ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ನಾಗೇಶ್ ನಾಯಕ ಆಯ್ಕೆ

Nagesh Nayak was selected for the Mandya Kannada Sahitya Sammelan poetry conference

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ನಾಗೇಶ್ ನಾಯಕ ಆಯ್ಕೆ 

ಸವದತ್ತಿ  15: ತಾಲೂಕಿನ ಶಿವಬಸವ ನಗರದ ಶಿಕ್ಷಕ, ಕವಿ, ವಿಮರ್ಶಕರಾದ ನಾಗೇಶ್ ಜೆ. ನಾಯಕ ಅವರು ಮಂಡ್ಯದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಬೆಳಗಾವಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಎರಡನೆ ದಿನ ಸಂಜೆ ಸಮಾನಾಂತರ ವೇದಿಕೆಯಲ್ಲಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲಿದ್ದಾರೆ. 

ನಾಗೇಶ್ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದು 26 ಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಈಗಾಗಲೇ ಮೈಸೂರು ದಸರಾ ಉತ್ಸವ, ಆಳ್ವಾಸ್ ನುಡಿಸಿರಿ, ರನ್ನ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಇಟಗಿ ಉತ್ಸವ, ಬೀದರನ ಜನಪರ ಉತ್ಸವ, ದೂರದರ್ಶನ ಚಂದನ ವಾಹಿನಿಗಳಲ್ಲಿ ಕಾವ್ಯ ವಾಚನ ಮಾಡಿದ್ದಾರೆ. ‘ಕಾಡುವ ಕವಿತೆ’ ಅಂಕಣದ ಮೂಲಕ ನಾಡಿನ ಕವಿಗಳ ಕವಿತೆಯ ಒಳನೋಟವನ್ನು ಕಟ್ಟಿಕೊಡುತ್ತಿದ್ದಾರೆ. ಸಹೃದಯ ಸಾಹಿತ್ಯ ಪ್ರತಿಷ್ಠಾನದ ಮೂಲಕ ಕಾವ್ಯ ಪ್ರಶಸ್ತಿಯನ್ನು ಕೊಡಮಾಡುತ್ತಿದ್ದಾರೆ. ಸಾಹಿತ್ಯ ಲೋಕದ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಇವರು ಮಂಡ್ಯದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.