ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತವಾಗಿ ಕಲಿಯಲು ಎನ್‌.ಇ.ಪಿ ಸಹಾಯಕ: ಪ್ರೊ ಸತ್ಯನಾರಾಯಣ

ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತವಾಗಿ ಕಲಿಯಲು ಎನ್‌.ಇ.ಪಿ ಸಹಾಯಕ: ಪ್ರೊ ಸತ್ಯನಾರಾಯಣ NEP helps students learn in a skill-based manner: Prof. Satyanarayana

ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತವಾಗಿ ಕಲಿಯಲು ಎನ್‌.ಇ.ಪಿ ಸಹಾಯಕ: ಪ್ರೊ ಸತ್ಯನಾರಾಯಣ 

ಹುಬ್ಬಳ್ಳಿ, 14 :  ಶಿಕ್ಷಣ ಹೇಗೆ ವಿದ್ಯಾರ್ಥಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ! ಹೇಗೆ ಶಿಕ್ಷಕ ತರಬೇತಿ ಹೊಂದಬೇಕು! ಮತ್ತು ವಿದ್ಯಾರ್ಥಿಗಳು ಹೇಗೆ ಕೌಶಲ್ಯಾಧಾರಿತವಾಗಿ ಕಲಿಯಬೇಕು! ಎಂಬುದಕ್ಕೆ ಎನ್‌.ಇ.ಪಿ ಸಹಾಯಕವಾಗಿದೆ ಎಂದು ಕರ್ನಾಟಕ ಸೆಂಟ್ರಲ್ ವಿಶ್ವವಿದ್ಯಾಲಯ ಕಲಬುರ್ಗಿಯ ಕುಲಪತಿಗಳಾದ ಪ್ರೊ ಬಟ್ಟು ಸತ್ಯನಾರಾಯಣ ಉದ್ಘಾಟಕರ ನುಡಿ ನುಡಿದರು.  

     ನಗರದ ಬಿವಿಬಿ ಬೈಯೋಟೆಕ್ ಹಾಲ್ ನಲ್ಲಿ ರವಿವಾರ ಕೆಆರ್‌ಎಂಎಸ್‌ಎಸ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರೇರಣಾ ದಿವಸ 2025, ಮತ್ತು ಎನ್‌.ಇ.ಪಿ 2020 ರ 5 ವರ್ಷದ ಪಯಣ ಕುರಿತಾಗಿ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು. 

       ಎನ್‌.ಇ.ಪಿ-2020 ದೇಶದ ರಾಷ್ಟ್ರದ ಅಭಿವೃದ್ಧಿಗಾಗಿ ಸಿದ್ಧಪಡಿಸಲಾಗಿದೆ, ಎಲ್‌.ಕೆ.ಜಿ ಇಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳವರೆಗೆ ವಿದ್ಯಾರ್ಥಿಗಳನ್ನು ಗುಣಮಟ್ಟದ ವಿದ್ಯಾರ್ಥಿಗಳನ್ನಾಗಿ ತಯಾರಿ ಮಾಡುವ ಉದ್ದೇಶವನ್ನು ಎನ್‌.ಇ.ಪಿ ಒಳಗೊಂಡಿದೆ ಎಂದು ಹೇಳಿದರು.  

      ಎನ್‌.ಇ.ಪಿ 2020 ಹೆಚ್ಚು ಪ್ರಾಶಸ್ತ್ಯವನ್ನು ಪಡೆಯಬೇಕಾದರೆ ವಿಶ್ವವಿದ್ಯಾಲಯದಿಂದ ಹಿಡಿದು ಅಟೊನೊಮಸ್ ಖಾಸಗಿ ವಿದ್ಯಾಲಯಗಳ ಪಾತ್ರ ಹೆಚ್ಚಿನ ಪಾತ್ರ ಬೇಕಾಗಿದೆ ಎಂದರು. 

    ಎನ್‌.ಇ.ಪಿ 2020 ಶಿಕ್ಷಕರಿಗೆ ಮದನ್‌ಮೋಹನ ಮಾಳವೀಯ ಮಷಿನ ಅಡಿಯಲ್ಲಿ ತರಬೇತಿ ಆಗುತ್ತಿದೆ.   ವಿದ್ಯಾರ್ಥಿಗಳಿಗೆ ಬರೀ ಪದವಿ ಅಷ್ಟೇ ಎಲ್ಲದಕ್ಕೂ ಮುಖ್ಯ ಅಲ್ಲ, ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು.  

