ಪುರಾಣ ಕಾರ್ಯಕ್ರಮ: ಅಸೂಯೆಯಿಂದ ಬದುಕು ಹಸನಾಗದುಹಿಡಾ.ಮಹದೇವ ಸ್ವಾಮೀಜಿ
Mythological program: Life is not pleasant due to jealousy. Mahadeva Swamiji
ಪುರಾಣ ಕಾರ್ಯಕ್ರಮ: ಅಸೂಯೆಯಿಂದ ಬದುಕು ಹಸನಾಗದುಹಿಡಾ.ಮಹದೇವ ಸ್ವಾಮೀಜಿ
ಕೊಪ್ಪಳ 13: ಅಕ್ಕಪಕ್ಕದವರಬೆಳವಣಿಗೆಯನ್ನುನೋಡಿ, ಅಸೂಯೆಪಟ್ಟುಕೊಳ್ಳುವುದರಿಂದಬದುಕುಹಸನಾಗದು, ಅದರಿಂದಅವಸಾನವಾಗುತ್ತದೆಎಂದುಕುಕನೂರುಅನ್ನದಾನೀಶ್ವರ ಶಾಖಮಠದಡಾ. ಮಹದೇವ ಮಹಾಸ್ವಾಮಿಗಳು ಹೇಳಿದ್ದಾರೆ.ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದಲ್ಲಿ ಶಂಕರಲಿಂಗಜ್ಜನ 41 ನೇ ಪುಣ್ಯತಿಥಿಯ ನಿಮಿತ್ಯ ಹಮ್ಮಿಕೊಂಡಿದ್ದ ಪುರಾಣಮಹಾಮಂಗಲ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಅವರಿವುರ ಸಾಧನೆಯನ್ನು ನೋಡಿ, ನಾವು ಅವರ ಸಾಧನೆಯ ಹಾದಿ ತುಳಿಯಬೇಕು.ಆದರೆ, ನಾವೆಲ್ಲಾಕೊರಗುತ್ತಾ ಕುಳಿತುಕೊಳ್ಳುತ್ತೇವೆ. ಇದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ.ಅವರವರ ಬದುಕುಅವರಿಗೆ, ನಮ್ಮ ಬದುಕು ನಾವು ಎಂದು ನೆಮ್ಮದಿಯಜೀವನ ನಡೆಸಬೇಕುಎಂದರು.ದೇವರು ನಮಗೆ ಏನು ಕರುಣಿಸಿದ್ದಾನೆ, ಅದನ್ನು ಆನಂದಿಸಬೇಕು.ಅನುಭವಿಸಬೇಕು.ಅದು ಬಿಟ್ಟು ಬೇರೆಯವರ ಬದುಕನ್ನು ನೋಡುತ್ತಾ ಕುಳಿತರೇ ಅದರಿಂದ ಏನು ಪ್ರಯೋಜನವಾಗವುದಿಲ್ಲ ಎಂದರು. ಪ್ರತಿಯೊಬ್ಬರಿಗೂದೇವರು ಸಮಯವನ್ನು ಅಷ್ಟೇ ನೀಡಿದ್ದಾರೆ. ಹೀಗಾಗಿ, ಸಮಯಅಮೂಲ್ಯವಾಗಿದ್ದು, ಅದನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಮೈನಳ್ಳಿ-ಬಿಕನಳ್ಳಿ ಗ್ರಾಮದಉಜ್ಜಯನಿ ಶಾಖಾಮಠದ ಶ್ರೀ ಸಿದ್ದೇಶ್ವರ ಶಿವಚಾರ್ಯ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿ, ಶರಣರ ತತ್ವಗಳನ್ನು ಅರಿತು ನಡೆಯಬೇಕು.ಬದುಕಿನಲ್ಲಿ ಹಿರಿಯರು, ಗುರುಗಳು ಕಲಿಸಿದ ಪಾಠವನ್ನು ಅಳವಡಿಸಿಕೊಂಡು ಮುನ್ನಡೆದರೇ ಬದುಕು ಬಂಗಾರವಾಗುತ್ತದೆಎಂದರು.ಶರಣರತತ್ವಅರಿಯಲುಇಂಥ ಪುರಾಣದಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗಿವೆ.ಅದರಲ್ಲೂ ಡೊಂಬರಳ್ಳಿ ಗ್ರಾಮದಲ್ಲಿಜಾಗೃತ ಮನಸ್ಸುಗಳು ಇರುವುದರಿಂದ ಸಾಕಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಾಗಿದೆಎಂದರು.ಡೊಂಬರಳ್ಳಿ ಗ್ರಾಮದಲ್ಲಿ ಬಂದು ನೆಲಸಿದದ್ದ ಶಂಕರಲಿಂಗಜ್ಜನಅವರ 41 ನೇ ಪುಣ್ಯಸ್ಮರಣೆಕಾರ್ಯಕ್ರಮ ನಿಜಕ್ಕೂಅರ್ಥಪೂರ್ಣಎಂದರು. ಮೆರವಣಿಗೆಹಿಪುರಾಣಮಹಾಮಂಗಲನಿಮಿತ್ಯಶಂಕರಲಿಂಗಜ್ಜನಭಾವಚಿತ್ರಮೆರವಣಿಗೆಶನಿವಾರವಿಜೃಂಭಣೆಯಿಂದ ನೆರವೇರಿತು. ವಾದ್ಯ, ವೃಂದಗಳಿಂದ ಮೆರವಣಿಗೆಗೆ ಕಳೆ ಹೆಚ್ಚಾಗಿರುವುದುಕಂಡು ಬಂದಿತು.ಬಿ.ಎಸ್. ಪಾಟೀಲ್‌ಅವರುಕಾರ್ಯಕ್ರಮ ನಿರೂಪಿಸಿದರು.ಗ್ರಾಮದ ಹಿರಿಯರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 