ನೀರಾವರಿ ಯೋಜನೆಗಳು ಸುಸ್ಥಿರತೆ, ಚೇತರಿಕಾ ಸಾಮರ್ಥ್ಯದ ರಾಷ್ಟ್ರೀಯಮಟ್ಟದ ಕಾರ್ಯಾಗಾರ
National level workshop on sustainability, resilience of irrigation projects
ಬೆಳಗಾವಿ 10: ದಿ ಇನ್ಸಿ-್ಟಟ್ಯೂಷನ್ ಆಪ್ ಇಂಜನೀಯರ್ಸ ಸ್ಥಳೀಯ ಕೇಂದ್ರ ಬೆಳಗಾವಿ ಹಾಗೂ ಜಲಸಂಪನ್ಮೂಲ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಫೆಬ್ರುವರಿ 6-7ರಂದು ನೀರಾವರಿ ಯೋಜನೆಗಳು- ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಅವುಗಳ ಸುಸ್ಥಿರತೆ, ಚೇತರಿಕಾ ಸಾಮರ್ಥ್ಯ ಹಾಗೂ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದ ಕುರಿತು ಎರಡು ದಿನಗಳ ರಾಷ್ಟ್ರೀಯಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರವನ್ನು ನೀರಾವರಿ ಇಲಾಖೆ ನಿವೃತ್ತ ಕಾರ್ಯದರ್ಶಿಗಳಾದ ಕೆ. ಜೈಪ್ರಕಾಶ ಹಾಗೂ ಐಜಾಝ ಹುಸೇನ್ ಉದ್ಘಾಟಿಸಿದರು. ನಿವೃತ್ತ ಮುಖ್ಯ ಇಂಜನೀಯರ ಮಾಧವ ಹಾಗೂ ಕರ್ನಾಟಕ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮ್ಮಿನಭಾವಿ ಅತಿಥಿಗಳಾಗಿ ಆಗಮಿಸಿದ್ದರು. ಬೆಳಗಾವಿ ಐ.ಇ.ಐ. ಚೇರಮನ್ ಸಿ. ಬಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಇಂಜನೀಯರ ಎಸ್. ಎಸ್. ಖನಗಾವಿ ಉಪಸ್ಥಿತರಿದ್ದರು. ನಿಗದಿತ ವಿಷಯದ ಕುರಿತು ಅರವಿಂದ ಗಲಗಲಿ, ಡಾ. ರಾಜೇಂದ್ರ ಪೋದ್ದಾರ, ಡಾ. ಶರತ್ ಜೋಶಿ ಸೇರಿದಂತೆ ಒಂಭತ್ತು ನುರಿತ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಕುರಿತು ವಿಚಾರಗಳನ್ನು ಮಂಡಿಸಿದರು.
ಗೌ. ಕಾರ್ಯದರ್ಶಿ ವಿಲಾಸ ಬದಾಮಿ ಸ್ವಾಗತಿಸಿದರು, ಸಂಚಾಲಕ ಎಸ್. ವಾಯ್. ಕುಂದರಗಿ ಕಾರಾ್ಯಗಾರದ ಕುರಿತು ವಿವರಿಸಿದರು. ಡಾ. ವೆಂಕಟೇಶ, ದೀಪಾ, ಡಾ. ಮಂಜುನಾಥ, ಪ್ರೊ. ನಯನಾ, ಡಾ. ಸಂಜೀವ ಸಂಗಮಿ ಅತಿಥಿಗಳನ್ನು ಪರಿಚಯಿಸಿದರು. ನೀರಾವರಿ ಇಲಾಖೆ ಮುಖ್ಯ ಇಂಜನೀಯರ ಅಭಿಯಂತರ ಡಿ. ಆರ್. ರಾಠೋಡ, ಸಂಜೀವಕುಮಾರ ಹುಲಕಾಯಿ, ಸುರೇಶ ಹಾಗೂ ವಿವಿಧ ಇಂಜನೀಯರಿಂಗ್ ಕಾಲೇಜುಗಳ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಐ.ಇ.ಐ ನ ಹಿರಿಯ ಇಂಜನಿಯರುಗಳು ಉಪಸ್ಥಿತರಿದ್ದರು. ಡಾ. ಜ್ಯೋತಿ ಪಾಟೀಲ ವಂದನಾರೆ್ಣ ಮಾಡಿದರು. ಡಾ. ಮಂಜುನಾಥ ಹಾಗೂ ತಂಡದವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 