    ಎನ್‌.ಇ.ಪಿ ಮೂಲಕ ನಾಲ್ಕು ವರ್ಷದ ಪದವಿ, ಮತ್ತು ಪಿಎಚ್ಡಿ ಪ್ರಾಧ್ಯಾಪಕರಾಗಿ ಸೇವೆ ಮಾಡಲು ಸರಳ ಮಾರ್ಗವಾಗಿದೆ ಎಂದು ಹೇಳಿದರು.  

      ನಿರುದ್ಯೋಗವನ್ನು ಹೋಗಲಾಡಿಸುವುದು ಸರ್ಕಾರದ ಜವಾಬ್ದಾರಿಯಲ್ಲ ಅದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಎಂದು ಹೇಳಿದರು. ಎನ್‌.ಇ.ಪಿ 2020 ಅಳವಡಿಸಿಕೊಳ್ಳಲಾಗಲಿಲ್ಲ ಅಂದರೆ ಅದು ಯಾರ ಸಮಸ್ಯೆ, ಈಡೀ ದೇಶವೇ ಒಂದುಕಡೆ ಸಾಗಿದರೆ ಕರ್ನಾಟಕ ರಾಜ್ಯ ಒಂದುಕಡೆ ಸಾಗುತ್ತಿದೆ ಎಂದು ಹೇಳಿದರು. 

      ಉಪನ್ಯಾಸಕರು ವಿಕಸಿತ ಭಾರತವಾಗುವಲ್ಲಿ ಅವರ ಪಾತ್ರ ಏನು ಎಂಬುದನ್ನು ಅರಿತು ಸಾಗಬೇಕಾಗಿದೆ ಮತ್ತು ತರಬೇತಿ ಕೂಡ ಅವಶ್ಯಕವಾಗಿ ಆಗಬೇಕಿದೆ ಎಂದು ಹೇಳಿದರು.  

     ಕಾರ್ಯಕ್ರಮದಲ್ಲಿ ನ್ಯಾಕ್‌ನ ನಿರ್ದೇಶಕರಾದ ಪ್ರೊ ಗಣೇಶನ್ ಕನ್ನಬೀರನ್ ಮುಖ್ಯ ಅಥಿತಿಗಳಾಗಿ ಮಾತನಾಡುತ್ತ, ಭಾರತದ ಪ್ರಗತಿಪರ ಗುರಿ 2047 ಕ್ಕಿಂತ ಬಹಳ ಮೊದಲೇ ಸಾಧಿಸಲಿದ್ದೇವೆ, ಆಗ ಭಾರತದ ಗುರಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದು ಎಂದು ಹೇಳಿದರು.        ಶಿಕ್ಷಕರು ಇಂದಿನ ವಿದ್ಯಾರ್ಥಿಗಳನ್ನು ಉತ್ತಮ ವಿದ್ಯಾರ್ಥಿಯಾಗಿ ನಿಭಾಯಿಸುವುದು ತುಂಬಾ ಕಷ್ಟ  ಮತ್ತು ಶಿಕ್ಷಕರು ಬಹಳಷ್ಟು ಹೊಸ ಹೊಸ ತಂತ್ರಗಳನ್ನು ಕಲಿತು ಅವರಿಗೆ ಕಲಿಸಬೇಕು ಎಂದು ಹೇಳಿದರು.   

      ಉತ್ತಮ ಮನ್ನಣೆ ಬಹುಮಾನಗಳನ್ನು ಪಡೆಯಲು. ವೃತ್ತಿ ಬೆಳವಣಿಗೆಯಲ್ಲಿ ಚೆನ್ನಾಗಿ ಸೇವೆ ಮಾಡಿದರೆ, ನಿಸ್ಸಂಶಯವಾಗಿ ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. 

     ವಿವಿಧ ಕೆಲವು ಸಂಸ್ಥೆಯಿಂದ ಗುರುತಿಸಲ್ಪಡುವ ಉಪನ್ಯಾಸಕರು ನೀವಾಗಬೇಕು ಆದ್ದರಿಂದ ವೃತ್ತಿ ಬೆಳವಣಿಗೆ ಎಲ್ಲರಿಗೂ ಅವಶ್ಯಕ ಮತ್ತು ನೀವು ಯಾವಾಗಲೂ ಅವಕಾಶಗಳನ್ನು ಹುಡುಕಬೇಕು ಹೊರತು ಅವಕಾಶ ನಿಮ್ಮ ಬಳಿ ಬರುವುದಿಲ್ಲ ಎಂದು ಹೇಳಿದರು.  

