಿಗೆ ಫೀ ನಲ್ಲಿ ರಿಯಾಯತಿ ನೀಡಲಾಗುವುದು ಎಂದು ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್.ಮುರಾಳ ಘೋಷಿಸಿದರು.
ಪ್ರಾಚಾರ್ಯ ಕಿಶೋರಕುಮಾರ ಅಧ್ಯಕ್ಷತೆ ವಹಿಸಿದ್ದರು, ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ.ಸಿ.ಹಿರೇಮಠ (ಹಂಪಿ ಮುತ್ಯಾ), ಉಪಾಧ್ಯಕ್ಷ ಕೆ.ಎಸ್.ಮುರಾಳ, ಪ.ಪೂ.ಕಾಲೇಜು ಚೇರಮನ್ ಎಮ್.ಆರ್.ಕತ್ತಿ,ಹೈಸ್ಕೂಲ್ ಚೇರಮನ್ ಎಮ್.ಸಿ.ಕತ್ತಿ, ಉಪಪ್ರಾಚಾರ್ಯ ಜಗದೀಶ ಕಟ್ಟಿಮನಿ, ಎನ್‌ಎಸ್‌ಎಸ್ ಸಂಯೋಜಕ ಡಾ.ಎಚ್.ಬಿ.ನಾಯಕ, ಪ್ರೌಢಶಾಲೆಯ ಸಿಬ್ಬಂದಿ ಕಾರ್ಯದರ್ಶಿ ಎಸ್.ಎಮ್.ಪಾಟೀಲ ವಿದ್ಯಾರ್ಥಿ ಪ್ರತಿನಿಧಿಗಳಾದ ಅನಿಲಕುಮಾರ ನಾಗುರಮೇಟಿ, ವೀರೇಶ ಹಿರೇಮಠ ಇದ್ದರು. ಉಪನ್ಯಾಸಕ ಆರಿ್ಜ.ರಾಠೋಡ ಹಾಗೂ ಬಸಮ್ಮ ನಾಟೀಕಾರ ನಿರೂಪಿಸಿದರು. ಡಾ.ಹನಮಂತ ನಾಯಕ ಸ್ವಾಗತಿಸಿದರು, ಎಸ್.ಎಮ್.ಪಾಟೀ.ಮತ್ತು ಜ್ಯೋತಿ ಮಸೂತಿಮಠ ಸನ್ಮಾನ ನಡೆಸಿದರು, ಆದರ್ಶ ವಿದ್ಯಾರಗ ಸನ್ಮಾನವನ್ನು ಎ.ಎಚ್.ಹೂಗಾರ ನಡೆಸಿದರು. ವಂದನಾರೆ್ಣಯನ್ನು ಚೇರಮನ ಎಮ್ ಆರ್ ಕತ್ತಿ ನಡೆಸಿದರು. ಉಪನ್ಯಾಸಕಿ ಅಶ್ವಿನಿ ಜೋಗುರ ವಂದೇ ಮಾತ್ರಮ್ ಹಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 