ಎನ್ಸಿಸಿ ಕೆಡೆಟ್ಗಳಿಂದ ವಂದೇ ಮಾತರಂ ಗೀತೆಯ ಸಂಭ್ರಮಾಚರಣೆ

ಎನ್ಸಿಸಿ ಕೆಡೆಟ್ಗಳಿಂದ ವಂದೇ ಮಾತರಂ  ಗೀತೆಯ ಸಂಭ್ರಮಾಚರಣೆ  NCC cadets celebrate Vande Mataram


ಬೆಳಗಾವಿ 07: ಬಂಕಿಂಚಂದ್ರ ಚಟರ್ಜಿಯವರು ರಚಿಸಿ ವಂದೇ ಮಾತರಂ ಗೀತೆ ದೇಶದ   ಹೋರಾಟದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿತು. ಜನತೆಯಲ್ಲಿ ದೇಶಾಭಿಮಾನವನ್ನು ಮೂಡಿಸಿತು. ಕವಿ ರವೀಂದ್ರನಾಥರು ಹಾಗೂ ಚಟರ್ಜಿಯವರು ರಚಿಸಿರುವ ಎರಡು   ಗೀತೆಗಳನ್ನು ನಾವು ಗೌರವಿಸಬೇಕು. 150 ವರ್ಷ ತುಂಬಿದ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯನ್ನು ದೇಶದ ತುಂಬೆಲ್ಲ ಮೊಳಗಿಸುತ್ತಿರುವುದು ಅಭಿಮಾನದ ಸಂಗತಿ ಎಂದು 25 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಕಮಾಂಡರ್ ಕರ್ನಲ್ ಸುಧಾಂಶು ದೀಕ್ಷಿತ್ ಹೇಳಿದರು. 

ಅವರು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಮೈದಾನದಲ್ಲಿ ಏರಿ​‍್ಡಸಿದ್ದ ವಂದೇ ಮಾತರಂ ಗೀತೆಯ 150ನೇ ಸಂಭ್ರಮಾಚರಣೆಯ ನಿಮಿತ್ತ ಲಿಂಗರಾಜ ಕಾಲೇಜು ಹಾಗೂ ಆರ್‌ಎಲ್ ವಿಜ್ಞಾನ ಕಾಲೇಜಿನ ಎಲ್ಲ ಆರ್ಮಿ ಹಾಗೂ ಏರ್‌ಪೋರ್ಸ್‌ ಕೆಡೆಟ್‌ಗಳನ್ನು ಉದ್ದೇಶಿಸಿ ಮಾತನಾಡಿದರು.ಆರ್‌ಎಲ್‌ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬ್ರಿಟಿಷ್ ಆಡಳಿತ ವ್ಯವಸ್ಥೆಯ ವಿರುದ್ಧ ಜನತೆಯಲ್ಲಿ ಸಂಘಟನೆಯನ್ನು ಬಲವರ್ಧನಗೊಳಿಸುವಲ್ಲಿ ವಂದೇ ಮಾತರಂ ಅಗ್ರವಾದ ಪಾತ್ರವಹಿಸಿತು. ಕವಿ ರವೀಂದ್ರ, ಗಾಂಧೀಜಿ ಮೊದಲ್ಗೊಂಡು ಎಲ್ಲರೂ ರಾಷ್ಟೊದ ಗೀತೆಯಾಗಿ ಸ್ವೀಕರಿಸಿ  ಆಂದೋಲನದಲ್ಲಿ ಈ ಗೀತೆಗೆ ಅಗ್ರಸ್ಥಾನವನ್ನು ನೀಡಿದರು. ಕವಿ ಚಟರ್ಜಿಯವರು ಭಾರತದ ಸಾಂಸ್ಕೃತಿಕ ಪರಂಪರೆ ಇತಿಹಾಸವನ್ನು ಅತ್ಯಂತ ಮಧುರವಾಗಿ ಈ ಗೀತೆಯಲ್ಲಿ ದಾಖಲಿಸಿದ್ದಾರೆ.  

ಇಲ್ಲಿಯ ಕಾವ್ಯಧ್ವನಿಯು ಅದ್ಭುತ ಹಾಗೂ ವಿಸ್ಮಯವಾದುದು. ಈ ಗೀತೆ ಅಮರಗೀತೆ, ದೇಶಗೀತೆ ನಾವೆಲ್ಲರೂ ಸದಾ ಗೌರವಿಸೋಣವೆಂದು ಹೇಳಿದರು.ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಲಿಂಗಗೌಡಾ ದೇಸಾಯಿ, ಸದಸ್ಯ ವಿಜಯ ಪಾಟೀಲ, ಕೆಎಲ್‌ಇ ಆಜೀವ ಸದಸ್ಯ ಡಾ.ಸತೀಶ ಪಾಟೀಲ, ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ.ಎಚ್‌.ಎಸ್‌.ಮೇಲಿನಮನಿ, ಎನ್‌ಸಿಸಿ ಅಧಿಕಾರಿಗಳಾದ ಮೇಜರ್ ಡಾ.ಮಹೇಶ ಗುರನಗೌಡರ, ಕ್ಯಾಫ್ಟನ್ ಡಾ.ಎಚ್‌.ಎನ್‌.ಚುಳಕಿ, ಕ್ಯಾಫ್ಟನ್ ಡಾ.ಶಿವಾನಂದ ಬುಲಬುಲೆ, ಎಚ್‌.ಎನ್‌.ಬನ್ನೂರ, ಶಶಿಕಾಂತ ಕೊಣ್ಣೂರ ಉಪಸ್ಥಿತರಿದ್ದರು. ಮಲೈಕಾ ಗೌಡಾ ನಿರೂಪಿಸಿ ವಂದಿಸಿದರು. ಅಸಂಖ್ಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.