ಮುತಗಾ ಬಡಾವಣೆ: ನೀರಿಗೆ ಹಾಹಾಕಾರ; ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾ.ಪಂ. ಸದಸ್ಯ ರವಿಕೊಟಬಾಗಿ ಆಗ್ರಹ
Muthaga Layout: Water woes; Gram Panchayat member Ravi Kotabagi demands to solve water problem
ಲೋಕದರ್ಶನ ವರದಿ
ಬೆಳಗಾವಿ 07: ಸಮೀಪದ ಮುತಗಾ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿನ ಮುತಗಾ ಗ್ರಾಮದ ಬಡಾವಣೆಗಳಾದ ಶ್ರೀರಾಮನಗರ ಕಾಲೋನಿ, ಸಾಯಿನಗರ, ಬಸವನಗರ, ಗೋಕುಲನಗರ, ವಿನಾಯಕ ನಗರಗಳಲ್ಲಿ ಸುಮಾರು 600 ಮನೆಗಳಿದ್ದು 2650 ಜನರು ವಾಸಿಸುತ್ತಿದ್ದಾರೆ. ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕಳೆದ 20 ದಿನಗಳಿಂದ ನೀರು ಪೂರೈಕೆಯಾಗದೇ ಇದ್ದ ಹಿನ್ನಲೆಯಲ್ಲಿ ಈ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ.
ಪರಿಸ್ಥಿತಿಯ ತೀವೃತೆ ಅರಿತಗ್ರಾಮ ಪಂಚಾಯತ್ ಸದಸ್ಯ ರವಿಕೊಟಬಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯನ್ನು ಸಂಪರ್ಕಿಸಿ ಸಮಸ್ಯೆಯ ಕುರಿತು ವಿವರಿಸಿದ ನಂತರ ಸ್ಥಳ ಪರೀಶೀಲಿಸಿದ ಸಹಾಯಕ ಅಭಿಯಂತ ಎಫ್. ಎಸ್. ಶಿವಾಪೂರ ನೀರಿನ ಪೂರೈಕೆಯ ಪೈಪಲೈನಗಳಲ್ಲಿ ಸುಮಾರು 10 ಕಡೆ ಏರ್ ವಾಲ್ವಗಳು ಒಡೆದಿದ್ದು ನೀರು ಬಹಳಷ್ಟು ಪೋಲಾಗುತ್ತಿರುವ ಹಿನ್ನಲೆಯಲ್ಲಿ ನೀರಿನ ಅಭಾವ ಉಂಟಾಗಿದೆ ಎಂದರಲ್ಲದೇ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಪೈಪಲೈನ ಅಳವಡಿಸುವಾಗಿದ್ದ ಜನಸಂಖ್ಯೆ ಈಗ ದ್ವೀಗುಣವಾಗಿರುವುದು ನೀರಿನ ಅಬಾವಕ್ಕೆ ಕಾರಣವಾಗಿದ್ದು ಪರಿಹಾರಕ್ಕಾಗಿ ಉನ್ನತ ಅಧಿಕಾರಿಗಳಗ ಮನಕ್ಕೆ ತರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಪಂಚಾಯತ್ ಸದಸ್ಯರ ವಿಕೊಟಬಾಗಿ ಜಲಜೀವನ ಮಿಷನ್ ಯೋಜನೆ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರತಿ ಗ್ರಾಮೀಣ ಕುಟುಂಬಕ್ಕೆ ನಲ್ಲಿ ಮೂಲಕ ಸುರಕ್ಷಿತ ಮತ್ತು ಸಮರ್ಕ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಿದ್ದು ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಈ ಯೋಜನೆ ನಾಗರೀಕರಿಗೆ ತಲುಪದೇ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ.
ಎಂದರಲ್ಲದೇ ಈ ಯೋಜನೆಗೆ ಸಂಬಂದಿಸಿದ ಇಲಾಖೆಯ ಅಧಿಕಾರಿಗಳು ಹಾರಿಕೆಉತ್ತರ ನೀಡಿತಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ತೀವೃವಾಗಿ ಖಂಡಿಸಿದ ಅವರು ಬಿಸಿಲು ಗಾಲ ಪ್ರಾರಂಬವಾಗಿದ್ದರಿಂದ ಈ ಪ್ರದೇಶಗಳಲ್ಲಿನ ಬೋರವೆಲ್ಗಳು ಸಹ ಖಾಲಿಯಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮತ್ತು ಜನಸಂಖ್ಯೆ ಆಧಾರಿತವಾಗಿ ಮತ್ತೊಂದು ಹೊಸದಾದ 1 ಲಕ್ಷ ಲೀಟರ ನೀರಿನ ಸಂಗ್ರಹ ಸಾಮರ್ಥ್ಯದ ಮತ್ತೊಂದು ಒವರ ಹೆಡ್ ಟ್ಯಾಂಕ್ ನಿರ್ಮಿಸುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಮಾಹಿತಿ ವರದಿ: ಆಕಾಶ್ ಅರವಿಂದಥಬಾಜ
ಶ್ರೀರಾಮನಗರ ಕಾಲೋನಿ ಮುತಗಾ 9448634208 / 9035419700
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ :
ಶ್ರೀರವಿಕೊಟಬಾಗಿ ಸದಸ್ಯರು, ಗ್ರಾಮಪಂಚಾಯತ್, ಮುತಗಾ
14 ನೇಕ್ರಾಸ್ ಶ್ರೀರಾಮನಗರಕಾಲೋನಿ, ಮುತಗಾ ಮೊ: 9845305933
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 