4ರಿಂದ ಜಿಐಟಿಯಲ್ಲಿ ರಾಷ್ಟ್ರೀಯ ವಿಚಾರ ಸಮ್ಮೇಳನ
ಬೆಳಗಾವಿ 30: ಕನರ್ಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ "ಎಂ.ಬಿ.ಎ" ವಿಭಾಗವು ಫೆಬ್ರುವರಿ 4 ಮತ್ತು 5 ರಂದು "ಪ್ರಾಸ್ಪೆಕ್ಟ್ಸ ಆಂಡ್ ಚಾಲೆಂಜಸ್ ಟು ದಿ ಇಶ್ಯೂಸ್ ಆಫ್ ಇನ್ಕ್ಲ್ಯೂಸಿವ್ ಗ್ರೋಥ್ ಇನ್ ಇಂಡಿಯಾ " ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಮ್ಮೇಳನ ಹಮ್ಮಿಕೊಂಡಿದೆ.
ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐ ಐ ಎಂ) ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀನಿವಾಸನ್ ಮತ್ತು ಮನ್ ದೇಶೀ ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷೆ ಚೇತನಾ ವಿಜಯ್ ಸಿನ್ಹಾ ಅವರು ಈ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಭಾರತದ ಆಂತರಿಕ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುವ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿ ಆಂತರಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಭಾರತವು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು ಈ ವಿಚಾರ ಸಮ್ಮೇಳನದ ಉದ್ದೇಶವಾಗಿದೆ. ಸಮ್ಮೇಳನ ಪ್ರಮುಖವಾಗಿ ಬಡತನ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ, ಆಥರ್ಿಕ ನೀತಿಗಳು ಮತ್ತು ಸುಧಾರಣೆಗಳು, ಬ್ಯಾಂಕಿಂಗ್ ಮತ್ತು ಹಣಕಾಸು, ಮೈಕ್ರೋ ಹಣಕಾಸು, ಆಂತರಿಕ ಬೆಳವಣಿಗೆಯಲ್ಲಿ ಡಿಜಿಟಲ್ ಭಾರತದ ಪಾತ್ರ, ಸಾಮಾಜಿಕ ಉದ್ಯಮಶೀಲತೆ, ಗ್ರಾಮೀಣ ಉದ್ಯಮಶೀಲತೆ, ಗ್ರೀನ್ ಉದ್ಯಮ, ಆಂತರಿಕ ಬೆಳವಣಿಗೆಯ ಮೇಲೆ ಬ್ಯಾಂಕಿಂಗ್ ಬಿಕ್ಕಟ್ಟಿನ ಪರಿಣಾಮ , ಆಂತರಿಕ ಬೆಳವಣಿಗೆಯಲ್ಲಿ ಏನ್ ಜಿ ಓ ಗಳ ಪಾತ್ರ, ಶಿಕ್ಷಣ ಮತ್ತು ಕೌಶಲ್ಯ ಭಾರತದ ಪಾತ್ರ ಹೀಗೆ ಪ್ರಸ್ತುತವಾಗಿ ಚಚರ್ೆಯಲ್ಲಿರುವ ವಾಣಿಜ್ಯ, ವ್ಯವಸ್ಥಾಪನಾ ವಲಯ ಮತ್ತು ಉದ್ಯಮ ಶೀಲತೆ ಬಗ್ಗೆ ಮುಖ್ಯ ವಿಷಯಗಳ ಬಗ್ಗೆ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಚಚರ್ೆ ನಡೆಯಲಿದೆ ಹಾಗೂ ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಆಗಮಿಸುತ್ತಿರುವ ಪ್ರತಿನಿಧಿಗಳು ಮೇಲೆ ತಿಳಿಸಿದ ಎಲ್ಲ ವಿಷಯಗಳ ಮೇಲೆ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 