ನಿರ್ಮಲಾ ಸೀತಾರಾಮರವರ ಬಜೆಟ್ಟಿನಲ್ಲಿ ರೈತರ, ಜನಸಾಮಾನ್ಯರ ಯಾವುದೇ ನೆಂಟಿಲ್ಲ

Nirmala Sitharaman's budget has no concern for farmers and common people

ನಿರ್ಮಲಾ ಸೀತಾರಾಮರವರ  ಬಜೆಟ್ಟಿನಲ್ಲಿ ರೈತರ,  ಜನಸಾಮಾನ್ಯರ ಯಾವುದೇ ನೆಂಟಿಲ್ಲ 

ರಾಣೇಬೆನ್ನೂರು 01 :      ಕೇಂದ್ರ ಸರಕಾರದ  25/26.ನೆ ಸಾಲಿನ  ಬಜೆಟಿನಲ್ಲಿ ರೈತರಿಗೆ ನಿರಾಶದಾಯಕವಾಗಿದೆ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಮೊದಲಿನಿಂದಲೂ ರೈತರನ್ನು ವಿರೋಧಿಸುತ್ತಲೆ ಬಂದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ರೈತ ವಿರೋಧಿ ನೀತಿ ಅನುಸರಿಸುವ ಮೂಲಕ ನಾನು ಎಂದೆಂದಿಗೂ ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.. ಬಡವರನ್ನು ಮಧ್ಯಮ ವರ್ಗದವರನ್ನು. ಕೃಷಿಕರನ್ನು ಕೃಷಿಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಿ. ಮಂಡಿಸಿದ ನಿರ್ಮಲ ಸೀತಾರಾಮನ್ ರವರ 8ನೇ ಬಜೆಟ್ಟಿನಲ್ಲಿ ಈ ವರ್ಗದವರಿಗೆ ಯಾವುದೇ ನಂಟಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ- ರವೀಂದ್ರ ಗೌಡ ಪಾಟೀಲ್, ರೈತ ಮುಖಂಡ, ಮುಸ್ಟೂರು.