ನಾಳೆಯಿಂದ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ
National level techno-cultural festival from tomorrow
ಬೆಳಗಾವಿ 10: ನಗರದ ಜೈನ ಕಾಲೇಜ ಆಪ್ ಇಂಜಿನಿಯರಿಂಗ ಆ್ಯಂಡ್ ರಿಸರ್ಚ ಉದ್ಯಮಬಾಗ. (ಜೆಸಿಇಆರ್) ದಲ್ಲಿ ನವೆಂಬರ 12 ಮತ್ತು 13ರಂದು ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಸವಿಷ್ಕಾರ ಉತ್ಸವವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್.ವಿ ಗೋರಬಾಳ ಹೇಳಿದರು. ಜೆಸಿಇಆರ್ ಕಾಲೇಜ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮವು ದೇಶಾದ್ಯಂತದ ವಿವಿಧ ಕಾಲೇಜುಗಳ ವಿದಾರ್ಥ್ಯಿಗಳು ತಮ್ಮ ತಾಂತಿಕ ಪರಿಣಿತಿ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಬಹು ವಿಭಾಗಗಳನ್ನು ಒಳಗೊಂಡ 30ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಲು ಒಂದು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಉದ್ಘಾಟನಾ ಸಮಾರಂಭವು ನವೆಂಬರ 12ರಂದು ಮುಂಜಾನೆ 9:30ಕ್ಕೆ ಜೆಸಿಇಆರ್ ಕ್ಯಾಂಪಸನ ಎಪಿಜೆ ಅಬ್ದುಲ ಕಲಾಮ ಸಭಾಂಗಣದಲ್ಲಿ ನಡೆಯಲ್ಲಿದ್ದು ಕಾರ್ಯಕ್ರಮಕ್ಕೆ ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ ಆಯುಕ್ತ ಎನ್.ವಿ.ಭರಮಣಿ ಅವರು ಮುಖ್ಯ ಅತಿಥಿಗಳಾಗಿ ಮತ್ತು ಕಾಲೇಜಿನ ಪ್ರಾಂಶುಪಾಲ ಮತ್ತು ನಿರ್ದೇಶಕ ಡಾ.ಎಸ್.ವಿ ಗೋರಬಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಸವಿಷ್ಕಾರ 2025 ರೋಬೋ ರೇಸ್, ಹ್ಯಾಕ್‌ಸ್ಪಿಯರ, ಕೋಡ ಬ್ರೆಕ ಮತ್ತು ಪೇಪರ್ ಪ್ರಸೆಂಟೇಶನ ನಂತರ ವೈವಿಧ್ಯಮಯ ತಾಂತ್ರಿಕ ಕಾರ್ಯಕ್ರಮಗಳ ಜೊತೆಗೆ ಟ್ರೆಷರ ಹಂಟ, ಮಾಕ ಸಿಐಡಿ ಮತ್ತು ಕಾರ್ೋರೇಟ ಕಾರ್ನಿವಲ್ ಸೇರಿದಂತೆ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಒಳಗೊಂಡಿದೆ. ರಾ್ಯಂಪ ವಾಕ್, ಸೋಲೋ ಮತ್ತು ಗುಂಪು ನೃತ್ಯಗಳು ಹಾಗೂ ಗಾಯನ ಸ್ಪರ್ಧೆಗಳಂತಹ ಸಾಂಸ್ಕೃತಿಕ ಮುಖ್ಯಾಂಶಗಳು ಉತ್ಸವಕ್ಕೆ ಚೈತನ್ಯವನ್ನು ನೀಡಲಿದೆ ಎಂದು ಅವರು ಹೇಳಿದರು.
ಅತ್ಯುತ್ತಮ ಪ್ರದರ್ಶನದೊಂದಿಗೆ ಕಾಲೇಜಿಗೆ ಜನರಲ್ ಚಾಂಪಿಯನಶಿಪ್ ಟ್ರೋಫಿಯನ್ನು ಪ್ರದಾನ ಮಾಡಲಾಗುವುದು ಪ್ರೋ. ರಾಹುಲ ಬನ್ನೂರ, ಕಾರ್ತಿಕ ರಾಮದುರ್ಗ ಮತ್ತು ವಿದ್ಯಾರ್ಥಿ ನಾಯಕರಾದ ಸಂಭವ ಕೊಚೇರಿ ಮತ್ತು ಸಾಕ್ಷಿ ಹಟ್ಟಿ ಅವರಿಂದ ಸಂಯೋಜಿಸಲ್ಪಟ್ಟ ಈ ಉತ್ಸವವು ನಾವೀನ್ಯತೆ ನಿಮ್ಮಿಂದ ಪ್ರಾರಂಭವಾಗುತ್ತದೆ ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗಿದೆ ಎಂದು ಗೋರಬಾಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರೋ.ಪ್ರಕಾಶ. ಕಾರ್ತಿಕ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 