ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ: ಮುಂಜಾಗ್ರತಾ ಕ್ರಮಗಳ ಜಾಗೃತಿ
National Deworming Day: Awareness of preventive measures
ಬೆಳಗಾವಿ 10: ಮಕ್ಕಳು ದೇಶದ ಆಸ್ತಿ ಅವರು ಆರೋಗ್ಯಯುತರಾಗಿ ಬೆಳೆದರೆ ಅವರು ದೇಶದ ಅತ್ಯುಪಯುಕ್ತ ಆಸ್ತಿಯಾಗುವದು ಅಕ್ಷರಸಹ ಸತ್ಯ ಎಂದು ಯುಎಸ್‌ಎಮ್ ಕೆಎಲ್‌ಇಯ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ್ ಅವರು ಅಭಿಪ್ರಾಯ ಪಟ್ಟರು. ಅವರು ಇಂದು ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು.
ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ಅನಾರೋಗ್ಯಕರ ವರ್ತನೆಗಳಾದ ಬಯಲು ಶೌಚ, ಬರಿಗಾಲಿನಿಂದ ನಡೆಯುವದು, ಶೌಚಕ್ಕೆ ಹೋಗಿಬಂದ ನಂತರ ಕೈತೊಳೆಯದೇ ಇರುವದು ಹೀಗೆ ಇನ್ನೂ ಅನೇಕ ಕಾರಣಗಳಿಂದ ನೆಲದಲ್ಲಿರುವ ಕಣ್ಣಿಗೆ ಕಾಣದಿರುವ ಕ್ರಿಮಿ ಕೀಟಗಳು ಶರೀರವನ್ನು ಸೇರುತ್ತವೆ. ಇದರಿಂದ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಾರೆ. ಅದರಂತೆ ಮಕ್ಕಳ ಲಾಲನೆ ಪಾಲನೆಯ ಜೊತೆಗೆ ಅವರ ಆರೋಗ್ಯಕರ ಅಭ್ಯಾಸಗಳ ಮಹತ್ವದ ಅರಿವು ಇರುವದು ಅತ್ಯಗತ್ಯವಾಗಿದೆ ಎಂದು ಹೆಳಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ್ ಕಂಬಾರ್ ಅವರು ಮಾತನಾಡುತ್ತ ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ಉಂಟಾಗುವ ಅನಾರೋಗ್ಯ, ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳ ಬಗ್ಗೆ ಪೋಷಕರಿಗೆ ಸವಿವರವಾಗಿ ಮಾಹಿತಿ ನೀಡಿದರು. ಅಲ್ಲದೆ, ವೈಯಕ್ತಿಕ ಸ್ವಚ್ಛತೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಕಡ್ಡಿ ಅವರು ಮಾತನಾಡಿ ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ಉಂಟಾಗುವ ಅನಾರೋಗ್ಯ, ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳ ಬಗ್ಗೆ ಪೋಷಕರಿಗೆ ಸವಿವರವಾಗಿ ಮಾಹಿತಿ ನೀಡಿದರು. ಅಲ್ಲದ, ವೈಯಕ್ತಿಕ ಸ್ವಚ್ಛತೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು. ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಹೆಸರಾಂತ ತಜ್ಞೆ ಡಾ. ಸೌಮ್ಯಾ ವೆರ್ನೇಕರ ಅವರು ಜಂತುಹುಳಗಳು ಹೇಗೆ ಹುಟ್ಟುತ್ತವೆ? ಅವುಗಳ ಇತಿಹಾಸ, ಅವು ಮಕ್ಕಳ ಶರೀರವನ್ನು ಹೇಗೆ ಸೇರುತ್ತವೆ? ಹೀಗೆ ಅನೇಕ ವಿಷಯಗಳ ಮೇಲೆ ಮಾಹಿತಿ ನೀಡಿದರು.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಎನ್ ಅವರು ಸೇರಿದಂತೆ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಹೆಸರಾಂತ ಮಕ್ಕಳ ತಜ್ಞ ಡಾ. ಯೋಗೇಶ್ ರಾವಳ ಅವರು ಉಪಸ್ಥಿತರಿದ್ದರು. ಜನಸಂಪರ್ಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿದರು. ಡಾ. ಸೌಮ್ಯಾ ವೆರ್ಣೇಕರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 40ಕ್ಕೂ ಅಧಿಕ ಮಕ್ಕಳಿಗೆ ಜಂತುಹುಳ ನಿವಾರಣಾ ಓಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಯುಎಸ್‌ಎಂ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಹಾಗೂ ರೋಗಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 