     ಕಾರ್ಯಕ್ರಮದಲ್ಲಿ  ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸುರೇಶ್ ಜಂಗಮಶೆಟ್ಟರ್ ಮಾತನಾಡಿದರು. 

     ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಮಹೇಶ್ ಟೆಂಗಿನಕಾಯಿ, ಪ್ರೊ. ಶ್ರೀಮತಿ ಕರಿಮುನ್ನಿಸಾ ಸೈಯದ, ಕೆ.ಆರ್‌.ಎಂ.ಎಸ್‌.ಎಸ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ರಘು ಅಕಮಂಚಿ, ಕೆ.ಆರ್‌.ಎಂ.ಎಸ್‌.ಎಸ್ ನ ಮಹಿಳಾ ಪ್ರಮುಖರಾದ ಡಾ. ಸಂಗೀತ ಕಟ್ಟಿಮನಿ, ಕೋಷ್ಯಾಧ್ಯಕ್ಷರಾದ ಡಾ. ಲಿಂಗರಾಜ ಹೊರಕೇರಿ, ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ರವೀಂದ್ರನಾಥ ದಂಡಿನ, ಕವಿವಿ ಮಾಜಿ ಕುಲಪತಿಗಳಾದ ಪ್ರಮೋದ ಗಾಯಿ, ಡಾ. ಅಶೋಕ್ ಶೆಟ್ಟರ್, ಡಾ.ಬಿ ಎಪ್ ದಂಡಿನ, ಹೆಚ್‌.ಎನ್ .ನಂದಕುಮಾರ್, ಡಾ. ವಿಶ್ವನಾಥ್ ಕೋರಾಡಿ, ಸಂದೀಪ್ ಬೂದಿಹಾಳ,  ಸೇರಿದಂತೆ ಅಧ್ಯಾಪಕ ಭೂಷಣ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ನೂರಾರು ಉಪನ್ಯಾಸಕರು ಉಪಸ್ತಿತರಿದ್ದರು. 

     ಕಾರ್ಯಕ್ರಮದಲ್ಲಿ ಶೋಭಾ ಉಜ್ಜನಶೆಟ್ಟರ ಪ್ರಾರ್ಥಿಸಿದರು, ಕೆ.ಆರ್‌.ಎಂ.ಎಸ್‌.ಎಸ್ ನ ಹಾಲಿ ಅಧ್ಯಕ್ಷರಾದ ಡಾ. ಜಿ. ಕೆ ಬಡಿಗೇರ್ ಪ್ರಾಸ್ತಾವಿಕ ನುಡಿ ನುಡಿದರು,  ಪ್ರಸನ್ನ ಫಂಡ್ರಿ ಸ್ವಾಗತಿಸಿದರು,  ಡಾ. ಸಿ.ವಿ ಮರಿದೇವರಮಠ್ ಮತ್ತು ಪ್ರೊ ಶ್ರೀನಿವಾಸ್ ಕೊಪ್ಪಳ ನಿರೂಪಿಸಿದರು. ಡಾ. ಸಂಗೀತ ಕಟ್ಟಿಮನಿ ವಂದಿಸಿದರು. 

ಬಾಕ್ಸ್‌ ಐಟಂ 

   ಕೆ.ಆರ್ ಎಂ.ಎಸ್‌.ಎಸ್ ನಿಂದ ಕೊಡಮಾಡಲ್ಪಡುವ ಅಧ್ಯಾಪಕ ಭೂಷಣ ಪ್ರಶಸ್ತಿ 2025 ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜೀವನ್ಮಾನ ಸಾಧನೆಗಾಗಿ ಡಾ. ಬಿ ಎಪ್ ದಂಡಿನ,  ಡಾ. ಅಶೋಕ್ ಶೆಟ್ಟರ್ ಅವರಿಗೆ ನೀಡಲಾಯಿತು,  

   ಉತ್ತಮ ಅಡ್ಮಿನಿಸ್ಟ್ರೇಟರ್ ಡಾ.  ಎಂ ಬಿ ಬಾಗಡಿ ಅವರಿಗೆ, ಮತ್ತು ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಡಾ. ಶಾರದಾ ಭಟ್ ಮತ್ತು ಶ್ರೀಮಣಿ ವನಮಾಲ ಖಾನಗೌಡ್ರ ಗೆ ನೀಡಲಾಯಿತು, ಉತ್ತಮ ಸಂಶೋಧಕರಲ್ಲಿ ಡಾ. ರಾಜೇಶ್ ಕಲ್ಕಂಬರ್, ಕ್ರೀಡೆಗೆ ಪ್ರೊ ಜಿ ಡಿ ಭಟ್, ಉತ್ತಮ ಗ್ರಂಥಪಾಲಕರು ಕಾಗಿನೆಲ್ಲಿ ಪಂಪಾಪತಿ, ದೈಹಿಕ ನಿರ್ದೇಶಕರು ಮನೋಜ್ ಕೂಪಾರ್ಡೆ ಅವರಿಗೆ ನೀಡಲಾಯಿತು. 

