ನಾಗರ ಪಂಚಮಿ ನಾಗ ದೇವತೆ ಆರಾಧಿಸುವ ಹಬ್ಬ: ಸಾವಳಗಿ

ನಾಗರ ಪಂಚಮಿ ನಾಗ ದೇವತೆ ಆರಾಧಿಸುವ ಹಬ್ಬ: ಸಾವಳಗಿ Nagara Panchami is a festival where the Naga deity is worshipped: Savalagi

ನಾಗರ ಪಂಚಮಿ ನಾಗ ದೇವತೆ ಆರಾಧಿಸುವ ಹಬ್ಬ: ಸಾವಳಗಿ 

ವಿಜಯಪುರ 29: ವಿಶಿಷ್ಟ ಹಬ್ಬಗಳ ನಾಡು ನಮ್ಮದು. ನಮ್ಮ ಸಂಸ್ಕೃತಿ, ಐತಿಹ್ಯ ಮತ್ತು ಭವ್ಯ ಪರಂಪರೆಯನ್ನು ಹಬ್ಬಗಳ ಆಚರಣೆ ಮೂಲಕ ಪ್ರತಿಬಿಂಬಿಸುತ್ತದೆ. ಅದರಲ್ಲಿ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇಯ ದಿನದಂದು ಈ ನಾಗರ ಪಂಚಮಿ ಹಬ್ಬವನ್ನು ಮಹಿಳೆಯರು ನಾಗ ದೇವರ ವಿಗ್ರಹಗಳಿಗೆ ಹಾಲು, ಹಣ್ಣು ಮತ್ತು ನೈವೇದ್ಯವನ್ನು ಅರ​‍್ಿಸಿ ಭಕ್ತಿ-ಭಾವದಿಂದ ಪೂಜಿಸುತ್ತಾರೆ ಎಂದು ಕಸ್ತೂರಿ ಸಾವಳಗಿ ಅವರು ಅಭಿಪ್ರಾಯಪಟ್ಟರು. 

ಅವರು ನಗರದ ಅಥಣಿ ರಸ್ತೆಯಲ್ಲಿರುವ ಎನ್‌.ಜಿ.ಓ ಕಾಲನಿಯಲ್ಲಿರುವ ಜೈ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ನಾಗದೇವತೆಗೆ ಹಾಲು ಎರೆದು ಪೂಜೆ ಸಲ್ಲಿಸಿ ಆಚರಿಸಿದ ನಾಗರ ಪಂಚಮಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಅವರು ಮಾತನಾಡುತ್ತಾ, ಹಿಂದೂಗಳು ಹಬ್ಬದ ಆಚರಣೆಯ ಮೂಲಕ ಪ್ರಕೃತಿಯ ಆರಾಧಕರಾಗಿ, ಪ್ರಕೃತಿಯ ಜೀವಿಯಾದ ಹಾವು (ನಾಗರ ಹಾವು) ರಕ್ಷಣೆ ಮತ್ತು ಗೌರವಿಸುವ ಸಂಕೇತದೊಂದಿಗೆ ನಾಗ ದೇವತೆಯನ್ನು ಆರಾಧಿಸಲಾಗುತ್ತದೆ. ಜೀವನದಲ್ಲಿ ಸರ​‍್ ದೋಷ ಮುಕ್ತಿಹೊಂದಲು ಮತ್ತು ಆರೋಗ್ಯ ಭಾಗ್ಯ, ಸಮೃದ್ಧಿ, ಸುಖ-ಶಾಂತಿ ಮತ್ತು ನೆಮ್ಮದಿಗಾಗಿ ಪ್ರಾರ್ಥಿಸುತ್ತಾರೆ ಎಂದರು. ಈ ದಿನದಂದು ವೈವಿಧ್ಯಮವಾದ ಸಿಹಿ ತಿಂಡಿ ಮಾಡಿ ಜನರು ಪರಸ್ಪರ ಹಂಚಿಕೊಂಡು ಖುಷಿಪಡುತ್ತಾರೆ ಎಂದರು.  

ಪ್ರೊ. ಆರ್‌.ಎಸ್‌.ಕಪಾಳಿ, ಶ್ರೀದೇವಿ ಖೊದ್ನಾಪೂರ, ಶೀಲಾ ದೇವನಾಯಕ, ತನು ಬಳೂಲಗಿಡದ, ಪ್ರೇಮಾ ಕನ್ನೂರ, ಉಮಾ ತೊಡಕೆ ಇನ್ನಿತರರು ಉಪಸ್ಥಿತರಿದ್ದರು. 

ನಾಗರ ದೇವತೆ ಪೂಜಾ ಕಾರ್ಯಕ್ರಮದಲ್ಲಿ ನವರಸಪುರದ ಬಡಾವಣೆಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.