ಕಾನಿಪ ಗದಗ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಸನ್ಮಾನ
New office bearers of Kanip Gadag district unit felicitated
ಗದಗ 14 : ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರವೂ ಪ್ರಮುಖವಾಗಿದೆ ಎಂದು ಸಿಆರ್‌ಪಿಎಫ್ ಎಎಸ್‌ಐ ಎಂ.ವೈ. ರೋಣದ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ 2025-28 ನೇ ಸಾಲಿನ ಅವಧಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಎಲ್ಲ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಿಗೆ ತಾಲ್ಲೂಕಿನ ಹುಯಿಲಗೋಳ ಗ್ರಾಮದ ರಫ್ ಆಂಡ್ ಟಫ್ ಯುವಕ ಮಂಡಳ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳ ಜಂಟಿಯಾಗಿ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಧ್ವನಿ ಇಲ್ಲದ ಶೋಷಿತರ ಧ್ವನಿಯಾಗಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಾರೆ. ಗಡಿಯಲ್ಲಿ ಯುದ್ಧ ಅಥವಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹ ಪತ್ರಕರ್ತರು ಜೀವಭಯ ತೊರೆದು ವರದಿ ಮಾಡುವುದನ್ನು ನಾವೂ ಸಹ ನೋಡಿದ್ದಾಗಿ ಹೇಳಿದ ಅವರು, ಇಂತಹ ಸನ್ಮಾನಗಳು ಅವರನ್ನು ಮತ್ತಷ್ಟು ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು. ಯುವ ಮುಖಂಡ ಶ್ರೀಕಾಂತ ಹಟ್ಟಿ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಪ್ರಾಮಾಣಿಕತೆ ಇದ್ದರೆ ನಿಗದಿತ ಗುರಿ ಸಾಧಿಸುವ ಹಾದಿ ಸುಗಮವಾಗಲಿದೆ ಎಂದರು.
ಮುಖಂಡ ಎಸ್.ಎನ್. ಸೊರಟೂರ ಮಾತನಾಡಿ, ಕಾನಿಪ ನೂತನ ಅಧ್ಯಕ್ಷ ರಾಜು ಹೆಬ್ಬಳ್ಳಿ ಅವರು 1996-97 ರಲ್ಲಿ ಗ್ರಾಮದಲ್ಲಿ ಸ್ಥಾಪನೆಗೊಂಡ ರಫ್ ಆಂಡ್ ಟಫ್ ಯುವಕ ಮಂಡಳಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳಲು ವೇದಿಕೆ ಸಿಕ್ಕಿತು. ಅಲ್ಲಿಂದ ಗ್ರಾಮ ಪಂಚಾಯ್ತಿ ಸದಸ್ಯರಾಗಿ, ಪತ್ರಿಕೋದ್ಯಮ ಪ್ರವೇಶಿಸಿ, ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ, ಇದೀಗ ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿರುವುದು ನಮ್ಮೆಲ್ಲ ಸ್ನೇಹಿತರಿಗೆ ಹೆಮ್ಮೆಯ ಸಂಗತಿ. ಇವರ ಅಧಿಕಾರಾವಧಿಯಲ್ಲಿ ಪತ್ರಕರ್ತರ ಹಿತ ಕಾಪಾಡುವ ಕೆಲಸಗಳು ಆಗಲಿ ಎಂದು ಆಶಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ 2025-28 ನೇ ಸಾಲಿನ ಅವಧಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ನೂತನ ಅಧ್ಯಕ್ಷ ರಾಜು ಹೆಬ್ಬಳ್ಳಿ, ಉಪಾಧ್ಯಕ್ಷ ವಿ.ಡಿ.ಕಣವಿ, ಪ್ರಭುಸ್ವಾಮಿ ಅರವಟಗಿಮಠ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ವೆಂಕಟೇಶ ಇಮರಾಪೂರ, ರುದ್ರಗೌಡ ಪಾಟೀಲ, ಮೌನೇಶ ಬಡಿಗೇರ, ಮಂಜುನಾಥ ಪತ್ತಾರ, ಸಂತೋಷ ಕೊಣ್ಣೂರ, ಯಲ್ಲಪ್ಪ ತಳವಾರ ಅವರಿಗೆ ತಾಲೂಕಿನ ಹುಯಿಲಗೋಳ ಗ್ರಾಮದ ರಫ್ ಆಂಡ್ ಟಫ್ ಯುವಕ ಮಂಡಳ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳ ಜಂಟಿಯಾಗಿ ಸನ್ಮಾನಿಸಲಾಯಿತು.
ಛಾಯಾಗ್ರಾಹಕ ವಿನಾಯಕ ಚೌಡಾಪೂರ, ವೈ.ಎಸ್.ಮಹೇಂದ್ರಕರ, ಪತ್ರಿಕಾ ಭವನದ ಪರಶುರಾಮ ಹಳ್ಳದ ಅವರನ್ನು7 ಇದೇ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಸಂಘದ ಸಂಸ್ಥಾಪಕ ಹೇಮಂತ ದಾಸರ, ಎಚ್.ಎಫ್.ನದಾಫ, ಪ್ರವೀಣ ಹಟ್ಟಿ, ದೇವೇಂದ್ರ್ಪ ನೀರಲಗಿ, ಫಕ್ಕೀರೇಶ ಅಂಗಡಿ, ಮಾಜಿ ಸೈನಿಕ ದ್ಯಾಮನಗೌಡ ದಿಡ್ಡಿಮನಿ, ರಾಜು ಹೊಸೂರ, , ಮುತ್ತು ಅಂಗಡಿ ಸೇರಿ ಹುಯಿಲಗೋಳ ಹಾಗೂ ನರಸಾಪೂರ ಗ್ರಾಮದ ಯುವಕರು ಉಪಸ್ಥಿತರಿದ್ದರು. ನ್ಯಾಯವಾದಿ ಮಹೇಶ ಹಾಳಕೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 