ನಾಡ ಹಬ್ಬ ನಮ್ಮ ಹುಟ್ಟೂರು ಪ್ರೀತಿಯ ಪ್ರತಿಜ್ಞೆ: ಡಾ.ಸಿ ಕೆ ನಾವಲಗಿ
Naada festival is a pledge of love for our hometown: Dr. C. K. Navalagi
ಮೂಡಲಗಿ 27: ನಾಡ ಹಬ್ಬ ಕೇವಲ ಹಬ್ಬವಲ್ಲ, ಇದು ನಮ್ಮ ಹುಟ್ಟೂರು ಪ್ರೀತಿಯ ಪ್ರತಿಜ್ಞೆ, ನಮ್ಮ ಭಾಷೆ ಸಂಸ್ಕೃತಿಗಳ ಗೌರವ, ನಮ್ಮ ಐಕ್ಯತೆಯ ಸಂಭ್ರಮ ಎಂದು ಗೋಕಾಕದ ಜಾನಪದ ವಿದ್ವಾಂಸ ಡಾ.ಸಿ ಕೆ ನಾವಲಗಿ ಹೇಳಿದರು.
ಪಟ್ಟಣದದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮೂಡಲಗಿ ತಾಲೂಕಾ ಘಟಕ ಹಾಗೂ ಶ್ರೀಪಾದಭೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಂಡಿದ "ನಾಡ ಹಬ್ಬ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕವೆಂಬ ಈ ಪವಿತ್ರ ಭೂಮಿ ಶಿಲ್ಪ-ಶಿಲ್ಪಿಗಳ, ಸಾಹಿತ್ಯ- ಕಲೆಗಳ, ವೀರರ- ಮಹಾಪುರುಷರ ನೆಲೆ. ಹಳಗನ್ನಡದಿಂದ ನವ ಕನ್ನಡದವರಿಗೆ ಸಾಗಿದ ಕನ್ನಡ ಭಾಷೆಯ ಐತಿಹಾಸಿಕ ಬೆಳವಣಿಗೆ, ಕದಂಬರಿಂದ ಹೊಯ್ಸಳರ ತನಕ ಹರಿದ ಸಾಂಸ್ಕೃತಿಕ ಕೀರ್ತಿ, ಕುವೆಂಪು - ದ ರಾ ಬೇಂದ್ರೆ ಮುಂತಾದ ಸಾಹಿತ್ಯ ಸಾಮ್ರಾಟ ಪರಂಪರೆ ಎಲ್ಲವೂ ಕರ್ನಾಟಕವನ್ನು ಸಮೃದ್ಧಿಗೊಳಿಸಿದೆ ಎಂದರು.
ಮುಖ್ಯ ಅತಿಥಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಬಿ ಸಿ ಹೆಬ್ಬಾಳ ಮಾತನಾಡಿ, ರಾಜ್ಯೋತ್ಸವ ಕೇವಲ ನಕ್ಷೆಯ ಏಕೀಕರಣವಲ್ಲ, ಮುಖ್ಯವಾಗಿ ಕನ್ನಡಿಗರ ಐಕ್ಯತೆ. ನಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಬದುಕಿಸುವ ಸಂಕಲ್ಪ ಎಂದರು.
ಕಾಲೇಜಿನ ಪ್ರಾಚಾರ್ಯ ಮಹೇಶ ಕಂಬಾರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಜಯ ಅ ಶಿಂದಿಹಟ್ಟಿ, ಕಾರ್ಯದರ್ಶಿ ಎ ಎಚ್ ಒಂಟಗೋಡಿ ಉಪಸ್ಥಿತರಿದ್ದರು.
ಬಿ ಆರ್ ತರಕಾರ ಪ್ರಾಸ್ತಾವಿಕ ನುಡಿಗಳನ್ನು, ಗೀತಾ ಹಿರೇಮಠ ಸ್ವಾಗತಿಸಿದರು, ಶಿವಕುಮಾರ ಕೋಡಿಹಾಳ ನಿರೂಪಿಸಿದರು, ಶಿವಾನಂದ ಚಂಡಕೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 