ನೂತನವಾಗಿ ನಿಮರ್ಿಸಿದ ಡಾ. ಅಂಬೇಡಕರ ಮೂತರ್ಿಗೆ ಪೂಜೆ


ಲೋಕದರ್ಶನ ವರದಿ

ಬೆಳಗಾವಿ 25:  ಗ್ರಾಮೀಣ ಮತಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ಪ್ರತಿಸ್ಟಾಪಿಸಲು ನೂತನವಾಗಿ ನಿಮರ್ಿಸಿರುವ ಡಾ.ಬಾಬಾಸಾಹೇಬ ಅಂಬೇಡಕರ ಅವರ ಮೂತರ್ಿಯನ್ನು ದಿ. 25ರಂದು ಬೆಳಗಾವಿಯ ಬೋಗಾರವೇಸದಲ್ಲಿ ಇರುವ ಸಂಬಾಜಿ ಮಹಾರಾಜರ ಮೂತರ್ಿ ಹಾಗೂ   ನೂತನವಾಗಿ ನಿಮರ್ಿಸಿದ ಡಾ.ಬಾಬಾಸಾಹೇಬ ಅಂಬೇಡಕರ ಇವರ ಮೂತರ್ಿಗಳಿಗೆ ಪೂಜೆ ಸಲ್ಲಿಸಿ ಅಂಬೇಡಕರ ಮೂತರ್ಿಯನ್ನು ಬಸ್ತವಾಡ ಗ್ರಾಮದ ಗ್ರಾಮಸ್ಥರಿಗೆ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಹಸ್ತಾಂತರಿಸಿದರು. ಈ ನೂತನ ಮೂತರ್ಿಯನ್ನು ಗ್ರಾಮಸ್ತರು ಮರೆವಣಿಗೆಯ ಮುಖಾಂತರ ಬಸ್ತವಾಡ ಗ್ರಾಮದಲ್ಲಿ ಪ್ರತಿಷ್ಟಾಪಿಸಲು ಕೊಂಡೊಯ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ ಇವರು ಮೂತರ್ಿಗಳಿಗೆ ಪೂಜೆಸಲ್ಲಿಸಿ ಮಾತನಾಡುತ್ತಾ ಬಸ್ತವಾಡ ಗ್ರಾಮದ ದಲಿತ ಸಮುದಾಯದವರು ತಮ್ಮ ಊರಿನಲ್ಲಿ ಪ್ರತಿಸ್ಟಾಪಿಸಲು ಡಾ.ಬಾಬಾಸಾಹೇಬ ಅಂಬೇಡಕರ ಇವರ ಮೂತರ್ಿಯನ್ನು ಕೊಡಿಸಲು ಕೇಳಿದಾಗ ನಾನು ತಕ್ಷಣ ಈ ಮೂತರ್ಿಯನ್ನು ಕೊಡಲು ಒಪ್ಪಿಕೊಂಡು ಈಗ ಈ ಮೂತರ್ಿಯನ್ನು ಅವರಿಗೆ ಹಸ್ತಾಂತರಿಸುತ್ತಿದ್ದೇನೆ. ಡಾ.ಬಾಬಾಸಾಹೇಬ ಅಂಬೇಡಕರ ಇವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯರಲ್ಲಿ ಒಬ್ಬರು, ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು "ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ ಅಲ್ಲದೆ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡಿದ ಇನ್ನೋರ್ವ ಮಹಾಪುರುಷರು ಇವರಿಂದ ಧರ್ಮದ ರಕ್ಷಣೆ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಅಂಬೇಡಕರ ಇವರಿಂದ ಸಂವಿಧಾನದ ಬಗ್ಗೆ ನಾವೆಲ್ಲರೂ ಅರಿತುಕೊಳ್ಳಬೇಕು, ಅಲ್ಲದೆ ಇಂತಹ ಮಹಾನ ವ್ಯಕ್ತಿಗಳ ಮೂತರ್ಿಗಳನ್ನು ಪ್ರತಿಷ್ಟಾಪಿಸುವ ಮುಖಾಂತರ ಗೌರವ ಸಲ್ಲಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾನ್ಯ ಮಾಜಿ ಶಾಸಕರಿಗೆ ಗ್ರಾಮಸ್ತರು ಮಾಲಾರ್ಪಣೆ ಮಾಡುವ ಮೂಲಕ ಸತ್ಕರಿಸಿದರು.

ಗ್ರಾಮ ಪಂಚಾಯತ ಸದಸ್ಯರಾದ ರಾಜು ಪಾಟೀಲ, ದಲಿತ ಮುಖಂಡರಾದ ಗಿರಿಯಪ್ಪಾ ಕೋಲಕಾರ, ಗಜು ತಳವಾರ, ಪುಂಡಲಿಕ ಕೋಲಕಾರ, ರಾಜು ಕೋಲಕಾರ, ಕೃಷ್ಣಾ ಕೋಲಕಾರ, ಶೇಖರ ಅಯ್ಯನವರ, ನೇಮೂ ಮೆತ್ರಿ, ರಾಹುಲ ತಳವಾರ, ಮಹಿಳಾ ಸಂಘದ ಸದಸ್ಯರು, ದಲಿತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.