 ಬಾಕ್ಸ್‌ ಐಟಂ 

ಡಾ. ಅಶೋಕ ಶೆಟ್ಟರ್  

   ಗೌರವ ಪೂರ್ವಕವಾಗಿ ಪ್ರಶಸ್ತಿ ಸ್ವೀಕರಿಸಿದ ಈ ನನ್ನ ಪ್ರಶಸ್ತಿ ಬಣ್ಣದಲ್ಲ ಈ ಪ್ರಶಸ್ತಿ ನನ್ನ ವೃತ್ತಿ ಬಾಂದವರು, ನನ್ನ ಗುರುಗಳು, ಎಲ್ಲಾ ಉಪನ್ಯಾಸಕರು ಮತ್ತು ಕುಟುಂಬ ವರ್ಗಕ್ಕೆ ಸೇರಿದೆ ಎಂದು ಹೇಳಿದರು. ವಿದ್ಯಾರ್ಥಿ ದೆಸೆಯಿಂದ ಬೆಳೆದು ಬಂದ ಹಾದಿಯನ್ನು ಮೆಲಕು ಹಾಕಿದರು, ಪೀ.ಡಬ್ಲ್ಯೂ.ಡಿ ಆಫೀಸರ್ ಒಬ್ಬ ಯಶಸ್ವಿ ಕುಲಪತಿಯಾದ ಕಥೆಯನ್ನು ಹೇಳಿದರು. ನಾವು ಶಿಕ್ಷಕರಾದವರಿಗೆ ಈ ಸಮಾಜ ದೇಶದ ಮೇಲೆ ಬಹಳ ಜವಾಬ್ದಾರಿಯಿದೆ ಎಂದು ಹೇಳಿದರು.  


ಶ್ರೀ ನಂದಕುಮಾರ್ ಹೆಚ್ ಎನ್ 

    2ನೇಯ ಅವಧಿಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿ, ನಮ್ಮಲ್ಲಿ ಮಾನವೀಯತೆ ಇರುವವರೆಗೂ ಗುರು ಶಿಷ್ಯರ ಸಂಬಂಧ ಉತ್ತಮವಾಗಿರುತ್ತದೆ. ಗುರುಗಳನ್ನು ವಿದ್ಯಾರ್ಥಿಗಳು ರೂಲ್ ಮಾಡಲ್ ಮಾಡಿಕೊಳ್ಳುವಂತೆ ನಾವು ಉಪನ್ಯಾಸಕರು ನಮ್ಮಲ್ಲಿ ನಡಾವಳಿಗಳನ್ನು ಬದಲಿಸಿಕೊಳ್ಳಬೇಕು ಅಂದಾಗ ಮಾತ್ರ ಆ ಎಳೆಯ ಮನಸ್ಸುಗಳಿಗೆ ರೂಲ್ ಮಾಡಲ್ ಆಗಲು ಸಾಧ್ಯ ಎಂದು ಹೇಳಿದರು. 


ಶ್ರೀ ಮಹೇಶ್ ಟೆಂಗಿನಕಾಯಿ, ಶಾಸಕರು 

     2ನೇಯ ಅವಧಿಯಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡುತ್ತ, ಕರ್ನಾಟಕದಲ್ಲಿ ಕೆ.ಆರ್‌.ಎಂ.ಎಸ್‌.ಎಸ್ ಒಂದು ಹೊಸ ಹೆಜ್ಜೆ ಇಟ್ಟು, ಶಿಕ್ಷಕರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಇಂದು ನಮ್ಮ ಮಕ್ಕಳಿಗೆ ಆದರ್ಶವಾಗಿ ಕೊನೆಯವರೆಗೂ ಉಳಿಯುವುದು ಶಿಕ್ಷಕರ ಕೊಡುಗೆ ಮಾತ್ರ ಎಂದು ಹೇಳಿದರು.