ರೈತರನ್ನು ಗೌರವಿಸಲು ರಾಷ್ಟ್ರೀಯ ರೈತ ದಿನಾಚರಣೆ: ಸುನೀಲ್ ಪರಿಮಲ್
ಇಂಡಿ 18: ರೈತ ಅನ್ನದಾತ, ಈ ದೇಶದ ಬೆನ್ನೆಲಬು. ರೈತ ಒಕ್ಕದಿದ್ದರೆಬಿಕ್ಕುವುದು ಜಗವೆಲ್ಲ. ಚೆನ್ನಾಗಿ ಮಳೆ ಬೆಳೆ ಬಂದು ರೈತ ನಕ್ಕರೆ ಜಗವೆಲ್ಲ ಸಕ್ಕರೆ ಎಂಬಂತೆ ರೈತ ಬೆಳೆದಾಗ ಮಾತ್ರ ಈ ದೇಶಕ್ಕೆ ಅನ್ನ. ಆದುದರಿಂದ ರೈತರನ್ನು ಗೌರವಿಸುವ ಸಲುವಾಗಿ ನಾವು ರಾಷ್ಟ್ರೀಯ ರೈತ ದಿನ ಹಾಗೂ ರೈತ ಕಾರ್ಯಾಗಾರ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಿಸಾನ್ ದಿವಸ್‌ನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ರೈತರು ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಇಂಡಿ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಸುನೀಲ್ ಪರಿಮಲ್ ಅವರು ಹೇಳಿದರು.
ತಾಲೂಕಿನ ಗೋರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿ ಶಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರೈತ ದಿನಾಚರಣೆ ಹಾಗೂ ರಾತ್ರಿ ಶಿಬಿರ ಕಾರ್ಯಾಗಾರವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಂತರ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಕೃಷಿ ಅಧಿಕಾರಿ ಪ್ರಕಾಶ್ ಗುಜ್ಜಲಕ್ ಅವರು ರೈತರು ವರ್ಷವೀಡೀ ಗಡಿಯಾರದಂತೆ ನಿಲ್ಲದೆ ಅಂದರೆ ವಿಶ್ರಮಿಸದೆ ದುಡಿಯುತ್ತಾನೆ.ಅಂದಾಗ ಜನರು ಹಸಿವಿನಿಂದ ಸಾಯುವುದಿಲ್ಲ ಆದರೆ ಜಗತ್ತಿಗೆ ಅನ್ನ ಹಾಕುವ ರೈತ ಮಾತ್ರ ಬದುಕಲು ಹೆಣಗಾಡುತ್ತಾರೆ. ರೈತರು ಸಮಾಜಕ್ಕೆ ನೀಡಿದ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದಕ್ಕಾಗಿ ಅವರಿಗೆ ಪುರಸ್ಕಾರ ನೀಡಲು ಪ್ರತಿ ವರ್ಷ ರೈತ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಫೀಲ್ಡ್ ಆಫೀಸರ್ ಆನಂದ ಮ್ಯಾಗೇರಿ, ಆನಂದ ಹೂಗಾರ, ಅಜಯ್ ಕುಮಾರ್ ಎರಮುತ್ತಿ, ರವಿ ಪಾಟೀಲ, ಅಪ್ಪಾಸಾಹೇಬ ಪಾಟೀಲ, ಹಾಗೂ ರೈತರಾದ ಗುರುಮಾತೆ ಚಂದ್ರಕಲಾ ದಯ್ಯಾನಂದಯ್ಯ ದೇವರು, ಬಸವರಾಜ ಹತ್ತಿ ರಾಜಕುಮಾರ ಹಚಡದ ಚಂದ್ರಶೇಖರ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.